ಆ್ಯಪ್ನಗರ

ಸಮಸ್ಯೆಗಳ ಆಗರ, ಪರಿಹಾರದ ಭರವಸೆ

ಹಂದಿಗಳ ಕಾಟ, ಸಾಂಕ್ರಾಮಿಕ ರೋಗದ ಭೀತಿ, ಶಿಕ್ಷಕರ ಹುದ್ದೆ ಕಾಲಿ, ವಿದ್ಯುತ್‌ ಸಮಸ್ಯೆ ವಿವಿಧ ಮೂಲಭೂತ ಸಮಸ್ಯೆಗಳ ನಿವಾರಣೆಗಾಗಿ ಮಾಗುಂಡಿ ಗ್ರಾ.ಪಂ. ಸಭಾಗಂಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ 2018-19ನೇ ಸಾಲಿನ ಮೊದಲ ಸುತ್ತಿನ ವಾರ್ಡ್‌ ಹಾಗೂ ಗ್ರಾಮ ಸಭೆಯಲ್ಲಿ ಗ್ರಾಮಸ್ಥರು ಒತ್ತಾಯಿಸಿದರು.

Vijaya Karnataka 7 Aug 2018, 5:00 am
ಬಾಳೆಹೊನ್ನೂರು : ಹಂದಿಗಳ ಕಾಟ, ಸಾಂಕ್ರಾಮಿಕ ರೋಗದ ಭೀತಿ, ಶಿಕ್ಷಕರ ಹುದ್ದೆ ಕಾಲಿ, ವಿದ್ಯುತ್‌ ಸಮಸ್ಯೆ ವಿವಿಧ ಮೂಲಭೂತ ಸಮಸ್ಯೆಗಳ ನಿವಾರಣೆಗಾಗಿ ಮಾಗುಂಡಿ ಗ್ರಾ.ಪಂ. ಸಭಾಗಂಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ 2018-19ನೇ ಸಾಲಿನ ಮೊದಲ ಸುತ್ತಿನ ವಾರ್ಡ್‌ ಹಾಗೂ ಗ್ರಾಮ ಸಭೆಯಲ್ಲಿ ಗ್ರಾಮಸ್ಥರು ಒತ್ತಾಯಿಸಿದರು.
Vijaya Karnataka Web CKM-6BHR1


ಮಾಗುಂಡಿ ಗ್ರಾ.ಪಂ. ವ್ಯಾಪ್ತಿಯ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರ ಮೇಲೆ ಸುಳ್ಳು ಆರೋಪ ಮಾಡಿದವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು. ವೈದ್ಯರ ಸೇವೆಯನ್ನು ಅದೇ ಆಸ್ಪತ್ರೆಯಲ್ಲಿಯೇ ಮುಂದುವರಿಸಬೇಕು. ಮಾಗುಂಡಿ ಕೆಳಗಿನ ಪೇಟೆಯಲ್ಲಿ ಹಂದಿಗಳ ಕಾಟ ಹಾಗೂ ಕಸದ ರಾಶಿಯಿಂದಾಗಿ ಸಾಂಕ್ರಾಮಿಕ ರೋಗ ಹರಡುವ ಭೀತಿ ಹೆಚ್ಚಾಗಿದೆ.

ಮಾಗುಂಡಿ ಸರಕಾರಿ ಪ್ರೌಢಶಾಲೆಯಲ್ಲಿ ಕಾಲಿಯಿರುವ ಶಿಕ್ಷಕರ ಹುದ್ದೆಯನ್ನು ತುಂಬದ ಕಾರಣ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಿದೆ. ಗ್ರಾಮದಲ್ಲಿ ವಿದ್ಯುತ್‌ ಸಮಸ್ಯೆಯಿಂದಾಗಿ ಕುಡಿಯುವ ನೀರಿಗೆ ತೊಂದರೆಯಾಗಿದೆ. ವಿದ್ಯುತ್‌ ಲೈನ್‌ ಹಾದು ಹೋದಲ್ಲಿ ಮರಗಳ ಕೊಂಬೆಗಳನ್ನು ತೆಗೆಸಬೇಕು ಎಂದು ಗ್ರಾಮಸ್ಥರು ಸಭೆಯಲ್ಲಿ ಆಗ್ರಹಿಸಿದರು.

ಗ್ರಾಮಸ್ಥರ ಮನವಿಗೆ ಉತ್ತರಿಸಿದ ಮೆಸ್ಕಾಂ ಅಭಿಯಂತರ ರಾಜಪ್ಪ ಮಾತನಾಡಿ, ಕೂಡಲೇ ಜಂಗಲ್‌ ಕ್ಲಿಯರ್‌ ಮಾಡಿಸಲಾಗುವುದು, ಅಲ್ಲದೆ ವೊಲ್ಟೇಜ್‌ ಹಾಗೂ ವಿದ್ಯುತ್‌ ಸಮಸ್ಯೆ ಬಗೆಹರಿಸುವುದಾಗಿ ತಿಳಿಸಿದರು.

ಜಿ.ಪಂ. ಸದಸ್ಯೆ ಚಂದ್ರಮ್ಮ ಮಾತನಾಡಿ, ಜಿ.ಪಂ. ನಿಂದ ಬರುವ ಅನುದಾನದಲ್ಲಿ ವ್ಯಾಪ್ತಿಯ 7ಗ್ರಾ.ಪಂ.ಗಳಿಗೆ ಸಮನಾಗಿ ಹಂಚಬೇಕು. ಹಾಗಾಗಿ ಅಭಿವೃದ್ಧಿ ಕೆಲಸಗಳಿಗೆ ಹಿನ್ನಡೆಯಾಗಿದೆ. ಮುಂಬರುವ ಅನುದಾನದಲ್ಲಿ ಸಾಕಷ್ಟು ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ನೀಡಲಾಗುವುದೆಂದರು.

ಪಶುವೈದ್ಯ, ಆರೋಗ್ಯ, ಕೃಷಿ, ಅರಣ್ಯ, ಶಿಕ್ಷ ಣ, ಕಂದಾಯ, ಸಾಮಾಜಿಕ ಅರಣ್ಯ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಸವಲತ್ತುಗಳ ಬಗ್ಗೆ ತಿಳಿಸಿದರು.

ಸಭೆ ಅಧ್ಯಕ್ಷ ತೆ ವಹಿಸಿದ್ದ ಗ್ರಾ.ಪಂ. ಅಧ್ಯಕ್ಷ ಕೆ.ಟಿ.ಸುದೇಶ್‌ ಮಾತನಾಡಿ, ಇಲಾಖೆವಾರು ಪ್ರಗತಿ ಪರಿಶೀಲನೆ ಹಾಗೂ ಪಲಾನುಭವಿಗಳ ಆಯ್ಕೆ, 2018-19ನೇ ಸಾಲಿನ ವಿವಿಧ ಯೋಜನೆಗಳ ಕಾಮಗಾರಿಗಳ ಪ್ರಗತಿ ಪರಿಶೀಲನೆ, 14ನೇ ಹಣಕಾಸುಯೋಜನೆ, ಕ್ರಿಯಾಯೋಜನೆ ವಿಚಾರವಾಗಿ ಮಾಹಿತಿ ನೀಡಿದರು.

ಗ್ರಾ.ಪಂ. ಮಾರ್ಗದರ್ಶಿ ಅಧಿಕಾರಿ ನಾಗರಾಜ್‌ ಮಾತನಾಡಿದರು. ಗ್ರಾ.ಪಂ. ಉಪಾಧ್ಯಕ್ಷ ಅಣ್ಣಪ್ಪ, ಸದಸ್ಯರುಗಳಾದ ಅಬ್ದುಲ್‌ವಹೀದ್‌, ಕಮಲಮ್ಮ, ಇಂದಿರಾ, ಡೈನಾಲೋಬೋ ಮತ್ತಿತರರು ಪಾಲ್ಗೊಂಡಿದ್ದರು.

ಗ್ರಾ.ಪಂ. ಕಾರ್ಯಕರ್ಶಿ ಪಿ.ಕೆ.ಪ್ರಕಾಶ್‌ ಸ್ವಾಗತಿಸಿ, ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಪ್ರಮೋದ್‌ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ