ಆ್ಯಪ್ನಗರ

ಅರಣ್ಯದಲ್ಲಿ ಕಂದಕಕ್ಕೆ ವಿರೋಧ

ಅರಣ್ಯದೊಳಗೆ ಹಿಟಾಚಿ ಬಳಸಿ ಕಂದಕ ತೋಡುತ್ತಿದ್ದ ಯಂತ್ರವನ್ನು ತಡೆದ ರೈತರು,ಹಿಟಾಚಿಯನ್ನು ವಾಪಸು ಕಳಿಸದ ಘಟನೆ ಮೆಣಸೆ ಗ್ರಾಪಂಯ ಕಿಕ್ರೆಯಲ್ಲಿ ಗುರುವಾರ ನಡೆದಿದೆ.

Vijaya Karnataka 26 Jul 2019, 5:00 am
ಶೃಂಗೇರಿ : ಅರಣ್ಯದೊಳಗೆ ಹಿಟಾಚಿ ಬಳಸಿ ಕಂದಕ ತೋಡುತ್ತಿದ್ದ ಯಂತ್ರವನ್ನು ತಡೆದ ರೈತರು,ಹಿಟಾಚಿಯನ್ನು ವಾಪಸು ಕಳಿಸದ ಘಟನೆ ಮೆಣಸೆ ಗ್ರಾಪಂಯ ಕಿಕ್ರೆಯಲ್ಲಿ ಗುರುವಾರ ನಡೆದಿದೆ.
Vijaya Karnataka Web CKM-25SRI1


ಅರಣ್ಯ ಇಲಾಖೆ ಕಿಕ್ರೆ ಗ್ರಾಮದಲ್ಲಿ ಕಳೆದ ಎರಡು ದಿನದಿಂದ ಕಾಡಿನಲ್ಲಿ ಹಿಟಾಚಿ ಬಳಸಿ ಕಂದಕ ನಿರ್ಮಿಸುತ್ತಿತ್ತು. ಅರಣ್ಯ ಇಲಾಖೆಯ ನೆಡು ತೋಪಿನ ಸುತ್ತ ಕಂದಕ ಮಾಡಲಾಗುತ್ತಿದೆ ಎಂದು ತಿಳಿದಿದ್ದ ಸ್ಥಳಿಯರು ಅಕೇಶಿಯಾ ನೆಡು ತೋಪಿನಿಂದ ಮುಂದಕ್ಕೆ ಬುಧವಾರ ಕಂದಕ ನಿರ್ಮಿಸಿದ್ದನ್ನು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಗುರುವಾರ ಬೆಳಗ್ಗೆ ಗ್ರಾಮಸ್ಥರು ಒಟ್ಟುಗೂಡಿ ಬೆಳಗ್ಗೆಯೇ ಹಿಟಾಚಿ ಕೆಲಸ ಮಾಡದಂತೆ ತಡೆಯೊಡ್ಡಿದರು.

ಸ್ಥಳಕ್ಕೆ ಅರಣ್ಯ ಇಲಾಖಾ ಅಧಿಕಾರಿಗಳು ಬರುವಂತೆ ಪಟ್ಟು ಹಿಡಿದ ಗ್ರಾಮಸ್ಥರು,ಕಂದಕ ತೋಡುವುದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದರು. ಕಂದಕ ನಿರ್ಮಾಣದಿಂದ ರೈತರಿಗೆ,ಜಾನುವಾರುಗಳು ಹಾಗೂ ಕಾಡು ಪ್ರಾಣಿಗಳಿಗೂ ತೊಂದರೆ ಉಂಟಾಗುವುದಲ್ಲದೇ,ಕಂದಕ ನಿರ್ಮಿಸುವ ಸಂದರ್ಭದಲ್ಲಿ ಕಾಡುಮರಗಳು ಉರುಳಿ ಬೀಳುತ್ತಿದೆ.ಇದಲ್ಲದೇ ಮಳೆಗಾಲದಲ್ಲಿ ಕಾಡಿನಿಂದ ಹರಿಯುವ ನೀರು ಕಂದಕದಲ್ಲಿ ತುಂಬಿ ಒಂದೇ ಕಡೆ ಹೋಗಿ ಅಪಾಯ ಉಂಟಾಗುವ ಸಾಧ್ಯತೆ ಇದೆ. ರೈತರು ಕಾಡಿನಿಂದ ಸೊಪ್ಪು,ಸೌದೆ ಮತ್ತಿತರ ಅರಣ್ಯ ಉತ್ಪನ್ನ ಸಂಗ್ರಹಿಸಲು ಕಾಡಿಗೆ ತೆರಳಬೇಕು. ಜಾನುವಾರುಗಳು ಮೇಯಲು ಕಾಡಿಗೆ ಹೋಗಬೇಕು.ಇದಕ್ಕೆಲ್ಲಾ ಕಂದಕ ಅಡ್ಡಿಯಾಗುತ್ತದೆ ಎಂದು ದೂರಿದರು.

ಸ್ಥಳಕ್ಕೆ ಅರಣ್ಯ ಇಲಾಖೆಯ ಅರಣ್ಯ ಸಂರಕ್ಷ ಕ ಗಿರೀಶ್‌,ವನಪಾಲಕ ಚಂದ್ರಪ್ಪ ಆಗಮಿಸಿ,ಗ್ರಾಮಸ್ಥರಲ್ಲಿ ಅರಣ್ಯ ಪ್ರದೇಶವನ್ನು ಉಳಿಸಲು,ಇನ್ನಷ್ಟು ಒತ್ತುವರಿ ತಡೆಯಲು ಕಂದಕ ಮಾಡುತ್ತಿದ್ದೇವೆ. ಯಾವ ರೈತರಿಗೂ ತೊಂದರೆಯಾಗದಂತೆ ಕಂದಕ ನಿರ್ಮಿಸಲಾಗುತ್ತದೆ ಎಂದರು.ಸಾಕಷ್ಟು ಸಂಖ್ಯೆಯಲ್ಲಿ ಮಹಿಳೆಯರು ಸೇರಿದಂತೆ ಸೇರಿದ್ದ ಗ್ರಾಮಸ್ಥರು ಹಿಟಾಚಿಯನ್ನು ವಾಪಸು ಕಳುಹಿಸುವಲ್ಲಿ ಯಶಸ್ವಿಯಾದರು. ಮೇಗಳಬೈಲು ಶಿವಶಂಕರ್‌,ಚಂದ್ರಶೇಖರ್‌,ಶಿವಸ್ವಾಮಿ,ಕೊಂಡಗೆರೆ ಕಳಸಪ್ಪ,ಸುಜಾತಭಾಸ್ಕರ್‌,ನೇತ್ರಾವತಿ,ತಾಪಂ ಸದಸ್ಯ ರಾಮಕೃಷ್ಣ,ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ನಟರಾಜ್‌,ಬಿಜೆಪಿ ರೈತ ಮೋರ್ಚಾ ಅರ್ಧಯಕ್ಷ ಹೆಬ್ಬಿಗೆ ಕೃಷ್ಣಮೂರ್ತಿ,ಚಂದ್ರು,ಸತೀಶ,ಮೋನಪ್ಪ,ಕಳಸಪ್ಪನಾಯ್ಕ್‌ ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ