ಆ್ಯಪ್ನಗರ

ಶುದ್ಧ ನೀರು ಪೂರೈಸದಿದ್ದರೆ ನಗರಸಭೆಗ ಮುತ್ತಿಗೆ

ನಗರಕ್ಕೆ ಶುದ್ಧ ಕುಡಿವ ನೀರು ಪೂರೈಕೆ ಮಾಡಲು ನೀರು ಶುದ್ಧೀಕರಣ ಘಟಕ ಸ್ವಚ್ಛಗೊಳಿಸುವುದು, ಒಳಚರಂಡಿ ನೀರು ಯಗಚಿಗೆ ಬಿಡದಿರುವುದು, ಬೋರ್‌ವೆಲ್‌ ರಿಪೇರಿ ಮತ್ತಿತರೆ ಸಮಸ್ಯೆಗಳನ್ನು ಇನ್ನು 15 ದಿನದಲ್ಲಿ ಬಗೆಹರಿಸದಿದ್ದರೆ ನಗರಸಭೆಗೆ ಮುತ್ತಿಗೆ ಹಾಕಲಾಗುವುದು ಎಂದು ನಾಗರೀಕ ಹಕ್ಕು ಹೋರಾಟ ವೇದಿಕೆ ಎಚ್ಚರಿಸಿದೆ.

Vijaya Karnataka 30 May 2019, 5:00 am
ಚಿಕ್ಕಮಗಳೂರು : ನಗರಕ್ಕೆ ಶುದ್ಧ ಕುಡಿವ ನೀರು ಪೂರೈಕೆ ಮಾಡಲು ನೀರು ಶುದ್ಧೀಕರಣ ಘಟಕ ಸ್ವಚ್ಛಗೊಳಿಸುವುದು, ಒಳಚರಂಡಿ ನೀರು ಯಗಚಿಗೆ ಬಿಡದಿರುವುದು, ಬೋರ್‌ವೆಲ್‌ ರಿಪೇರಿ ಮತ್ತಿತರೆ ಸಮಸ್ಯೆಗಳನ್ನು ಇನ್ನು 15 ದಿನದಲ್ಲಿ ಬಗೆಹರಿಸದಿದ್ದರೆ ನಗರಸಭೆಗೆ ಮುತ್ತಿಗೆ ಹಾಕಲಾಗುವುದು ಎಂದು ನಾಗರೀಕ ಹಕ್ಕು ಹೋರಾಟ ವೇದಿಕೆ ಎಚ್ಚರಿಸಿದೆ.
Vijaya Karnataka Web municipality sieges if clean water is not supplied
ಶುದ್ಧ ನೀರು ಪೂರೈಸದಿದ್ದರೆ ನಗರಸಭೆಗ ಮುತ್ತಿಗೆ


ವೇದಿಕೆಯ ಸಂಚಾಲಕ ವಿಜಯ್‌ಕುಮಾರ್‌ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹಿರೇಕೊಳಲೆ ನೀರನ್ನು 2 ತಿಂಗಳೊಳಗಾಗಿ ಶುದ್ಧಗೊಳಿಸಿ ಪೂರೈಸಲಾಗುವುದು ಎಂದು ನಗರಸಭೆ ನೀಡಿದ್ದ ಭರವಸೆ ಹುಸಿಯಾಗಿದೆ. ಯಗಚಿ ಹಳ್ಳ ಸೇರುವ ಕೊಳಚೆ ನೀರನ್ನು ತಡೆಗಟ್ಟಲು ಬದಲಿ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಲಾಗಿತ್ತು. ಆದರೆ, ಇದುವರೆಗೂ ಹಿರೇಕೊಳಲೆ ನೀರನ್ನು ಶುದ್ಧೀಕರಿಸಲಿಲ್ಲ. ನೀರು ಶುದ್ಧೀಕರಣ ಘಟಕದ ಕೆಲಸ ಆಮೆಗತಿಯಲ್ಲಿ ಸಾಗುತ್ತಿದೆ. ಈ ಮಧ್ಯೆ ಖಾಸಗಿ ಟ್ಯಾಂಕರ್‌ ಮೂಲಕ ನಗರಕ್ಕೆ ನೀರು ಪೂರೈಕೆ ಮಾಡುತ್ತಿದ್ದು ಆ ನೀರು ಯಾರ ಮನೆಗೆ ಹೋಗುತ್ತದೆ ಎಂಬುದೇ ತಿಳಿಯುತ್ತಿಲ್ಲ.ಟ್ಯಾಂಕರ್‌ ಬಲಾಢ್ಯರ ಮನೆಗೆ ಹೆಚ್ಚು ಹೋಗುತ್ತಿದೆ ಎಂಬ ದೂರಿದ್ದು ನಗರಸಭೆಯ ಬ್ಯಾನರ್‌ ಹಾಕಿ ನೀರು ಪೂರೈಸಬೇಕು ಎಂದು ಆಗ್ರಹಿಸಿದರು.

ನಗರದಲ್ಲಿ ಒಳಚರಂಡಿ ಕಾಮಗಾರಿ ಆದಾಗ ಜನತೆ ಅನುಭವಿಸಿದ ನರಕಯಾತನೆ ಇನ್ನು ಮಾಸುವ ಮುನ್ನವೇ ಮತ್ತೆ ಅಮೃತ್‌ ಯೋಜನೆ ಕಾಮಗಾರಿಗಾಗಿ ರಸ್ತೆ ಅಗೆದು ಗುಂಡಿ ಮಾಡಲಾಗಿದೆ. ಹಲವಾರು ಮನೆಯ ಶೌಚದ ನೀರು ಚರಂಡಿಯಲ್ಲಿ ಹರಿಯುತ್ತಿದ್ದು ಅದು ಯಗಚಿ ಸೇರುತ್ತಿದೆ. ನಗರದಲ್ಲಿ ನೀರುಗಂಟಿಗಳ ಸಂಖ್ಯೆ ತುಂಬಾ ಕಡಿಮೆಯಿದ್ದು ಕೂಡಲೇ ಹುದ್ದೆ ಭರ್ತಿ ಮಾಡುವುದು ಇಂತಹ ಸಮಸ್ಯೆಗಳನ್ನು ನಗರಸಭೆ ಗಮನಕ್ಕೆ ತಂದರೂ ಯಾವುದೇ ಕ್ರಮಕೈಗೊಳ್ಳದಿರುವುದು ನಮ್ಮ ಹೋರಾಟಕ್ಕೆ ಕಾರಣವಾಗಿದೆ ಎಂದರು.

ನಮ್ಮದೂ ಅಳಿಲು ಸೇವೆ : ನಾಗರೀಕ ಹಕ್ಕು ಹೋರಾಟ ವೇದಿಕೆಯಿಂದ ನಾಗರೀಕರ ಕುಡಿವ ನೀರಿಗೆ ಸ್ಪಂದಿಸಲು ಒಂದು ಕುಡಿವ ನೀರಿನ ಟ್ಯಾಂಕರ್‌ನಲ್ಲಿ ನೀರು ಪೂರೈಸಲು ಜೂ.5 ರಿಂದ ನಿರ್ಧರಿಸಿದ್ದೇವೆ. ಅಗತ್ಯವಿದ್ದವರು ಕರೆ ಮಾಡಿದರೆ ನೀರು ಕೊಡುತ್ತೇವೆ. ಇದರ ಸದುಪಯೋಗವನ್ನು ಜನತೆ ಪಡೆದುಕೊಳ್ಳಬೇಕು ಎಂದರು. ವೇದಿಕೆಯ ಸಂಚಾಲಕರಾದ ನಿವೃತ್ತ ಪ್ರಾಚಾರ್ಯ ಗಫಾರ್‌ಬೇಗ್‌, ನಾಗಪ್ಪ, ಇರ್ಷಾದ್‌, ನಾಗರಾಜು, ಬಷೀರ್‌, ವಾಸು ಮತ್ತಿತರರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ