ಆ್ಯಪ್ನಗರ

ಹಳುವಳ್ಳಿ, ಕಳಸದಲ್ಲಿ ನಾಗಪೂಜೆ

ನಾಗದೇವರ ದೇವಸ್ಥಾನವೆಂದೆ ಪ್ರಸಿದ್ಧಿ ಪಡೆದ ಭದ್ರಾ ನದಿ ದಡದಲ್ಲಿ ನೆಲೆನಿಂತ ಪುರಾಣ ಪ್ರಸಿದ್ಧ ಹಳುವಳ್ಳಿ ಶ್ರೀಮಹಾಗಣೇಶ್ವರ ಸಮೇತ ಸುಬ್ರಹ್ಮಣೈಶ್ವರ ದೇವಸ್ಥಾನದಲ್ಲಿ ಸುರಿಯುತ್ತಿರುವ ಮಳೆಯನ್ನು ಲೆಕ್ಕಿಸದೆ ಸೋಮವಾರ ಬೆಳಗ್ಗೆಯಿಂದಲೇ ಸಾವಿರಾರು ಜನ ಭಕ್ತರು ಪೂಜೆ ಸಲ್ಲಿಸಿದರು.

Vijaya Karnataka 6 Aug 2019, 5:00 am
ಕಳಸ : ನಾಗದೇವರ ದೇವಸ್ಥಾನವೆಂದೆ ಪ್ರಸಿದ್ಧಿ ಪಡೆದ ಭದ್ರಾ ನದಿ ದಡದಲ್ಲಿ ನೆಲೆನಿಂತ ಪುರಾಣ ಪ್ರಸಿದ್ಧ ಹಳುವಳ್ಳಿ ಶ್ರೀಮಹಾಗಣೇಶ್ವರ ಸಮೇತ ಸುಬ್ರಹ್ಮಣೈಶ್ವರ ದೇವಸ್ಥಾನದಲ್ಲಿ ಸುರಿಯುತ್ತಿರುವ ಮಳೆಯನ್ನು ಲೆಕ್ಕಿಸದೆ ಸೋಮವಾರ ಬೆಳಗ್ಗೆಯಿಂದಲೇ ಸಾವಿರಾರು ಜನ ಭಕ್ತರು ಪೂಜೆ ಸಲ್ಲಿಸಿದರು.
Vijaya Karnataka Web CKM-5kls1


ದೇವಸ್ಥಾನದ ನಾಗ ಬನಕ್ಕೆ ಭೇಟಿ ನೀಡಿದ ಭಕ್ತಾದಿಗಳು ಸರತಿ ಸಾಲಿನಲ್ಲಿ ನಿಂತು ನಾಗ ಶಿಲೆಗಳಿಗೆ ಹಾಲು,ಎಳೆನೀರು ಅರ್ಪಿಸಿ ತಮ್ಮ ಇಷ್ಟಾರ್ಥಕ್ಕಾಗಿ ಪ್ರಾರ್ಥಿಸಿಕೊಂಡರು.

ಭಕ್ತಾದಿಗಳು ದೇವಸ್ಥಾನಕ್ಕೆ ಭೇಟಿ ನೀಡಿ ತಾವು ಕಷ್ಟಕಾಲಕ್ಕೆ ಹೇಳಿಕೊಂಡ ಹರಕೆಯಂತೆ ಬೆಳ್ಳಿ ಹಾವಿನ ಹೆಡೆ,ಮೊಟ್ಟೆ, ನರ,ತೊಟ್ಟಿಲು ಇತ್ಯಾದಿಗಳನ್ನು ಹರಕೆ ರೂಪದಲ್ಲಿ ದೇವರಿಗೆ ಸಲ್ಲಿಸಿದರು.

ನಾಗ ಪಂಚಮಿ ಅಂಗವಾಗಿ ಕಲಶೇಶ್ವರ ದೇವಸ್ಥಾನದ ನಾಗ ಬನದಲ್ಲೂ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ನಾಗ ಶಿಲೆಗೆ ಹಾಲೆರೆದರು.

ಇನ್ನು ಕೆಲವೆಡೆ ನಾಗಬನವಿರುವ ಕುಟುಂಬದ ಮನೆ ಮನೆಗಳಲ್ಲೂ ನಾಗನ ಶಿಲೆಗೆ ಕುಟುಂಬಸ್ಥರು ಸೇರಿ ಹಾಲೆರೆದು ಪ್ರಾರ್ಥಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ