ಆ್ಯಪ್ನಗರ

ಪಂಚ ರಾಜ್ಯಗಳ ಚುನಾವಣೆ ದಿಕ್ಸೂಚಿ

ಐದು ರಾಜ್ಯಗಳ ಚುನಾವಣೆ ಮುಂದಿನ ಲೋಕಸಭಾ ಚುನಾವಣೆಗೆ ದಿಕ್ಸೂಚಿ ಎಂದು ಅಜ್ಜಂಪುರ ತಾಲೂಕು ಕಾಂಗ್ರೆಸ್‌ ಅಧ್ಯಕ್ಷ ಎ.ಸಿ. ಚಂದ್ರಪ್ಪ ಹೇಳಿದರು.

Vijaya Karnataka 13 Dec 2018, 5:00 am
ಅಜ್ಜಂಪುರ : ಐದು ರಾಜ್ಯಗಳ ಚುನಾವಣೆ ಮುಂದಿನ ಲೋಕಸಭಾ ಚುನಾವಣೆಗೆ ದಿಕ್ಸೂಚಿ ಎಂದು ಅಜ್ಜಂಪುರ ತಾಲೂಕು ಕಾಂಗ್ರೆಸ್‌ ಅಧ್ಯಕ್ಷ ಎ.ಸಿ. ಚಂದ್ರಪ್ಪ ಹೇಳಿದರು.
Vijaya Karnataka Web panchayat elections component
ಪಂಚ ರಾಜ್ಯಗಳ ಚುನಾವಣೆ ದಿಕ್ಸೂಚಿ


ಪಟ್ಟಣದ ಗಾಂಧಿ ವೃತ್ತದಲ್ಲಿ ಬುಧವಾರ ಕಾಂಗ್ರೆಸ್‌ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದ ಸಂದರ್ಭ ಮಾತನಾಡಿದರು. ಉತ್ತರ ಭಾರತದ 5 ವಿಧಾನಸಭಾ ಕ್ಷೇತ್ರದಲ್ಲಿ 3 ವಿಧಾನಸಭೆಯಲ್ಲಿ ಕಾಂಗ್ರೆಸ್‌ ಪಕ್ಷ ಜಯಭೇರಿ ಬಾರಿಸಿದ್ದು, ಇನ್ನುಳಿದಂತೆ 2 ಪಕ್ಷ ಜಯಗೊಳಿಸಿದೆ. ಪ್ರಧಾನಿ ಮೋದಿ ಅವರು ಭಾರತವನ್ನು ಕಾಂಗ್ರೆಸ್‌ ಮುಕ್ತವನ್ನಾಗಿ ಮಾಡುತ್ತೇನೆ ಎಂದು ಘೋಷಿಸಿದ್ದರು. ನಮ್ಮದು ಹಸಿವು ಮುಕ್ತ ದೇಶವಾಗಿರುವುದರಿಂದ ಅವರಿಗೆ ಜನತೆ ಚೆನ್ನಾಗಿ ಪಾಠ ಕಲಿಸಿದ್ದಾರೆ. ರೈತರ ಬೇಡಿಕೆ ಈಡೇರಿಸುವಲ್ಲಿ ಬಿಜೆಪಿ ವಿಫಲರಾಗಿದ್ದರಿಂದ ಅವರಿಗೆ ಹೀನಾಮಾನ ಸೋಲುಂಟಾಗಿದೆ. ಪ್ರತಿಯೊಬ್ಬರ ಅಕೌಂಟಿಗೆ 15 ಲಕ್ಷ ಹಾಕುತ್ತೇನೆ, ರೈತರು ಬೆಳೆದಿರುವ ಈರುಳ್ಳಿ, ಆಲೂಗೆಡ್ಡೆ, ತರಕಾರಿ ಬೆಳೆಗೆ ಬೆಂಬಲ ಬೆಲೆ ಕೊಡಿಸುತ್ತೇನೆ ಎಂದು ಸುಳ್ಳು ಹೇಳಿದ್ದನ್ನು ಮತದಾರರು ಮನಗಂಡು ಬಿಜೆಪಿಯನ್ನು ಸೋಲಿಸಿದ್ದಾರೆ.ಮುಂದಿನ ದಿನಗಳಲ್ಲಿ ಕಾಂಗ್ರೆಸ್‌ ಸರಕಾರ ರಚಿಸುವುದರಲ್ಲಿ ಯಾವುದೇ ಅನುಮಾನ ಇಲ್ಲ. ಈ ಸಂದರ್ಭ ರಾಹುಲ್‌ ಗಾಂಧಿ, ಸೋನಿಯಾ ಗಾಂಧಿ ಇತರರನ್ನು ಅಭಿನಂದಿಸುತ್ತೇನೆ ಎಂದರು.

ಎಪಿಎಂಸಿ ಅಧ್ಯಕ್ಷ ಎಂ. ಕೃಷ್ಣಮೂರ್ತಿ ಮಾತನಾಡಿ, ದೇಶ ಯಾರ ಆಸ್ತಿಯೂ ಅಲ್ಲ. ಬಣ್ಣ ಬಣ್ಣದ ಮಾತುಗಳಿಂದ ಮರಳು ಮಾಡಿದ ಬಿಜೆಪಿಗೆ ಜನ ಪಾಠ ಕಲಿಸುತ್ತಿದ್ದಾರೆ. ಮೋದಿ ಮಹಾರಾಜರ ನಿರಂಕುಶ ಪ್ರಭುತ್ವಕ್ಕೆ ಕಡಿವಾಣ ಹಾಕಿದೆ. ಮೋದಿ ಭಕ್ತರು ಸಾಮಾಜಿಕ ಜಾಲ ತಾಣಗಳಾದ ವಾಟ್ಸಪ್‌, ಫೇಸ್‌ ಬುಕ್‌ಗಳಲ್ಲಿ ಮಾತ್ರ ಪೆಟ್ರೋಲ್‌, ಡೀಸೆಲ್‌ ಅಡಿಗೆ ಅನಿಲ ಕಡಿಮೆ ಮಾಡಿದೆ ಎಂದು ಹಸಿ ಸುಳ್ಳು ಹೇಳುತ್ತಾ ಮಧ್ಯಮ ವರ್ಗದ ಜನರಿಗೆ ಬರೆ ಹಾಕಿದೆ. ಮೋದಿ ದೊಡ್ಡ ಕೈಗಾರಿಕೋದ್ಯಮಿಗಳಿಗೆ ಮಾತ್ರ ನೆರವು ನೀಡುತ್ತಿದ್ದಾರೆ ಎಂದು ಆರೋಪಿಸಿದರು. ಮುಖಂಡ ಬಿ.ಎ. ರಾಜಕುಮಾರ್‌ ಮಾತನಾಡಿ, ರಾಮಮಂದಿರ, ಜಿಎಸ್‌ಟಿ, ನೋಟ್‌ಬ್ಯಾನ್‌, ಕಪ್ಪು ಹಣ ವಾಪಸ್‌ ಇಂತಹ ಹಲವು ವಿಷಯಗಳಿಂದ ರೋಸತ್ತ ಜನತೆ ಬಿಜೆಪಿಗೆ ತಕ್ಕ ಪಾಠ ಕಲಿಸಿದೆ ಎಂದರು. ಎಪಿಎಂಸಿ ಉಪಾಧ್ಯಕ್ಷ ಅಂಕುಶ್‌ಕುಮಾರ್‌, ಯುವ ಕಾಂಗ್ರೆಸ್‌ ಅಧ್ಯಕ್ಷ ಎಸ್‌.ಎನ್‌. ಲೋಹಿತ್‌, ಅಜ್ಜಂಪುರ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಬಾಬು, ಮುಖಂಡರಾದ ಎರೆಹೊಸೂರು ಗಂಗಾಧರ್‌, ಎಸ್‌. ಜಯಪ್ಪ, ಎನ್‌ಎಸ್‌

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ