ಆ್ಯಪ್ನಗರ

ಸಹಕಾರಿ ಕ್ಷೇತ್ರ ಏಳಿಗೆಯಾದರೆ ರೈತರ ಉನ್ನತಿ

ಸಹಕಾರಿ ಕ್ಷೇತ್ರಗಳು ಬೆಳವಣಿಗೆಯಾದರೆ ಮಾತ್ರ ರೈತರ ಸರ್ವಾಂಗೀಣ ಏಳಿಗೆ ಸಾಧ್ಯ ಎಂದು ವಿಧಾನ ಪರಿಷತ್ತು ಉಪಸಭಾಪತಿ ಹಾಗೂ ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಎಸ್‌.ಎಲ್‌.ಧರ್ಮೇಗೌಡ ಹೇಳಿದರು.

Vijaya Karnataka 31 Oct 2019, 5:00 am
ಕಳಸ: ಸಹಕಾರಿ ಕ್ಷೇತ್ರಗಳು ಬೆಳವಣಿಗೆಯಾದರೆ ಮಾತ್ರ ರೈತರ ಸರ್ವಾಂಗೀಣ ಏಳಿಗೆ ಸಾಧ್ಯ ಎಂದು ವಿಧಾನ ಪರಿಷತ್ತು ಉಪಸಭಾಪತಿ ಹಾಗೂ ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಎಸ್‌.ಎಲ್‌.ಧರ್ಮೇಗೌಡ ಹೇಳಿದರು.
Vijaya Karnataka Web 30KLS1_35


ಕಳಸ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಬುಧವಾರ ಕಳಸದ ಕಚಗಾನೆಯಲ್ಲಿನೂತನವಾಗಿ ನಿರ್ಮಿಸುತ್ತಿರುವ ಕೃಷಿ ಉತ್ಪನ್ನಗಳ ಸಂಸ್ಕರಣಾ ಘಟಕದ ಶಂಕು ಸ್ಥಾಪನೆಯ ಸಭಾ ಕಾರ್ಯಕ್ರಮದಲ್ಲಿಅವರು ಮಾತನಾಡಿದರು.

ಸರಕಾರ ಸಹಕಾರಿ ಸಂಸ್ಥೆಗಳಿಗೆ ಹೆಚ್ಚಿನ ಉತ್ತೇಜನ ನೀಡಬೇಕು ಮತ್ತು ಕ್ಷೇತ್ರಗಳಲ್ಲಿಒಳ್ಳೆಯ ಅಡಳಿತವನ್ನು ನೀಡುವ ಆಡಳಿತ ಮಂಡಳಿಗೆ ಬೆಂಬಲವನ್ನು ನೀಡಿದಾಗ ಸಹಕಾರಿ ಕ್ಷೇತ್ರಗಳು ಹೆಚ್ಚಿನ ಅಭಿವೃದ್ಧಿ ಮತ್ತು ರೈತರಿಗೆ ಹೆಚ್ಚಿನ ಸಹಕಾರವನ್ನು ನೀಡಲು ಸಾಧ್ಯವಾಗುತ್ತದೆ ಎಂದರು.

ಕಳಸ ಇನಾಂ ಭೂಮಿ ವಿಚಾರ ಸುಪ್ರೀಂ ಕೋರ್ಟ್‌ ಅಂಗಳದಲ್ಲಿದೆ.ಈ ಬಗ್ಗೆ ಕಳೆದ ಕೆಲ ದಿನಗಳ ಹಿಂದೆ ಬೆಂಗಳೂರಿನಲ್ಲಿಸಭೆಯನ್ನು ಕರೆದು ಚರ್ಚಿಸಲಾಗಿದೆ.ಆದರೆ ಈ ವಿಚಾರದಲ್ಲಿಹೆಚ್ಚಿನ ಎಚ್ಚರಿಕೆ ವಹಿಸಿಕೊಳ್ಳಬೇಕಾಗಿದೆ.ಸುಪ್ರೀಂ ಕೋರ್ಟ್‌ನಲ್ಲಿಇಲ್ಲಿಯ ನಿಜಾಂಶವನ್ನು ನ್ಯಾಯದೀಶರಿಗೆ ಮನದಟ್ಟು ಮಾಡುವಂತ ಒಬ್ಬ ಉತ್ತಮ ವಕೀಲರ ಮುಖಾಂತರ ವಾದ ಮಾಡಬೇಕಾಗಿದೆ.ಇನಾಂ ಭೂಮಿ ವಿಚಾರದಲ್ಲಿಅಧಿಕಾರಿ ಶಾಹಿಗಳೇ ದಿಕ್ಕು ತಪ್ಪಿಸುತ್ತಿದ್ದಾರೆ.ಮುಂದೊಂದು ಹಿಂದೊಂದು ಮಾತು ಬದಲಿಸುವ ಅಧಿಕಾರಿಗಳಿಂದ ಈ ಮಟ್ಟಕ್ಕೆ ಬಂದು ನಿಂತಿದೆ.ಈ ಹಿಂದೆಯೇ ಅಧಿಕಾರಿಗಳು ಇದು ಅರಣ್ಯ ಭೂಮಿ ಎಂದು ಹೇಳಿರುವ ಕಾರಣ ಈಗ ಅಧಿಕಾರಿಗಳು ಅದಕ್ಕೆ ವಿರುದ್ಧವಾಗಿ ಹೇಳಲು ಒಪ್ಪುತ್ತಿಲ್ಲಇದು ನಿಜಾಂಶವಾಗಿದೆ.ಇದೇ ರೀತಿ ಮುಂದುವರಿದರೆ ಯಾವ ಸರಕಾರಕ್ಕೂ ಏನೂ ಮಾಡಲು ಸಾದ್ಯವಾಗುವುದಿಲ್ಲಎಂದು ಹೇಳಿದರು.

ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನದ ಧರ್ಮಕರ್ತರಾದ ಡಾ.ಜಿ.ಭೀಮೇಶ್ವರ ಜೋಷಿ, ಕಳಸ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಕೃಷಿಕರನ್ನು ಉಳಿಸಿ,ಬೆಳೆಸಿ,ಆದರ್ಶಪ್ರಾಯವಾಗಿ ಕೆಲಸ ಮಾಡುತ್ತಿರುವುದರಿಂದ ಬಹುಕೋಟಿ ವೆಚ್ಚದ ಯೋಜನೆಯೊಂದನ್ನು ಮಾಡಲು ಸಾಧ್ಯವಾಗಿದೆ ಎಂದು ಹೇಳಿದರು.

ಇತ್ತೀಚೆಗೆ ಉಂಟಾದ ನೆರೆಯಿಂದ ಆಸ್ತಿ ಪಾಸ್ತಿ ಕಳೆದುಕೊಂಡು ಸರಕಾರದಿಂದ ಯಾವುದೇ ಪರಿಹಾರವನ್ನು ಪಡೆಯಲು ಅಸಾಧ್ಯವಾದ 30 ಕುಟುಂಬಗಳಿಗೆ ಒಟ್ಟು 5 ಲಕ್ಷ ಹಣವನ್ನು ನೀಡಲಾಯಿತು. ಜಿಲ್ಲಾಪಂಚಾಯಿತಿ ಸದಸ್ಯ ಕೆ.ಆರ್‌.ಪ್ರಭಾಕರ್‌,ಡಿ.ಸಿ.ಸಿ.ಬ್ಯಾಂಕ್‌ ನಿರ್ದೇಶಕ ಬಿ.ಎಲ್‌.ಸಂದೀಪ್‌,ಟಿಎಪಿಸಿಎಂಎಸ್‌ ಅಧ್ಯಕ್ಷೆ ಭಾರತಿ,ತಾಲೂಕು ಪಂಚಾಯಿತಿ ಸದಸ್ಯರಾದ ಮಹಮ್ಮದ್‌ ರಫೀಕ್‌,ರಾಜೇಂದ್ರ ಪ್ರಸಾದ್‌,ಗ್ರಾಮ ಪಂಚಾಯಿತಿ ಅಧ್ಯಕ್ಷೆ ರತೀ ರವೀಂದ್ರ,ಬಿ.ಜಯಪ್ರಕಾಶ್‌,ಜೆ.ಪಿ.ಬಸವರಾಜಯ್ಯ,ಹೆಚ್‌.ಕೆ.ದಯಾನಂದ,ಓ.ಜಿ.ರವಿ,ಆಸಿಪ್‌ ಇಕ್ಬಾಲ್‌,ಬಿ.ಎಸ್‌.ಕಲ್ಲೇಶ್‌,ಎಂ.ಸಿ.ಸಂತೋಷ್‌,ಕೆ.ಬಿ.ಶಿವರಾಜ್‌ ಇತರರು ಇದ್ದರು.

-----------------

ಕೃಷಿಕರ ಬೇಡಿಕೆಯಂತೆ ಬಾಳೆಹೊಳೆ,ಸಂಸೆಯಲ್ಲಿಬ್ರಾಂಚ್‌ ಗಳನ್ನು ತೆರೆದು ರೈತಿಗೆ ಎಲ್ಲಾರೀತಿಯ ಸವತ್ತುಗಳನ್ನು ನೀಡಲಾಗುತ್ತಿದೆ.ಅದರಂತೆ ರೈತರು ಕಾಫಿ ಶೇಖರಣೆ,ಮುಂಗಡ ಹಣ ನೀಡುವ ಮತ್ತು ಸಂಸ್ಕರಣೆ ಮಾಡುವ ಅಭಿಲಾಷೆಯನ್ನು ಹೊಂದಿದ್ದು.ಆ ಪ್ರಕಾರವಾಗಿ ಕಚಗಾನೆಯಲ್ಲಿನಿವೇಶನವನ್ನು ಖರೀದಿ ಮಾಡಿ ಮೊದಲನೇ ಹಂತದಲ್ಲಿ6 ಕೋಟಿ 90 ಲಕ್ಷದ ಕೃಷಿ ಉತ್ಪನ್ನಗಳ ಸಂಸ್ಕರಣಾ ಘಟಕವನ್ನು ಮಾಡಲಾಗುತ್ತದೆ.ಇದರ ಶಂಕುಸ್ಥಾಪನೆಯನ್ನು ಮಾಡಲಾಗಿದೆ.

-ಜಿ.ಕೆ.ಮಂಜಪ್ಪಯ್ಯ,
ಸಂಘದ ಅಧ್ಯಕ್ಷ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ