ಆ್ಯಪ್ನಗರ

ಭದ್ರಾ ನದಿಯಲ್ಲಿ ಎನ್‌ಡಿಆರ್‌ಎಪ್‌ ತಂಡ ಶೋಧ

ಇಲ್ಲಿಯ ಭದ್ರಾ ನದಿಯ ಅಂಬಾತೀರ್ಥ ಎಂಬಲ್ಲಿ ಮಂಗಳೂರಿನ ತಿರಣ್‌ ಕೋಟ್ಯಾನ್‌ ನೀರಿನಲ್ಲಿ ಕೊಚ್ಚಿ ಹೋಗಿ 10 ದಿನ ಕಳೆದರೂ ಯಾವುದೇ ಸುಳಿವು ಸಿಗದೆ ಇರುವ ಹಿನ್ನೆಲೆಯಲ್ಲಿ ಶನಿವಾರ ಎನ್‌ಡಿಆರ್‌ಎಪ್‌ ತಂಡ ಭದ್ರಾ ನದಿಯಲ್ಲಿ ಶೋಧ ಕಾರ್ಯ ನಡೆಸಿತು.

Vijaya Karnataka 5 Aug 2018, 5:00 am
ಕಳಸ : ಇಲ್ಲಿಯ ಭದ್ರಾ ನದಿಯ ಅಂಬಾತೀರ್ಥ ಎಂಬಲ್ಲಿ ಮಂಗಳೂರಿನ ತಿರಣ್‌ ಕೋಟ್ಯಾನ್‌ ನೀರಿನಲ್ಲಿ ಕೊಚ್ಚಿ ಹೋಗಿ 10 ದಿನ ಕಳೆದರೂ ಯಾವುದೇ ಸುಳಿವು ಸಿಗದೆ ಇರುವ ಹಿನ್ನೆಲೆಯಲ್ಲಿ ಶನಿವಾರ ಎನ್‌ಡಿಆರ್‌ಎಪ್‌ ತಂಡ ಭದ್ರಾ ನದಿಯಲ್ಲಿ ಶೋಧ ಕಾರ್ಯ ನಡೆಸಿತು.
Vijaya Karnataka Web ndrf team search in bhadra river
ಭದ್ರಾ ನದಿಯಲ್ಲಿ ಎನ್‌ಡಿಆರ್‌ಎಪ್‌ ತಂಡ ಶೋಧ


ಜುಲೈ 26ರಂದು ಮಂಗಳೂರಿನ ತುಂಬೆ ಎಂಬಲ್ಲಿಯ ತಿರಣ್‌ ಕಳಸ ಭಾಗಕ್ಕೆ ತನ್ನ ಸ್ನೇಹಿತರ ಜತೆಗೂಡಿ ಪ್ರವಾಸಕ್ಕೆ ಬಂದಿದ್ದರು.ಇಲ್ಲಿಯ ಭದ್ರಾ ನದಿಯ ಅಂಬಾ ತೀರ್ಥದ ವೀಕ್ಷ ಣೆಗೆ ತೆರಳಿದ್ದ ಇವರು ಬಂಡೆಯೊಂದರ ಮೇಲಿಂದ ಚಾರಿ ಬಿದ್ದು, ನೀರಿನಲ್ಲಿ ಕೊಚ್ಚಿಹೋಗಿರುವ ಪ್ರಕರಣ ಕಳಸ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿತ್ತು.

ಘಟನೆ ನಡೆದ ಬಳಿಕ ಸ್ಥಳಿಯರು,ಅಗ್ನಿಶ್ಯಾಮಕ ದಳ,ಬಂಟ್ವಾಳದ ಮುಳುಗು ತಜ್ಞರು ಭದ್ರಾ ನದಿಯ ಸುಮಾರು 20 ಕಿ.ಮೀಗಳ ದೂರ ಹುಡುಕಾಟ ನಡೆಸಿದ್ದಾರೆ. ಘಟನೆ ನಡೆದು 10 ದಿನ ಕಳೆದರೂ ಯಾವುದೇ ಸುಳಿವು ಸಿಗದೆ ಇರುವ ಹಿನ್ನಲೆಯಲ್ಲಿ ಎನ್‌ಡಿಆರ್‌ಎಪ್‌ನ 30 ಜನರ ತಂಡ ಭದ್ರಾ ನದಿಯ ಅಂಬಾ ತೀರ್ಥದಲ್ಲಿ ಹುಡುಕಾಡುತ್ತಿದೆ. ಮಧ್ಯಾಹ್ನ ಕಳಸಕ್ಕೆ ಆಗಮಿಸಿದ ತಂಡ ಸಂಜೆ 4 ಗಂಟೆಯಿಂದ ಕಾರ್ಯಚರಣೆಗೆ ಇಳಿದಿದ್ದಾರೆ. ಆದರೆ ಸಂಜೆಯ ವರೆಗೂ ಯಾವುದೇ ಸುಳಿವು ಸಿಗಲಿಲ್ಲ.ಸ್ಥಳದಲ್ಲಿ ಅಗ್ನಿಶ್ಯಾಮಕ ದಳ,ಕಳಸ ಪೊಲೀಸರು,ತಹಶೀಲ್ದಾರ್‌ ನಾಗಯ್ಯ,ರೆವಿನ್ಯೂ ಇನ್ಸ್‌ಪೆಕ್ಟರ್‌ ಗಣೇಶ್‌ ಇದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ