ಆ್ಯಪ್ನಗರ

ಮೂಡಿಗೆರೆ ವೈದ್ಯರಿಗೆ ರೋಗಿಯಿಂದ ಹರಡಿದ ಕೊರೊನಾ ಸೋಂಕು‌?

ಗ್ರೀನ್‌ ಝೋನ್‌ ಆಗಿದ್ದ ಚಿಕ್ಕಮಗಳೂರು ಜಿಲ್ಲೆಗೆ ಮಂಗಳವಾರವಷ್ಟೇ ಕೊರೊನಾ ವೈರಸ್‌ ಸೋಂಕು ಪತ್ತೆಯಾಗಿತ್ತು. ಈ ಪೈಕಿ ಮೂಡಿಗೆರೆಯ ವೈದ್ಯರಿಗೆ ಸೋಂಕು ಪತ್ತೆಯಾಗಿದ್ದು, ರೋಗಿಯಿಂದ ಇವರಿಗೆ ಸೋಂಕು ಹರಡಿರಬಹುದಾ ಎಂಬ ಅನುಮಾನ ವ್ಯಕ್ತವಾಗಿದೆ.

Vijaya Karnataka Web 20 May 2020, 12:27 pm
ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ವೈದ್ಯರಿಗೆ ರೋಗಿಯಿಂದ ಕೊರೊನಾ ಸೋಂಕು ಹರಡಿದೆ ಎಂಬ ಅನುಮಾನ ವ್ಯಕ್ತವಾಗಿದೆ. ವೈದ್ಯಾಧಿಕಾರಿ ಬಳಿ ಚಿಕಿತ್ಸೆ ಪಡೆಯಲು ಬಂದ ರೋಗಿಯಿಂದಲೇ ಡಾಕ್ಟರ್‌ಗೆ ಸೋಂಕು ತಗುಲಿರುವ ಸಾಧ್ಯತೆ ಇದೆ.
Vijaya Karnataka Web coronavirus vk 12


ಈಗಾಗಲೇ ವೈದ್ಯರ ಜೊತೆ ಕೆಲಸ ನಿರ್ವಹಿಸಿರುವ ನರ್ಸ್, ಡಾಕ್ಟರ್‌ಗಳನ್ನು ಜಿಲ್ಲಾಡಳಿತ ಪರೀಕ್ಷೆ ನಡೆಸಿದೆ. ವೈದ್ಯರ ಜೊತೆ ಕರ್ತವ್ಯದ ವೇಳೆ ನಿತ್ಯ ಸಂಪರ್ಕದಲ್ಲಿದ್ದವರ ಪರೀಕ್ಷೆ ನಡೆಸಲಾಗಿದ್ದು, 10ಕ್ಕೂ ಹೆಚ್ಚು ಮಂದಿಯ ವರದಿ ನೆಗೆಟಿವ್ ಬಂದಿದೆ ಎಂದು ತಿಳಿದುಬಂದಿದೆ.

ವೈದ್ಯರಿಂದ ಬೇರೆಯವರಿಗೆ ಸೋಂಕು ತಗುಲಿರುವ ಸಾಧ್ಯತೆ ತೀರಾ ಕಡಿಮೆ ಎನ್ನಲಾಗುತ್ತಿದೆ. ಇನ್ನೊಂದೆಡೆ, ಶೀತ, ಜ್ವರ, ಕೆಮ್ಮು ಸೇರಿದಂತೆ ಯಾವುದೇ ರೋಗ ಲಕ್ಷಣಗಳಿಲ್ಲದೇ ಆರೋಗ್ಯವಾಗಿದ್ದರು. ಅಲ್ಲದೆ, ಕಳೆದ 2 ವಾರದಲ್ಲಿ 700ಕ್ಕೂ ಹೆಚ್ಚು ಜನರಿಗೆ ವೈದ್ಯ ಚಿಕಿತ್ಸೆ ನೀಡಿದ್ದರು ಎಂದು ತಿಳಿದುಬಂದಿದ್ದು, ಚಿಕಿತ್ಸೆ ನೀಡಲು ಹೋಗಿ ವೈದ್ಯರು ಎಡವಟ್ಟು ಮಾಡಿಕೊಂಡ್ರಾ ಎಂಬ ಮಾತುಗಳು ಕೇಳಿಬರುತ್ತಿವೆ.

ಗ್ರೀನ್‌ ಝೋನ್‌ ಚಿಕ್ಕಮಗಳೂರಿಗೂ ಎಂಟ್ರಿ ಕೊಟ್ಟ ಕೊರೊನಾ: ವೈದ್ಯಾಧಿಕಾರಿಗೆ ಸೋಂಕು!

ಮೂಡಿಗೆರೆ ಪಟ್ಟಣದಲ್ಲಿ ಕೊರೊನಾ ಭೀತಿ ಮನೆ ಮಾಡಿದ್ದು, ವೈದ್ಯಾಧಿಕಾರಿಗೆ ಕೊರೊನಾ ವೈರಸ್ ಪಾಸಿಟಿವ್‌ ಬಂದಿರುವ ಕಾರಣ, ತಾಲ್ಲೂಕಿನಾದ್ಯಂತ ಜನರು, ಚಿಕಿತ್ಸೆ ಪಡೆದ ರೋಗಿಗಳು ಆತಂಕಕ್ಕೆ ಸಿಲುಕಿದ್ದಾರೆ. ವೈದ್ಯರ ಜೊತೆಗೆ ಸಂಪರ್ಕದಲ್ಲಿದ್ದ ಬರೋಬ್ಬರಿ 795 ಜನರನ್ನು ಪತ್ತೆ ಮಾಡಲಾಗಿದ್ದು, ಎಲ್ಲರಿಗೂ ಕ್ವಾರಂಟೈನ್ ವಿಧಿಸಲಾಗಿದೆ ಎಂದು ತಿಳಿದುಬಂದಿದೆ.

ಕಾಫಿ ನಾಡಿಗೆ ಶಾಕ್‌ ನೀಡಿದ ಮುಂಬಯಿ: ಒಂದೇ ದಿನ ಐವರಲ್ಲಿ ಕೊರೊನಾ ಸೋಂಕು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ