ಆ್ಯಪ್ನಗರ

ಯುವ ಸಂಸತ್ತಿನಿಂದ ರಾಜಕೀಯ,ಸಾಮಾಜಿಕ, ಆರ್ಥಿಕ ಜ್ಞಾನ

ವಿದ್ಯಾರ್ಥಿಗಳ ಕಲಿಕೆಗೆ ಸರಕಾರ ರೂಪಿಸಿರುವ ಅನೇಕ ಯೋಜನೆಗಳಲ್ಲಿ ಮಕ್ಕಳ ಯುವ ಸಂಸತ್‌ ಒಂದಾಗಿದ್ದು, ಇದು ಮಕ್ಕಳಲ್ಲಿ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಜ್ಞಾನ ಹೆಚ್ಚಿಸುತ್ತದೆ ಎಂದು ಜಿ.ಪಂ ಅಧ್ಯಕ್ಷೆ ಸುಜಾತ ಕೃಷ್ಣಪ್ಪ ಹೇಳಿದರು.

Vijaya Karnataka 30 Nov 2018, 5:00 am
ಚಿಕ್ಕಮಗಳೂರು: ವಿದ್ಯಾರ್ಥಿಗಳ ಕಲಿಕೆಗೆ ಸರಕಾರ ರೂಪಿಸಿರುವ ಅನೇಕ ಯೋಜನೆಗಳಲ್ಲಿ ಮಕ್ಕಳ ಯುವ ಸಂಸತ್‌ ಒಂದಾಗಿದ್ದು, ಇದು ಮಕ್ಕಳಲ್ಲಿ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಜ್ಞಾನ ಹೆಚ್ಚಿಸುತ್ತದೆ ಎಂದು ಜಿ.ಪಂ ಅಧ್ಯಕ್ಷೆ ಸುಜಾತ ಕೃಷ್ಣಪ್ಪ ಹೇಳಿದರು.
Vijaya Karnataka Web political social and economic knowledge from the youth parliament
ಯುವ ಸಂಸತ್ತಿನಿಂದ ರಾಜಕೀಯ,ಸಾಮಾಜಿಕ, ಆರ್ಥಿಕ ಜ್ಞಾನ


ಸಂಸದಿಯ ವ್ಯವಹಾರಗಳ ಇಲಾಖೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸಾರ್ವಜನಿಕ ಶಿಕ್ಷ ಣ ಇಲಾಖೆಯಿಂದ ಜಿ.ಪಂ. ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಯುವ ಸಂಸತ್‌ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ರಾಜ್ಯ ಸರಕಾರ ಶಿಕ್ಷ ಣ ಇಲಾಖೆಯಿಂದ ನಡೆಸುತ್ತಿರುವ ಯುವ ಸಂಸತ್‌ ಉತ್ತಮ ಕಾರ್ಯಕ್ರಮ. ಈ ಹಿಂದೆ ಮಕ್ಕಳು ಮಾಧ್ಯಮಗಳಲ್ಲಿ ಸಂಸತ್‌ ಕಲಾಪ ನೋಡುತ್ತಿದ್ದರು. ಈಗ ಸ್ಪತಃ ಅವರೇ ಅಣಕು ಸಂಸತ್‌ನಲ್ಲಿ ಭಾಗವಹಿಸಿ ತಮ್ಮ ಜ್ಞಾನ ಹೆಚ್ಚಿಸಿಕೊಳ್ಳುತ್ತಿದ್ದಾರೆ. ಇದೊಂದು ಉತ್ತಮ ಅವಕಾಶ. ಸದುಪಯೋಗಪಡಿಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಸಲಹ ನೀಡಿದರು.

ಉಪಾಧ್ಯಕ್ಷ ಆನಂದಪ್ಪ ಮಾತನಾಡಿ, ಮಕ್ಕಳ ಯುವ ಸಂಸತ್‌ ಕಾರ್ಯಕ್ರಮದಿಂದ ಮಕ್ಕಳಲ್ಲಿ ನಾಯಕತ್ವ ಗುಣ ಬೆಳೆಸಲು ಸಾಧ್ಯವಾಗುತ್ತದೆ. ಶಿಕ್ಷ ಣ ಇಲಾಖೆಯ ಚಿಂತಕರು ಮಕ್ಕಳಿಗಾಗಿ ಇಂತಹ ಯೋಜನೆ ರೂಪಿಸಿದ್ದಾರೆ. ಮಕ್ಕಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಜಿ.ಪಂ. ಶಿಕ್ಷ ಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಜಸಿಂತಾ ಅನಿಲ್‌ಕುಮಾರ್‌ ಮಾತನಾಡಿ, ಹಿಂದೆ ಮಕ್ಕಳು ದೂರದರ್ಶನದಲ್ಲಿ ಕಲಾಪ ನೋಡಿ ತಿಳಿದುಕೊಳ್ಳುತ್ತಿದ್ದರು. ಈಗ ಅವರೇ ಸ್ವತಃ ಭಾಗವಹಿಸಿ ಕಲಾಪದ ಬಗ್ಗೆ ಚರ್ಚಿಸಲಿದ್ದಾರೆ ಎಂದರು.

ಸಹ ಶಿಕ್ಷ ಕರಾದ ಕೃಷ್ಣೇಗೌಡ ಪ್ರಾಸ್ತಾಪಿಸಿದರು. ಜಿಲ್ಲೆಯ 8 ಶೈಕ್ಷ ಣಿಕ ವಲಯದಿಂದ 68 ಮಕ್ಕಳು ಅಣಕು ಸಂಸತ್‌ನಲ್ಲಿ ಭಾಗವಹಿಸಿದ್ದರು. ಜಿ.ಪಂ. ಮುಖ್ಯಕಾರ್ಯನಿರ್ವಹಣಾಧಿಕಾರಿ ಸತ್ಯಭಾಮ, ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಮಹೇಂದ್ರ, ಸದಸ್ಯರಾದ ಸೋಮಶೇಖರ್‌, ಬೆಳವಾಡಿ ರವೀಂದ್ರ, ಕವಿತಾ ಲಿಂಗರಾಜು, ಲೋಲಾಕ್ಷಿ ಬಾಯಿ, ಪ್ರೇಮ ಮಂಜುನಾಥ್‌, ಸಂಸದೀಯ ವ್ಯವಹಾರಗಳ ಇಲಾಖೆ, ಬೆಂಗಳೂರಿನ ಶಾಖಾ ಅಧಿಕಾರಿ ಕುಸುಮ, ಬಿಇಒ ಕೆ.ಎಸ್‌.ಜಯಣ್ಣ, ಮತ್ತಿತರರು ಹಾಜರಿದ್ದರು. ಯುವ ಸಂಸತ್‌ ಸಭೆಯ ಸಭಾಧ್ಯಕ್ಷ ರಾಗಿ ಬಸವನಹಳ್ಳಿ ಶಾಲೆಯ ಭೂಮಿಕ, ಮುಖ್ಯ ಮಂತ್ರಿಯಾಗಿ ಚಂದನ, ಇತರೆ ವಿದ್ಯಾರ್ಥಿಗಳು ಶಿಕ್ಷ ಣ ,ಆರೋಗ್ಯ, ಸಾರಿಗೆ, ಕೃಷಿ , ಕಾನೂನು ಸಚಿವರಾಗಿ ಹಾಗೂ ಪ್ರತಿ ಪಕ್ಷ ದ ನಾಯಕರು, ಸದಸ್ಯರಾಗಿ ಕಾರ್ಯ ನಿರ್ವಹಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ