ಆ್ಯಪ್ನಗರ

ಪ್ರಕೃತಿಯೇ ಕಣ್ಣಿಗೆ ಕಾಣುವ ದೇವರು

ಗುಡ್ಡ,ಬೆಟ್ಟ, ಪ್ರಕೃತಿ, ಗಿಡ,ಮರಗಳಲ್ಲೂ ದೇವರಿದ್ದು ಭಕ್ತಿಯಿಂದ ನಮಸ್ಕಾರ ಮಾಡಿದರೆ ಕಲ್ಲಿನಲ್ಲೂ ದೇವರನ್ನು ಕಾಣಬಹುದು ಎಂದು ಧಾರ್ಮಿಕ ಚಿಂತಕ ಅರವಿಂದ ಸೋಮಯಾಜಿ ಅಭಿಪ್ರಾಯಪಟ್ಟರು.

Vijaya Karnataka 6 Jan 2019, 5:00 am
ನರಸಿಂಹರಾಜಪುರ : ಗುಡ್ಡ,ಬೆಟ್ಟ, ಪ್ರಕೃತಿ, ಗಿಡ,ಮರಗಳಲ್ಲೂ ದೇವರಿದ್ದು ಭಕ್ತಿಯಿಂದ ನಮಸ್ಕಾರ ಮಾಡಿದರೆ ಕಲ್ಲಿನಲ್ಲೂ ದೇವರನ್ನು ಕಾಣಬಹುದು ಎಂದು ಧಾರ್ಮಿಕ ಚಿಂತಕ ಅರವಿಂದ ಸೋಮಯಾಜಿ ಅಭಿಪ್ರಾಯಪಟ್ಟರು.
Vijaya Karnataka Web CKM-5nrp4


ಅವರು ಶನಿವಾರ ಕುದುರೆಗುಂಡಿಯ ಕಪಿಲಾ ತಡದಲ್ಲಿರುವ ಕಪಿಲೇಶ್ವರ ಸ್ವಾಮಿಯ ಸಾನ್ನಿದ್ಯದಲ್ಲಿ ಕಪಿಲಾ ಜಾತ್ರೆಯ ಪ್ರಯಕ್ತ ನಡೆದ ಧಾರ್ಮಿಕ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.ಕೆಲವರು ದೇವರು,ಧರ್ಮವನ್ನು ಮೂಢನಂಬಿಕೆ ಎನ್ನುತ್ತಾರೆ. ಆದರೆ,ಹುಣ್ಣಿಮೆ, ಅಮಾವಾಸ್ಯೆ,ಹಗಲು, ರಾತ್ರಿಗಳು ನಿರ್ದಿಷ್ಟ ಸಮಯದಲ್ಲೇ ನಡೆಯುತ್ತದೆ.ಇದರ ಹಿಂದೆ ಒಂದು ಶಕ್ತಿ ಇರಲೇಬೇಕು.ವಿಜ್ಞಾನದಲ್ಲಿ ನೀಡದ ಉತ್ತರವನ್ನು ನಮ್ಮ ಅಜ್ಜ,ಅಜ್ಜಿಯಿಂದಿರು ಕರಾರುವಕ್ಕಾಗಿ ಹೇಳುತ್ತಾರೆ.ಯಾರೂ ಧಾರ್ಮಿಕ ನಂಬಿಕೆಯನ್ನು ಕೆಣಕಲು ಹೋಗಬಾರದು ಎಂದರು.

ಮಂಡಗಾರು ಜನಾರ್ದನ ಉಪನ್ಯಾಸ ನೀಡಿ, ಭಗವಂತನ ಸ್ಮರಣೆ ಮಾಡಿದರೆ ನಮಗೆ ಸಂಪತ್ತು ಸಿಗಲಿದೆ.ಭಗವಂತನ ಸ್ಮರಣೆ ಮಾಡದೆ ಇದ್ದವರಿಗೆ ಆಪತ್ತು ಲಭಿಸಲಿದೆ.ಪ್ರತಿಯೊಬ್ಬರೂ ತಮ್ಮ ತಂದೆ, ತಾಯಿಯನ್ನು ಗೌರವಿಸಿ ಪೂಜಿಸಬೇಕು.ಕಾಮ,ಕ್ರೋದ,ಮತ್ಸರವನ್ನು ತ್ಯಜಿಸಬೇಕು. ಆಗೋಚರ ಶಕ್ತಿಯೇ ದೇವರು.ಯಾವ ವಿಶ್ವ ವಿದ್ಯಾಲಯದಲ್ಲೂ ಕಲಿಯದ ನಮ್ಮ ಪೂರ್ವಜನರು ದೇವರ ಬಗ್ಗೆ ಸರಿಯಾಗಿ ತಿಳಿದುಕೊಂಡಿದ್ದರು.ಪ್ರತಿಯೊಬ್ಬರೂ ಸಂಸ್ಕೃತಿಯನ್ನು ಕಲಿಯಬೇಕು.ವಿಕೃತಿ ಮೆರಯಬಾರದು ಎಂದು ಸಲಹೆ ನೀಡಿದರು. ಸಭೆಯ ಅಧ್ಯಕ್ಷ ತೆಯನ್ನು ಹಿರಿಯರಾದ ಡಾಕಪ್ಪಗೌಡ ವಹಿಸಿದ್ದರು.ಕಪಿಲೇಶ್ವರ ಸ್ವಾಮಿ ಸೇವಾ ಸಮಿತಿ ಅಧ್ಯಕ್ಷ ಹೇಮಂತ್‌ ಶೆಟ್ಟಿ ಸ್ವಾಗತಿಸಿದರು.ಕೃಷ್ಣ ನಿರೂಪಿಸಿದರು.

ವಿವಿಧ ಧಾರ್ಮಿಕ ಕಾರ್ಯಕ್ರಮ : ಕಪಿಲಾ ಜಾತ್ರೆಯ ಪ್ರಯುಕ್ತ ಬೆಳಗ್ಗೆಯಿಂದಲೇ ನೂರಾರು ಭಕ್ತರು ಆಗಮಿಸಿ ಕಪಿಲಾ ನದಿಯಲ್ಲಿ ಸ್ನಾನ ಮಾಡಿ ಕಪಿಲೇಶ್ವರ ದೇವರಿಗೆ ಹಣ್ಣು ಕಾಯಿ ಮಾಡಿಸಿ ಪೂಜೆ ಸಲ್ಲಿಸಿದರು.ಧಾರ್ಮಿಕ ಕಾರ್ಯಕ್ರಮಗಳಾದ ಸಾಮೂಹಿಕ ಸತ್ಯನಾರಾಯಣ ಪೂಜೆ, ಅಷ್ಠೋತ್ತರ ಪೂಜೆ, ಕರ್ಪೂರಧಾರತಿ, ಕುಂಕುಮಾರ್ಚನೆ,ಪಂಚ ಕಜ್ಜಾಯ ಸೇವೆ ನಡೆಯಿತು.ನಂತರ ಸಾಮೂಹಿಕ ಅನ್ನಸಂತರ್ಪಣೆ ನಡೆಯಿತು.ಬೆಳಿಗ್ಗೆಯಿಂದ ಸಂಜೆಯವರೆಗೆ ಸಾವಿರಾರು ಭಕ್ತರು ಆಗಮಿಸಿ ಪೂಜೆ ಸಲ್ಲಿಸಿದರು.

ಆರೋಗ್ಯ ತಪಾಸಣೆ, ಕಣ್ಣಿನ ಪರೀಕ್ಷೆ : ಕಪಿಲಾ ಜಾತ್ರೆಯ ಪ್ರಯುಕ್ತ ಕೊಪ್ಪ ಜೇಸಿ ಸಂಸ್ಥೆ,ಕೊಪ್ಪ ಎ.ಎಲ್‌.ಎನ್‌.ರಾವ್‌ ಸ್ಮಾರಕ ಆಯುರ್ವೇದ ಆಸ್ಪತ್ರೆ, ಕಪಿಲೇಶ್ವರ ಸ್ವಾಮಿ ಸೇವಾ ಸಮಿತಿ, ಲಯನ್ಸ್‌ ಕ್ಲಬ್‌ ಕೊಪ್ಪ ಸಹ್ಯಾದ್ರಿ ( ಹಾಸನ ಪ್ರಸಾದ್‌ ನೇತ್ರಾಲಯ) ಸಂಯುಕ್ತ ಆಶ್ರಯದಲ್ಲಿ ಉಚಿತ ಆರೋಗ್ಯ ತಪಾಸಣೆ,ಶಿವಮೊಗ್ಗ ರೋಟರಿ ರಕ್ತ ನಿಧಿ ಅವರಿಂದ ರಕ್ತದಾನ ಶಿಬಿರ, ಉಚಿತ ಕಣ್ಣಿನ ತಪಾಸಣೆ ಮತ್ತು ಚಿಕಿತ್ಸೆ ನಡೆಯಿತು. ಕೊಪ್ಪ ಜೇಸಿ ಸಂಸ್ಥೆ ಅಧ್ಯಕ್ಷ ಹೇಮಂತ್‌ಶೆಟ್ಟಿ,ಮಾಜಿ ಅಧ್ಯಕ್ಷ ರಾಘವೇಂದ್ರ, ಲಯನ್ಸ್‌ ಕ್ಲಬ್‌ ಕೊಪ್ಪ ಸಹ್ಯಾದ್ರಿ ಅಧ್ಯಕ್ಷ ಎಂ.ಕೆ. ವಿಜಯ, ಕಾರ್ಯದರ್ಶಿ ರಂಗಪ್ಪಗೌಡ, ಜಂಟಿ ಕಾರ್ಯದರ್ಶಿ ಶಂಕ್ರಪ್ಪ,ಕೊಪ್ಪ ಆರ್ಯುವೇದ ಆಸ್ಪತ್ರೆಯ ಪ್ರೊ.ಮಿಲನ್‌ ಹುಕ್ಕೇರಿ ಮುಂತಾದವರಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ