ಆ್ಯಪ್ನಗರ

ನಾರಾಯಣ ಗುರು ಜಯಂತಿಗೆ ಕುಲಗುರು ಆಹ್ವಾನಕ್ಕೆ ಆಗ್ರಹ

ನಾರಾಯಣ ಗುರು ಜಯಂತಿ ಆಚರಣೆ ಸಮಾರಂಭಕ್ಕೆ ಕುಲ ಗುರುವನ್ನು ಆಹ್ವಾನಿಸದೆ ಕಡೆಗಣಿಸಿದ್ದು, ಶ್ರೀ ರೇಣುಕಾನಂದ ಸ್ವಾಮೀಜಿ ಅವರನ್ನು ಸಮಾರಂಭಕ್ಕೆ ಆಹ್ವಾನಿಸಬೇಕು ಎಂದು ಒತ್ತಾಯಿಸಿ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಗುರುವಾರ ಮನವಿ ಸಲ್ಲಿಸಲಾಯಿತು.

Vijaya Karnataka 24 Aug 2018, 5:00 am
ಚಿಕ್ಕಮಗಳೂರು : ನಾರಾಯಣ ಗುರು ಜಯಂತಿ ಆಚರಣೆ ಸಮಾರಂಭಕ್ಕೆ ಕುಲ ಗುರುವನ್ನು ಆಹ್ವಾನಿಸದೆ ಕಡೆಗಣಿಸಿದ್ದು, ಶ್ರೀ ರೇಣುಕಾನಂದ ಸ್ವಾಮೀಜಿ ಅವರನ್ನು ಸಮಾರಂಭಕ್ಕೆ ಆಹ್ವಾನಿಸಬೇಕು ಎಂದು ಒತ್ತಾಯಿಸಿ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಗುರುವಾರ ಮನವಿ ಸಲ್ಲಿಸಲಾಯಿತು.
Vijaya Karnataka Web narayan guru jayanti is demanding kulagu invitation
ನಾರಾಯಣ ಗುರು ಜಯಂತಿಗೆ ಕುಲಗುರು ಆಹ್ವಾನಕ್ಕೆ ಆಗ್ರಹ


ಜಿಲ್ಲಾ ಆರ‍್ಯ ಈಡಿಗ ಸಂಘದ ಅಧ್ಯಕ್ಷ ಎಂ.ಸಿ.ಚೋಯಿ, ಜಿಲ್ಲಾ ಬಿಲ್ಲವ ಸಂಘದ ಅಧ್ಯಕ್ಷ ಕೆ.ರಾಜು, ನಾರಾಯಣಗುರು ಸಮಿತಿ ಅಧ್ಯಕ್ಷ ಕೃಷ್ಣಪ್ಪ, ಮುಖಂಡ ಬಿ.ರಾಜಪ್ಪ ಮತ್ತಿತರರು ಮನವಿ ಸಲ್ಲಿಸಿದ್ದು, ಕುಲಗುರುವನ್ನು ಆಹ್ವಾನಿಸದಿದ್ದರೆ ಹೋರಾಟ ರೂಪಿಸುವುದಾಗಿ ಎಚ್ಚರಿಸಿದ್ದಾರೆ.

ಸರಕಾರ ಕಳೆದ 3 ವರ್ಷದಿಂದ ನಾರಾಯಣ ಗುರು ಜಯಂತಿ ಆಚರಿಸುತ್ತಿರುವುದು ಸ್ವಾಗತಾರ್ಹ. ರಾಜ್ಯಾದ್ಯಂತ ಶ್ರೀ ರೇಣುಕಾನಂದ ಸ್ವಾಮೀಜಿಯವರನ್ನು ಈಡಿಗ ಸಮುದಾಯದ ಕುಲಗುರು ಎಂದು ಒಪ್ಪಿಕೊಂಡು ಗೌರವಿಸಲಾಗುತ್ತಿದೆ. ಆ.27ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿರುವ ಸಮಾರಂಭಕ್ಕೆ ಸ್ವಾಮೀಜಿಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಪತ್ರ ಬರೆದು ಆಹ್ವಾನಿಸಲಾಗಿದೆ. ಆದರೆ, ಆಹ್ವಾನ ಪತ್ರಿಕೆಯಲ್ಲಿ ಸ್ವಾಮೀಜಿಯ ಹೆಸರು ಹಾಕದೆ ಸಮುದಾಯಕ್ಕೆ ಅವಮಾನ ಮಾಡಲಾಗಿದೆ ಎಂದು ದೂರಿದ್ದಾರೆ.

ರಾಜ್ಯ ಆರ‍್ಯ ಈಡಿಗ ಸಮುದಾಯದ ಕುಲ ಗುರುಗಳನ್ನು ಕಡೆಗಗಣಿಸಿ ಹೊರ ರಾಜ್ಯದ ಸ್ವಾಮೀಜಿಗಳನ್ನು ಆಹ್ವಾನಿಸಲಾಗಿದೆ. ನಾರಾಯಣ ಗುರು ಜಯಂತಿ ಆಚರಿಸಲು ಒತ್ತಡ ಹಾಕಿದವರಲ್ಲಿ ಶ್ರೀ ರೇಣುಕಾನಂದ ಸ್ವಾಮೀಜಿ ಪ್ರಮುಖರು. ಸರಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ಆಹ್ವಾನ ಪತ್ರಿಕೆಯಲ್ಲಿ ಸ್ವಾಮೀಜಿಯ ಹೆಸರು ಹಾಕಿಸಬೇಕು. ಇಲ್ಲದಿದ್ದರೆ ಹೋರಾಟ ರೂಪಿಸಲಾಗುತ್ತದೆ ಎಂದು ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ