ಆ್ಯಪ್ನಗರ

ನಿಲಗುಳಿ ಪದ್ಮನಾಭ್‌ಗೆ 6 ತಿಂಗಳ ಸಜೆ

ನಕ್ಸಲ್‌ ಚಟುವಟಿಕೆಯಿಂದ ಪ್ರಜಾತಾಂತ್ರಿಕ ಮುಖ್ಯವಾಹಿನಿಗೆ ಮರಳಿರುವ ನಿಲಗುಳಿ ಪದ್ಮನಾಭ್‌ ನಿಯಮಿತವಾಗಿ ವಿಚಾರಣೆಗೆ ಹಾಜರಾಗದ ಕಾರಣ 6 ತಿಂಗಳ ಸಜೆ, 2 ಸಾವಿರ ರೂ. ದಂಡ ವಿಧಿಸಿ ನ್ಯಾಯಾಲಯ ಆದೇಶಿಸಿದೆ.

Vijaya Karnataka 7 Jul 2019, 5:00 am
ಚಿಕ್ಕಮಗಳೂರು: ನಕ್ಸಲ್‌ ಚಟುವಟಿಕೆಯಿಂದ ಪ್ರಜಾತಾಂತ್ರಿಕ ಮುಖ್ಯವಾಹಿನಿಗೆ ಮರಳಿರುವ ನಿಲಗುಳಿ ಪದ್ಮನಾಭ್‌ ನಿಯಮಿತವಾಗಿ ವಿಚಾರಣೆಗೆ ಹಾಜರಾಗದ ಕಾರಣ 6 ತಿಂಗಳ ಸಜೆ, 2 ಸಾವಿರ ರೂ. ದಂಡ ವಿಧಿಸಿ ನ್ಯಾಯಾಲಯ ಆದೇಶಿಸಿದೆ.
Vijaya Karnataka Web nilaguli padmanabh 6 months punishment
ನಿಲಗುಳಿ ಪದ್ಮನಾಭ್‌ಗೆ 6 ತಿಂಗಳ ಸಜೆ


ತನ್ನ ಮೇಲೆ ದಾಖಲಾಗಿದ್ದ ಪ್ರಕರಣಗಳ ವಿಚಾರಣೆಗೆ ನಿಯಮಿತವಾಗಿ ಹಾಜರಾಗದ ಕಾರಣ ನ್ಯಾಯಾಲಯ ಹೊರಡಿಸಿದ್ದ ಪ್ರೊಕ್ಲಮೇಷನ್‌ಗೆ ಸಂಬಂಧಿಸಿದಂತೆ ಪದ್ಮನಾಭ್‌ ವಿರುದ್ಧ ಶೃಂಗೇರಿ ಪೊಲೀಸ್‌ ಠಾಣೆಯಲ್ಲಿ ಭಾರತೀಯ ದಂಡಸಂಹಿತೆ ಕಲಂ 174 (ಎ) ನಡಿ ಪ್ರಕರಣ ದಾಖಲಾಗಿತ್ತು.

ವಿಚಾರಣೆ ನಡೆಸಿದ ನ್ಯಾಯಾಲಯ ನಿಲಗುಳಿ ಪದ್ಮನಾಭ್‌ಗೆ 6 ತಿಂಗಳ ಸಜೆ ಮತ್ತು 2ಸಾವಿರ ರೂ. ದಂಡ ವಿಧಿಸಿ ಶನಿವಾರ ತೀರ್ಪು ನೀಡಿದೆ. ಶಿಕ್ಷೆಯನ್ನು ವಜಾಗೊಳಿಸುವಂತೆ ಮೇಲ್ಮನವಿ ಸಲ್ಲಿಸಲು ಆರೋಪಿಗೆ ಅವಕಾಶವಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ