ಆ್ಯಪ್ನಗರ

ಶೃಂಗೇರಿ ಕಾಫಿ ಎಸ್ಟೇಟ್‌ನಲ್ಲಿ 12 ಅಡಿ ಕಾಳಿಂಗ ಸರ್ಪದ ರೋಷ ಇಳಿಸಿದ ಸ್ನೇಕ್ ಅರ್ಜುನ್!

ನ್ಯಾಷನಲ್ ಜಿಯಾಗ್ರಫಿಕ್ ಚಾನಲ್‍ನಲ್ಲಿ ಕಾಳಿಂಗ ಸರ್ಪಗಳನ್ನ ನೋಡಿ ಅಬ್ಬಾ…. ಅಬ್ಬಬ್ಬಾ…. ಭಯಂಕರ, ಭಯಾನಕ ಅಂತಿದ್ದ ಜನಸಾಮಾನ್ಯರು ಕಾಫಿನಾಡಲ್ಲಿ ಸೆರೆ ಸಿಕ್ಕಿರೋ ಕಾಳಿಂಗನನ್ನ ನೋಡುದ್ರೆ ಒಂದು ಕ್ಷಣ ಬೆಚ್ಚಿಬೀಳ್ತೀರಿ.

Vijaya Karnataka Web 20 Feb 2020, 4:49 pm
ಚಿಕ್ಕಮಗಳೂರು: ನ್ಯಾಷನಲ್ ಜಿಯಾಗ್ರಫಿಕ್ ಚಾನಲ್‍ನಲ್ಲಿ ಕಾಳಿಂಗ ಸರ್ಪಗಳನ್ನ ನೋಡಿ ಅಬ್ಬಾ…. ಅಬ್ಬಬ್ಬಾ…. ಭಯಂಕರ, ಭಯಾನಕ ಅಂತಿದ್ದ ಜನಸಾಮಾನ್ಯರು ಕಾಫಿನಾಡಲ್ಲಿ ಸೆರೆ ಸಿಕ್ಕಿರೋ ಕಾಳಿಂಗನನ್ನ ನೋಡುದ್ರೆ ಒಂದು ಕ್ಷಣ ಬೆಚ್ಚಿಬೀಳ್ತೀರಿ.

ಕಾಳಿಂಗ ಸರ್ಪದ ಉದ್ದ-ಗಾತ್ರ, ಅಬ್ಬರ-ಆರ್ಭಟ ನೋಡುದ್ರೆ ನಿಂತು ನೋಡೋರ್ಗೆ ಗುಂಡಿಗೆ ನಡುಗುತ್ತೆ. ಕಿಂಗ್ ಕೋಬ್ರಾದ ಅಬ್ಬರ-ಆರ್ಭಟದ ನಡುವೆಯೇ ಅದನ್ನು ತಣ್ಣಗೆ ಮಾಡಿ ನೇರಾನೇರ ನೀರು ಕುಡಿಸುತ್ತಾನಂದ್ರೆ ನಿಜಕ್ಕೂ ಅವನಿಗೆ ಎರಡು ಗುಂಡಿಗೆ ಇರಬೇಕು.

ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ತಾಲೂಕಿನ ತೆಕ್ಕೂರು ಗ್ರಾಮದ ಮಹೇಶ್ ಎಂಬುವರ ಕಾಫಿ ತೋಟದಲ್ಲಿ ಕಾಳಿಂಗ ಸರ್ಪವೊಂದು ಹದಿನೈದು ದಿನಗಳಿಂದ ನಿರಂತರವಾಗಿ ಕಾಣಿಸಿಕೊಳ್ತಿತ್ತು. ಕಾಳಿಂಗನನ್ನ ಕಂಡ ಕೂಲಿ ಕಾರ್ಮಿಕರು ಕೆಲಸ ಮಾಡೋದಕ್ಕೂ ಹಿಂದೇಟು ಹಾಕ್ತಿದ್ರು. ತೋಟದ ಮಾಲೀಕ ಮಹೇಶ್ ಸ್ನೇಕ್ ಅರ್ಜುನ್‍ರನ್ನ ಕರೆಸಿ ಕಾಳಿಂಗನನ್ನ ಹಿಡಿಯೋದಕ್ಕೆ ಮುಂದಾದ್ರು.

ಸ್ಥಳಕ್ಕೆ ಬಂದ ಸ್ನೇಕ್ ಅರ್ಜುನ್ ಸುಮಾರು ಒಂದು ಗಂಟೆಯ ಕಾರ್ಯಚರಣೆ ನಡೆಸಿ ಕಾಳಿಂಗನನ್ನ ಸೆರೆ ಹಿಡಿದಿದ್ದಾರೆ. ಸೆರೆಯಾದ ಕಾಳಿಂಗನನ್ನ ಕಂಡು ಕೂಲಿ ಕಾರ್ಮಿಕರು ನಿಟ್ಟುಸಿರು ಬಿಟ್ಟಿದ್ದಾರೆ. ಕಾಳಿಂಗನನ್ನ ಸೆರೆ ಹಿಡಿದ ಅರ್ಜುನ್ ಕಾಳಿಂಗನ ಎದುರಲ್ಲೇ ಕೂತು ನೀರು ಕುಡಿಸಿದ್ದಾನೆ. ಕಾಳಿಂಗ ಸರ್ಪ ಬಾಯಿ ಬಿಡೋದನ್ನ ನೋಡಿ ಕೂಲಿ ಕಾರ್ಮಿಕರೇ ಹೆದರುತ್ತಿದ್ರು. ಆದ್ರೆ, ಅರ್ಜುನ್ ಧೈರ್ಯಕ್ಕೆ ಭೇಷ್ ಅಂದಿದ್ದಾರೆ. ಕಾಳಿಂಗನನ್ನ ಸೆರೆ ಹಿಡಿದ ಅರ್ಜುನ್ ಅದನ್ನ ಸ್ಥಳಿಯ ಅರಣ್ಯಕ್ಕೆ ಬಿಟ್ಟಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ