ಆ್ಯಪ್ನಗರ

ಮೂರು ಹಂತದ ಪ್ರತಿಭಟನೆಗೆ ದೈಹಿಕ ಶಿಕ್ಷಣ ಶಿಕ್ಷಕರು ಸಜ್ಜು

ಪ್ರಾಥಮಿಕ ಶಾಲೆ ಗ್ರೇಡ್‌-2 ದೈಹಿಕ ಶಿಕ್ಷಣ ಶಿಕ್ಷ ಕರಿಗೆ ಮುಂಬಡ್ತಿ ನೀಡುವುದು ಸೇರಿದಂತೆ ವಿವಿಧ ಬೇಡಿಕೆÜ ಈಡೇರಿಕೆಗೆ ಒತ್ತಾಯಿಸಿ ರಾಜ್ಯ ಮಟ್ಟದಲ್ಲಿ ಮೂರು ಹಂತದಲ್ಲಿ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ.

Vijaya Karnataka 8 Jul 2019, 5:00 am
ಚಿಕ್ಕಮಗಳೂರು : ಪ್ರಾಥಮಿಕ ಶಾಲೆ ಗ್ರೇಡ್‌-2 ದೈಹಿಕ ಶಿಕ್ಷಣ ಶಿಕ್ಷ ಕರಿಗೆ ಮುಂಬಡ್ತಿ ನೀಡುವುದು ಸೇರಿದಂತೆ ವಿವಿಧ ಬೇಡಿಕೆÜ ಈಡೇರಿಕೆಗೆ ಒತ್ತಾಯಿಸಿ ರಾಜ್ಯ ಮಟ್ಟದಲ್ಲಿ ಮೂರು ಹಂತದಲ್ಲಿ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ.
Vijaya Karnataka Web CKM-7rudrap5


ನಗರದ ಆಜಾದ್‌ ಪಾರ್ಕ್‌ ಶಾಲೆಯಲ್ಲಿ ಭಾನುವಾರ ನಡೆದ ಪ್ರಾಥಮಿಕ ಶಾಲಾ ಗ್ರೇಡ್‌-2 ದೈಹಿಕ ಶಿಕ್ಷಣ ಶಿಕ್ಷ ಕರ ಸಂಘದ ಪದಾಧಿಕಾರಿಗಳ ರಾಜ್ಯ ಮಟ್ಟದ ಸಭೆಯಲ್ಲಿ ಈ ಕುರಿತು ನಿರ್ಣಯಿಸಲಾಗಿದೆ.

ಮೊದಲ ಹಂತದಲ್ಲಿ ಸಾರ್ವಜನಿಕ ಶಿಕ್ಷ ಣ ಇಲಾಖೆಯಿಂದ ನಡೆಸಲಾಗುವ ಎಲ್ಲ ಕ್ರೀಡಾಕೂಟಗಳಲ್ಲಿ ಕಪ್ಪುಪಟ್ಟಿ ಧರಿಸಿ ಪಾಲ್ಗೊಳ್ಳುವುದು. ಎರಡನೇ ಹಂತದಲ್ಲಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸುವುದು. ಆ ನಂತರವೂ ಬೇಡಿಕೆಗಳು ಈಡೇರದಿದ್ದಲ್ಲಿ ಕ್ರೀಡಾ ಕೂಟಗಳನ್ನು ಬಹಿಷ್ಕರಿಸುವುದರ ಜತೆಗೆ ವಿಧಾನಸೌಧ ಚಲೋ ಕಾರ್ಯಕ್ರಮ ಹಮ್ಮಿಕೊಳ್ಳುವ ನಿರ್ಧಾರವನ್ನು ಸಭೆ ಕೈಗೊಂಡಿದೆ.

ದೈಹಿಕ ಶಿಕ್ಷಣ ಶಿಕ್ಷ ಕರು ಮತ್ತು ಬಹುತೇಕ ಮುಖಂಡರು ಸಭೆಯಲ್ಲಿ ಮಾತನಾಡಿ, ರಾಜ್ಯ ಸರಕಾರ ಮತ್ತು ಶಿಕ್ಷ ಣ ಇಲಾಖೆಯ ತಾರತಮ್ಯ ಧೋರಣೆ ಮತ್ತು ಶೋಷಣೆ ವಿರುದ್ಧ ತೀವ್ರ ಆಕ್ರೋಶ, ಅಸಮಾಧಾನ ವ್ಯಕ್ತಪಡಿಸಿದರು.

ಸಂಘದ ರಾಜ್ಯಾಧ್ಯಕ್ಷ ಜೆ.ಕೆ.ಲೋಕೇಶಪ್ಪ ಮಾತನಾಡಿ, ಪ್ರಾಥಮಿಕ ಶಾಲಾ ಗ್ರೇಡ್‌-2 ದೈಹಿಕ ಶಿಕ್ಷಣ ಶಿಕ್ಷ ಕರನ್ನು ರಾಜ್ಯ ಸರಕಾರ, ಶಿಕ್ಷ ಣ ಇಲಾಖೆಯವರು ಶಿಕ್ಷ ಕರಂತೆ ಕಾಣದೇ ತಾರತಮ್ಯ ಧೋರಣೆ ಅನುಸರಿಸಲಾಗುತ್ತಿದೆ ಎಂದು ಆರೋಪಿಸಿದರು.

ದೈಹಿಕ ಶಿಕ್ಷ ಕರಿಗೆ ಇಂನ್ಕ್ರಿಮೆಂಟ್‌, ಮುಂಬಡ್ತಿ, ಪ್ರಯಾಣ ಭತ್ಯೆ ಸೇರಿದಂತೆ ಯಾವುದೇ ಸವಲತ್ತುಗಳನ್ನೂ ನೀಡದೆ ಇಲಾಖೆ ಮತ್ತು ರಾಜ್ಯ ಸರಕಾರ ಶೋಷಣೆ ಮಾಡುತ್ತಿದೆ. ಕೆಲಸದ ಹೊರೆಯನ್ನು ಮಾತ್ರ ದೈಹಿಕ ಶಿಕ್ಷಣ ಶಿಕ್ಷ ಕರಿಗೆ ನೀಡುತ್ತಿವೆ ಎಂದು ದೂರಿದರು.

ಮುಂಬಡ್ತಿ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕಳೆದ 8 ತಿಂಗಳ ಹಿಂದೆಯೇ ರಾಜ್ಯ ಸರಕಾರದ ಪ್ರಾಥಮಿಕ ಮತ್ತು ಪ್ರೌಢಶಿಕ್ಷ ಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಮನವಿ ಸಲ್ಲಿಸಲಾಗಿದ್ದರೂ ಇದುವರೆಗೂ ಸ್ಪಂದಿಸದೇ ನಿರ್ಲಕ್ಷ ್ಯ ಧೋರಣೆ ತಾಳಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಮ್ಮ ಬೇಡಿಕೆಗಳ ಈಡೇರಿಕೆಗೆ ಉಳಿದಿರುವುದು ಹೋರಾಟದ ಹಾದಿ ಮಾತ್ರ ಎಂದ ಅವರು ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿರುವ ಎಲ್ಲ ದೈಹಿಕ ಶಿಕ್ಷ ಕರು ಹೋರಾಟಕ್ಕೆ ರಾಜ್ಯ ಸಂಘದೊಂದಿಗೆ ಕೈ ಜೋಡಿಸಬೇಕು. ಎಸ್ಮಾ ಜಾರಿ ಸೇರಿದಂತೆ ಯಾವುದೇ ಬೆದರಿಕೆಗೂ ಬಗ್ಗದೇ ಹೋರಾಟದಲ್ಲಿ ಪಾಲ್ಗೊಳ್ಳಬೇಕು ಎಂದರು.

ಎಲ್ಲ ಪ್ರಾಥಮಿಕ ಶಾಲೆಗಳಲ್ಲೂ ದೈಹಿಕ ಶಿಕ್ಷಣ ಶಿಕ್ಷ ಕರನ್ನು ನೇಮಕ ಮಾಡಬೇಕು. ದೈಹಿಕ ಶಿಕ್ಷಣ ಶಿಕ್ಷ ಕರಿಗೆ ಮುಖ್ಯಶಿಕ್ಷ ಕರಾಗಿ ಮತ್ತು ಸಿಆರ್‌ಪಿಗಳಾಗಿ ಮುಂಬಡ್ತಿ ನೀಡಬೇಕು. ಬಿಇಒ ಕಚೇರಿಗಳಲ್ಲಿ ಶಿಕ್ಷ ಣ ಸಂಯೋಜಕರನ್ನು ಮತ್ತು ಡಿಡಿಪಿಐ ಕಚೇರಿಗಳಲ್ಲಿ ಜಿಲ್ಲಾ ದೈಹಿಕ ಶಿಕ್ಷ ಣಾಧಿಕಾರಿಗಳನ್ನು ನೇಮಕ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ಸಂಘದ ರಾಜ್ಯ ಉಪಾಧ್ಯಕ್ಷೆ ಅನ್ನಪೂರ್ಣ ಪ್ರಾಸ್ತಾವಿಸಿದರು. ಸಂಘದ ಜಿಲ್ಲಾಧ್ಯಕ್ಷ ಮಹೇಶ್ವರಪ್ಪ ಅಧ್ಯಕ್ಷ ತೆ ವಹಿಸಿದ್ದರು, ರಾಜ್ಯ ಸಂಘದ ಉಪಾಧ್ಯಕ್ಷ Ü ವಿ.ಶಂಕರ್‌, ಲಕ್ಷ ್ಮಣ, ಸಂಘಟನಾ ಕಾರ್ಯದರ್ಶಿಗಳಾದ ಗಣೇಶ್‌, ಎಸ್‌.ಇ.ಲೋಕೇಶ್ವರಾಚಾರ್‌, ಸುಧಾ, ಸಹಕಾರ್ಯದರ್ಶಿ ನಾಗರತ್ನ, ಖಜಾಂಚಿ ಎಂ.ಯೋಗೇಶ್‌, ಜಿಲ್ಲಾ ಕಾರ್ಯದರ್ಶಿ ಫೈರೋಜ್‌ ಅಹಮದ್‌, ಪಾಂಡುಕುಮಾರ್‌ ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ