ಆ್ಯಪ್ನಗರ

ಪೇಜಾವರ ಶ್ರೀ ಇತ್ತೀಚೆಗೆ ಗಂಗಾ ನದಿ ನೋಡಿಲ್ಲ ಅನಿಸ್ತಿದೆ: ಈಶ್ವರಪ್ಪ

ಗಂಗಾ ನದಿ ಸಾಕಷ್ಟು ಅಭಿವೃದ್ದಿಯಾಗಿದೆ. ಪೇಜಾವರದ ವಿಶ್ವೇಶ ತೀರ್ಥ ಸ್ವಾಮೀಜಿ ಇತ್ತೀಚೆಗೆ ಅಲ್ಲಿಗೆ ಹೋಗಿಲ್ಲ ಅಂತ ಕಾಣಿಸುತ್ತದೆ ಎಂದು ಈಶ್ವರಪ್ಪ ಹೇಳಿದ್ದಾರೆ.

Vijaya Karnataka Web 4 Jun 2018, 12:55 pm
ಚಿಕ್ಕಮಗಳೂರು: ಗಂಗಾ ನದಿ ಸಾಕಷ್ಟು ಅಭಿವೃದ್ದಿಯಾಗಿದೆ. ಪೇಜಾವರದ ವಿಶ್ವೇಶ ತೀರ್ಥ ಸ್ವಾಮೀಜಿ ಇತ್ತೀಚೆಗೆ ಅಲ್ಲಿಗೆ ಹೋಗಿಲ್ಲ ಅಂತ ಕಾಣಿಸುತ್ತದೆ. ಅವರನ್ನು ನಾನೇ ಒಮ್ಮೆ ಅವಕಾಶ ಸಿಕ್ಕಿದರೆ ಕರೆದುಕೊಂಡು ಹೋಗುತ್ತೇನೆ ಎಂದು ಬಿಜೆಪಿ ಮುಖಂಡ ಈಶ್ವರಪ್ಪ ಹೇಳಿದ್ದಾರೆ.
Vijaya Karnataka Web eshwarappa


'ಕಪ್ಪು ಹಣ ನಿರ್ಮೂಲನೆ ವಿಚಾರ ಮತ್ತು ಗಂಗಾ ನದಿಯ ಮಾಲಿನ್ಯವನ್ನು ದೂರಗೊಳಿಸಿ ಶುದ್ಧೀಕರಿಸುವ ಕೆಲಸ ಆಗಿಲ್ಲ.' ಎಂದು ಪೇಜಾವರ ಶ್ರೀ ಇತ್ತೀಚೆಗೆ ಕೇಂದ್ರ ಸರಕಾರದ ಕುರಿತು ಅಸಮಧಾನ ವ್ಯಕ್ತಪಡಿಸಿರುವ ಬಗ್ಗೆ ಈಶ್ವರಪ್ಪ ಹೀಗೆ ಪ್ರತಿಕ್ರಿಯಿಸಿದ್ದಾರೆ.

ಕಪ್ಪು ಹಣ ಉಳ್ಳವರ ಮೇಲೆ ದಾಳಿ ಆಗಿದೆ. ಆದಷ್ಟು ಕೇಂದ್ರ ಸರಕಾರ ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ. ಪೇಜಾವರ ಶ್ರೀ ಏಕೆ ಈ ರೀತಿ ಹೇಳಿಕೆ ನೀಡಿದ್ದಾರೆ ಗೊತ್ತಿಲ್ಲ ಎಂದು ಅವರು ಹೇಳಿದರು.

ಕಾಂಗ್ರೆಸ್‌ನವರು ಅವಕಾಶವಾದಿಗಳು

ಕಾಂಗ್ರೆಸ್ ನವರು ಅಧಿಕಾರ ದಾಹಿಗಳು, ನರೇಂದ್ರ ಮೋದಿಯನ್ನು ಸೋಲಿಸಲು ಎಲ್ಲಾ ಒಂದಾಗಿದ್ದಾರೆ. ದೇಶದ ಜನ ಇದನ್ನು ಒಪ್ಪುವುದಿಲ್ಲ ಎಂದು ಬಿಜೆಪಿ ಮುಖಂಡ ಈಶ್ವರಪ್ಪ ಹೇಳಿದ್ದಾರೆ.

ಕಾಂಗ್ರೆಸ್ - ಜೆಡಿಎಸ್ ಮೈತ್ರಿ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಕರ್ನಾಟಕದಲ್ಲಿ ಈಗ ನಡೆಯುತ್ತಿರುವುದು ಅವಕಾಶವಾದಿ ರಾಜಕಾರಣ. ಕೋಮುವಾದಿಗಳು ಅಂತ ನಮ್ಮನ್ನು ದೂರ ಇಟ್ಟಿದ್ದಾರೆ. ಹಿಂದೆ ಬಿಜೆಪಿ ರಾಮಕೃಷ್ಣ ಹೆಗಡೆಗೆ ಬೆಂಬಲ ನೀಡಿದಾಗ ನಾವು ರಾಷ್ಟ್ರೀಯ ವಾದಿಗಳಾಗಿದ್ದೇವಾ ಎಂದು ಪ್ರಶ್ನಿಸಿದರು.

ಉತ್ತರ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಸೋತರೆ ಎಸ್ ಆರ್ ಪಾಟೀಲ್ ಕಾರಣ. ಗೆದ್ದರೆ ಸೋನಿಯಾ, ರಾಹುಲ್ ಕಾರಣ ಎನ್ನುತ್ತಾರೆ. ಇದು ಕಾಂಗ್ರೆಸ್ ನ ಅವಕಾಶವಾದಿ ರಾಜಕಾರಣ ಎಂದು ಈಶ್ವರಪ್ಪ ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ