ಆ್ಯಪ್ನಗರ

ಮೂಡಿಗೆರೆ ತಾ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ರಾಗಿ ದೇವರಾಜು

ತಾ.ಪಂ. ಕಚೇರಿಯಲ್ಲಿ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಸೋಮವಾರ ನಡೆದ ಚುನಾವಣೆಯಲ್ಲಿ ಬಣಕಲ್‌ ಹೋಬಳಿ ತ್ರಿಪುರ ತಾ.ಪಂ. ಕ್ಷೇತ್ರದ ಸದಸ್ಯ ಬಿ.ಎಲ್‌.ದೇವರಾಜು ಸರ್ವಾನುಮತದಿಂದ ಆಯ್ಕೆಯಾದರು.

Vijaya Karnataka 30 Jul 2019, 5:00 am
ಮೂಡಿಗೆರೆ : ತಾ.ಪಂ. ಕಚೇರಿಯಲ್ಲಿ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಸೋಮವಾರ ನಡೆದ ಚುನಾವಣೆಯಲ್ಲಿ ಬಣಕಲ್‌ ಹೋಬಳಿ ತ್ರಿಪುರ ತಾ.ಪಂ. ಕ್ಷೇತ್ರದ ಸದಸ್ಯ ಬಿ.ಎಲ್‌.ದೇವರಾಜು ಸರ್ವಾನುಮತದಿಂದ ಆಯ್ಕೆಯಾದರು.
Vijaya Karnataka Web CKM-29MDG-P1


ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷರಾಗಿದ್ದ ಸುಂದರ್‌ ಕುಮಾರ್‌ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಚುನಾವಣೆ ನಡೆಯಿತು.

ಅಧ್ಯಕ್ಷತೆ ವಹಿಸಿದ್ದ ತಾ.ಪಂ. ಅಧ್ಯಕ್ಷ ಕೆ.ಸಿ.ರತನ್‌ ಮಾತನಾಡಿ, ತಾ.ಪಂ. ಉಪಾಧ್ಯಕ್ಷರಾಗಿದ್ದ ಸವಿತಾ ರಮೇಶ್‌, ಈ ಹಿಂದೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅವರ ರಾಜೀನಾಮೆ ಜು.22ರಂದು ಅಂಗೀಕಾರಗೊಂಡಿದೆ ಎಂದರು.

ತಾ.ಪಂ. ವ್ಯಾಪ್ತಿಯಲ್ಲಿ ಸದಸ್ಯರು ಒಗ್ಗೂಡಿಕೊಂಡು ಕೆಲಸ ಮಾಡಿದ್ದರಿಂದ ತಾಲೂಕಿನಲ್ಲಿದ್ದ ಅನೇಕ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಾಗಿದೆ ಎಂದು ಹೇಳಿದರು.

ನೂತನ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಎಲ್‌.ದೇವರಾಜು ಮಾತನಾಡಿ, ತಾ.ಪಂ. ಅಧ್ಯಕ್ಷ ರು ಹಾಗೂ ಎಲ್ಲ ಸದಸ್ಯರ ಕಾರ್ಯವೈಖರಿಯಿಂದ ಜನರ ಅನೇಕ ಸಮಸ್ಯೆಗಳಿಗೆ ಮುಕ್ತಿ ಸಿಕ್ಕಂತಾಗಿದೆ. ಜನರ ಸೇವೆ ಮಾಡಲು ಪದವಿ ಮುಖ್ಯವಲ್ಲ. ಸೇವಾ ಮನೋಭಾವನೆ ಇರಬೇಕು ಎಂದರು.

ನಂತರ ನೂತನ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಎಲ್‌.ದೇವರಾಜು ಅವರನ್ನು ಜಿ.ಪಂ, ತಾ.ಪಂ. ಸದಸ್ಯರು ಹಾಗೂ ಬಿಜೆಪಿ ಮುಖಂಡರು ಅಭಿನಂದಿಸಿದರು.

ಜಿ.ಪಂ. ಸದಸ್ಯರಾದ ಅಮಿತಾ ಮುತ್ತಪ್ಪ, ಸುಧಾ ಯೋಗೇಶ್‌, ತಾ.ಪಂ. ಉಪಾಧ್ಯಕ್ಷೆ ಸವಿತಾ ರಮೇಶ್‌, ಸದಸ್ಯರಾದ ವೀಣಾ ಉಮೇಶ್‌, ಭಾರತೀ ರವೀಂದ್ರ, ಪ್ರಮೀಳ, ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಸುಂದರ್‌ ಕುಮಾರ್‌, ತಾ.ಪಂ. ಇಒ ವೆಂ.ವೆಂಕಟೇಶ್‌ ಮತ್ತಿತರರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ