ಆ್ಯಪ್ನಗರ

ಮೋದಿ ನಕಲಿ ಚೌಕಿದಾರ, ಭ್ರಷ್ಟಾಚಾರದ ಭಾಗೀದಾರ

ಭ್ರಷ್ಟಾಚಾರ ಮಾಡಿ ಜೈಲಿಗೆ ಹೋಗಿ ಬಂದವರೆಲ್ಲ ಚೌಕಿದಾರರಂತೆ. ಇದೇನು ರಾಷ್ಟ್ರಪತಿ ಕೊಟ್ಟ ಬಿರುದೇ? ಭ್ರಷ್ಟರು ದೇಶಬಿಟ್ಟು ಪರಾರಿಯಾಗಲು ಕಾರಣವಾದ ಮೋದಿ ನಕಲಿ ಚೌಕಿದಾರ, ಭ್ರಷ್ಟಾಚಾರದ ಭಾಗೀದಾರ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಟುವಾಗಿ ಟೀಕಿಸಿದರು.

Vijaya Karnataka 16 Apr 2019, 5:00 am
ಚಿಕ್ಕಮಗಳೂರು: ಭ್ರಷ್ಟಾಚಾರ ಮಾಡಿ ಜೈಲಿಗೆ ಹೋಗಿ ಬಂದವರೆಲ್ಲ ಚೌಕಿದಾರರಂತೆ. ಇದೇನು ರಾಷ್ಟ್ರಪತಿ ಕೊಟ್ಟ ಬಿರುದೇ? ಭ್ರಷ್ಟರು ದೇಶಬಿಟ್ಟು ಪರಾರಿಯಾಗಲು ಕಾರಣವಾದ ಮೋದಿ ನಕಲಿ ಚೌಕಿದಾರ, ಭ್ರಷ್ಟಾಚಾರದ ಭಾಗೀದಾರ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಟುವಾಗಿ ಟೀಕಿಸಿದರು.
Vijaya Karnataka Web modi is a fake squad part of corruption
ಮೋದಿ ನಕಲಿ ಚೌಕಿದಾರ, ಭ್ರಷ್ಟಾಚಾರದ ಭಾಗೀದಾರ


ನಗರದ ವಿಜಯಪುರದ ಗಣಪತಿ ಪೆಂಡಾಲ್‌ನಲ್ಲಿ ಸೋಮವಾರ ಮೈತ್ರಿ ಪಕ್ಷದ ಅಭ್ಯರ್ಥಿ ಪ್ರಮೋದ್‌ ಮಧ್ವರಾಜ್‌ ಪರ ಆಯೋಜಿಸಿದ್ದ ಬಹಿರಂಗ ಸಮಾವೇಶದಲ್ಲಿ ಮಾತನಾಡಿದರು.

ಕೋಮುವಾದ, ಭ್ರಷ್ಟಾಚಾರಕ್ಕೆ ಕುಮ್ಮಕ್ಕು ಕೊಡುವ ಮೋದಿ ಚೌಕಿದಾರ್‌ ಹೇಗೆ ಆಗುತ್ತಾರೆ? ಭ್ರಷ್ಟಾಚಾರ ಮಾಡಿ ಜೈಲಿಗೆ ಹೋಗಿಬಂದ ಯಡಿಯೂರಪ್ಪ, ಕೃಷ್ಣಯ್ಯ ಶೆಟ್ಟಿ, ಜನಾರ್ದನ ರೆಡ್ಡಿ, ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಇವರೂ ಚೌಕಿದಾರರಂತೆ. ಇವರಿಗೆಲ್ಲ ಮಾನ, ಮರಾರ‍ಯದೆ ಇದೆಯೇ? ಮೋದಿಯಂತಹ ಢೋಂಗಿಯನ್ನು ನನ್ನ ರಾಜಕೀಯ ಜೀವನದಲ್ಲೇ ನೋಡಿಲ್ಲ. ಮೋದಿ ಮತ್ತು ಅವರ ಚೇಲಾಗಳು ದೇಶ ಆಳಲು ಅಯೋಗ್ಯರು ಎಂದರು.

ಏಕವಚನದಲ್ಲೇ ತರಾಟೆ : 2019ರ ಲೋಕಸಭೆ ಚುನಾವಣೆ ಜಗತ್ತಿನ ಗಮನ ಸೆಳೆದಿದೆ. ಇದು ಕೋಮುವಾದಿಗಳು ಮತ್ತು ಜಾತ್ಯತೀತ ಶಕ್ತಿಗಳ ನಡುವೆ ನಡೆಯುತ್ತಿರುವ ಸಂಘರ್ಷದ ಚುನಾವಣೆ. ದೇಶವನ್ನು ಕೋಮುವಾದಿಗಳ ಕೈಗೆ ಕೊಡಬೇಕಾ, ಜಾತ್ಯತೀತ ಶಕ್ತಿಗಳಿಗೆ ಕೊಡಬೇಕಾ? ಯಾರ ಕೈಗೆ ಕೊಟ್ಟರೆ ಸುರಕ್ಷಿತ ಎಂಬುದನ್ನು ಮತದಾರರು ಅರಿಯಬೇಕು. ಅಮಿತ್‌ ಶಾ ಕೂಡ ಜೈಲಿಗೆ ಹೋಗಿ ಬಂದ ಅಸಾಮಿ. ಇವರಿಗೆ ಚೌಕಿದಾರ ಎಂಬ ಬಿರುದು ಯಾರು ಕೊಟ್ಟಿದ್ದು? ಪ್ರಧಾನಿ ಸ್ಥಾನದಲ್ಲಿ ಕುಳಿತವರೆಲ್ಲರೂ ಚೌಕಿದಾರರೆ. ಆದರೆ, ಇವರು ನಕಲಿ ಚೌಕಿದಾರರು ಎಂದು ಟೀಕಿಸಿದರು.

ಸಾವಿರಾರು ಕೋಟಿ ಲೂಟಿ ಮಾಡಿ ಇವರ ಸರಕಾರದಿಂದಲೇ ವೀಸಾ, ಪಾಸ್‌ಪೋರ್ಟ್‌ ಪಡೆದು ವಿದೇಶಕ್ಕೆ ಪಲಾಯನ ಮಾಡಿದರು. ಅರುಣ್‌ ಜೇಟ್ಲಿ, ಸುಷ್ಮಾ ಸ್ವರಾಜ್‌ಗೆ ಇದು ಗೊತ್ತಿರಲಿಲ್ಲವೇ? ವಿದೇಶಕ್ಕೆ ಹೋಗುವಾಗ ಜೇಟ್ಲಿಗೆ ಹೇಳಿಬಂದೆ ಎಂದು ವಿಜಯ್‌ ಮಲ್ಯನೇ ಹೇಳಿದ್ದಾನೆ. ಹಾಗಾದರೆ ನೀನು ಯಾವ ವಾಚ್‌ಮನ್‌ ಕೆಲಸ ಮಾಡಿದೆ? ರಫೇಲ್‌ನಲ್ಲಿ 30 ಸಾವಿರ ಕೋಟಿ ಲೂಟಿ ಆಗಿದೆಯಲ್ಲ, ನಿನ್ನನ್ನು ಏನಂತ ಕರೆಯಬೇಕು ಎಂದು ಏಕವಚನದಲ್ಲೇ ತರಾಟೆಗೆ ತೆಗೆದುಕೊಂಡರು.

ಬಿಜೆಪಿಯವರು ಸತ್ಯಹರಿಶ್ಚಂದ್ರರ? : ಪ್ರಜಾತಂತ್ರ ಅಪಾಯದಲ್ಲಿದೆ. ಮೋದಿ ಕಾಲದಲ್ಲಿ ಎಲ್ಲ ಸಾಂವಿಧಾನಿಕ ಸಂಸ್ಥೆಗಳನ್ನು ಕೈಗೊಂಬೆ ಮಾಡಿಕೊಳ್ಳಲಾಗಿದೆ. ಕಾಂಗ್ರೆಸ್‌-ಜೆಡಿಎಸ್‌ನವರನ್ನೇ ಹುಡುಕಿ ಐಟಿ ದಾಳಿ ಮಾಡಲಾಗುತ್ತಿದೆ. ಆದರೆ,ಯಡಿಯೂರಪ್ಪ, ಸಿ.ಟಿ.ರವಿ ಮನೆ ಮೇಲೆ ಏಕೆ ಐಟಿ ದಾಳಿ ಮಾಡಿಲ್ಲ? ಬಿಜೆಪಿಯವರೆಲ್ಲ ಸತ್ಯಹರಿಶ್ಚಂದ್ರನ ಮೊಮ್ಮಕ್ಕಳಾ? ಸಮ್ಮಿಶ್ರ ಸರಕಾರ ಉರುಳಿಸಲು ಒಬ್ಬೊಬ್ಬ ಶಾಸಕರಿಗೆ 25-30 ಕೋಟಿ ಆಮಿಷವೊಡ್ಡಿದ್ದು ಕಪ್ಪು ಹಣವಲ್ಲವೆ? ನಾವು ಐಟಿಗೆ ದೂರು ಕೊಟ್ಟರೂ ದಾಳಿ ಮಾಡಲಿಲ್ಲ. ತೆರಿಗೆ ವಂಚಿಸಿದ ಮಾಹಿತಿ ಇದ್ದರೆ ಚುನಾವಣೆ ನಂತರ ಐಟಿ ದಾಳಿ ಮಾಡಿ. ನಾವೂ ಕಾನೂನಿಗೆ ಗೌರವ ಕೊಡುತ್ತೇವೆ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ