ಆ್ಯಪ್ನಗರ

ತಾಯಿ-ಮಗು ಆಸ್ಪತ್ರೆಗೆ ಮತ್ತೆ ಪ್ರಸ್ತಾವನೆ

ಮೈಸೂರು ವಿಭಾಗ ಮಟ್ಟದಲ್ಲಿಬರುವ 48 ತಾಲೂಕು ಮಟ್ಟದ ಆಸ್ಪತ್ರೆಗಳಲ್ಲಿಕಡೂರು ಆಸ್ಪತ್ರೆ ಮೊದಲ ಸ್ಥಾನದಲ್ಲಿದೆ ಎಂದು ವಿಭಾಗೀಯ ಜಂಟಿ ನಿರ್ದೇಶಕ ಡಾ.ರಾಮಚಂದ್ರ ಬಗೀರಿ ಹೇಳಿದರು.

Vijaya Karnataka 14 Sep 2019, 5:00 am
ಕಡೂರು : ಮೈಸೂರು ವಿಭಾಗ ಮಟ್ಟದಲ್ಲಿಬರುವ 48 ತಾಲೂಕು ಮಟ್ಟದ ಆಸ್ಪತ್ರೆಗಳಲ್ಲಿಕಡೂರು ಆಸ್ಪತ್ರೆ ಮೊದಲ ಸ್ಥಾನದಲ್ಲಿದೆ ಎಂದು ವಿಭಾಗೀಯ ಜಂಟಿ ನಿರ್ದೇಶಕ ಡಾ.ರಾಮಚಂದ್ರ ಬಗೀರಿ ಹೇಳಿದರು.
Vijaya Karnataka Web 13KDR4_35


ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕ, ಹೆರಿಗೆ ವಿಭಾಗ, ವಾರ್ಡ್‌, ಶಸ್ತ್ರ ಚಿಕಿತ್ಸಾ ಕೊಠಡಿ ಸೇರಿದಂತೆ ಸಂಪೂರ್ಣ ಆಸ್ಪತ್ರೆಯನ್ನು ಸಹಾಯಕ ನಿರ್ದೇಶಕರ ಜತೆಗೂಡಿ ಗುರುವಾರ ತಪಾಸಣೆ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.100 ಹಾಸಿಗೆಯ ಈ ಆಸ್ಪತ್ರೆ ಸೇವೆಯಲ್ಲಿಉನ್ನತ ಶ್ರೇಣಿಯಲ್ಲಿದ್ದು, ನಿತ್ಯ 800ಕ್ಕೂ ಹೆಚ್ಚು ಹೊರ ರೋಗಿಗಳು ತಪಾಸಣೆಗಾಗಿ ಬರುತ್ತಿದ್ದಾರೆ. ಶೇ. 90ಕ್ಕಿಂತ ಹೆಚ್ಚು ಒಳ ರೋಗಿಗಳು ದಾಖಲಾಗಿದ್ದು, ಶಸ್ತ್ರ ಚಿಕಿತ್ಸೆ, ಕಣ್ಣು, ಮೂಳೆ, ಹೆರಿಗೆ ಮುಂತಾದ ವಿಭಾಗಗಳಲ್ಲಿಉತ್ತಮ ಸೇವೆ ದೊರೆಯುತ್ತಿದೆ ಎಂದು ಹೇಳಿದರು.

ಕಡೂರು ಪಟ್ಟಣಕ್ಕೆ ತಾಯಿ-ಮಗು ಆಸ್ಪತ್ರೆ ಈ ಹಿಂದಿನ ಶಾಸಕರ ಅವಧಿಯಲ್ಲಿಮಂಜೂರಾಗಿ ಜಾಗದ ಕೊರತೆಯಿಂದ ವಾಪಸು ಹೋಗಿತ್ತು. ಇಲ್ಲಿನ ಹೆರಿಗೆ ಪ್ರಕರಣಗಳನ್ನು ಗಮನಿಸಿದಾಗ ಈ ಆಸ್ಪತ್ರೆ ಅಗತ್ಯವಿದ್ದು, ಮತ್ತೊಮ್ಮೆ ಪ್ರಸ್ತಾವನೆ ಸಲ್ಲಿಸುವುದು ಹಾಗೂ ಸೂಕ್ತ ಜಾಗವನ್ನು ನೀಡಿದರೆ ತಾಯಿ-ಮಗು ಆಸ್ಪತ್ರೆ ಮಂಜೂರಾತಿಗೆ ಯತ್ನಿಸಲಾಗುವುದು ಎಂದರು.

ಆಸ್ಪತ್ರೆಯಲ್ಲಿಡಯಾಲಿಸಿಸ್‌ ಘಟಕವಿದ್ದು, ಇದರಲ್ಲಿಕೇವಲ ಎರಡು ಯಂತ್ರಗಳು ಇವೆ. ತಿಂಗಳಿಗೆ 18 ರೋಗಿಗಳು ಡಯಾಲಿಸಿಸ್‌ಗೆ ಒಳಪಡುತ್ತಿದ್ದಾರೆ. ಐದು ರೋಗಿಗಳು ಕಾಯ್ದಿರಿಸಿಕೊಂಡಿದ್ದಾರೆ. ಮತ್ತೊಂದು ಡಯಾಲಿಸಿಸ್‌ ಯಂತ್ರಕ್ಕೆ ಬೇಡಿಕೆ ಪ್ರಸ್ತಾವನೆ ಸಲ್ಲಿಸುವಂತೆ ಹಾಜರಿದ್ದ ಆಡಳಿತ ವೈದ್ಯಾಧಿಕಾರಿ ಡಾ. ಉಮೇಶ್‌ ಅವರಿಗೆ ಸೂಚಿಸಿದರು.

ಸಹಾಯಕ ನಿರ್ದೇಶಕ ಡಾ. ಪ್ರಸಾದ್‌, ಜಿಲ್ಲಾನೋಡಲ್‌ ಅಧಿಕಾರಿ ಡಾ. ರಂಗಸ್ವಾಮಿ, ಸಹಾಯಕ ನಿರ್ದೇಶಕ ಡಾ. ಎಚ್‌. ರಾಮಚಂದ್ರ, ತಾಲೂಕು ವೈದ್ಯಾಧಿಕಾರಿ ಡಾ. ಗುರುಮೂರ್ತಿ, ಆಡಿತ ವೈದಾಧಿಕಾರಿ ಡಾ. ಉಮೇಶ್‌, ಅರವಳಿಕೆ ತಜ್ಞ ಡಾ. ಹೆಚ್‌.ಎಸ್‌. ಮೋಹನ್‌, ಡಾ. ಎಸ್‌.ವಿ. ದೀಪಕ್‌ ಹಾಜರಿದ್ದರು. ಇದೇ ಸಂದರ್ಭ ಜಂಟಿ ನಿರ್ದೇಶಕ ಡಾ. ರಾಮಚಂದ್ರ ಬಗಿರಿ ಅವರು ರೋಟಾ ವೈರಸ್‌ ಲಸಿಕಾ ಕಾರ್ಯಕ್ರಮಕ್ಕೆಚಾಲನೆ ನೀಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ