ಆ್ಯಪ್ನಗರ

ಚುನಾವಣಾ ವೀಕ್ಷ ಕರಿಂದ ಪೂರ್ವ ಸಿದ್ಧತೆ ಪರಿಶೀಲನೆ

ಮೇ 29ರಂದು ನಡೆಯುವ ಪಟ್ಟಣ ಪಂಚಾಯಿತಿ ಚುನಾವಣೆಯ ಹಿನ್ನೆಲೆಯಲ್ಲಿ ಚುನಾವಣಾ ವೀಕ್ಷ ಕರಾದ ರಾಜ್ಯ ಮಹಿಳಾ ಆಯೋಗದ ಕಾರ್ಯದರ್ಶಿ ಲಕ್ಷ ್ಮಮ್ಮ ಅವರು ಸೋಮವಾರ ಪಟ್ಟಣಕ್ಕೆ ಆಗಮಿಸಿ ಪಟ್ಟಣ ಪಂಚಾಯಿತಿಯಲ್ಲಿ ಪೂರ್ವ ತಯಾರಿ ಹಾಗೂ ಪ್ರಗತಿ ಪರಿಶೀಲನೆ ನಡೆಸಿದರು.

Vijaya Karnataka 28 May 2019, 5:00 am
ನರಸಿಂಹರಾಜಪುರ : ಮೇ 29ರಂದು ನಡೆಯುವ ಪಟ್ಟಣ ಪಂಚಾಯಿತಿ ಚುನಾವಣೆಯ ಹಿನ್ನೆಲೆಯಲ್ಲಿ ಚುನಾವಣಾ ವೀಕ್ಷ ಕರಾದ ರಾಜ್ಯ ಮಹಿಳಾ ಆಯೋಗದ ಕಾರ್ಯದರ್ಶಿ ಲಕ್ಷ ್ಮಮ್ಮ ಅವರು ಸೋಮವಾರ ಪಟ್ಟಣಕ್ಕೆ ಆಗಮಿಸಿ ಪಟ್ಟಣ ಪಂಚಾಯಿತಿಯಲ್ಲಿ ಪೂರ್ವ ತಯಾರಿ ಹಾಗೂ ಪ್ರಗತಿ ಪರಿಶೀಲನೆ ನಡೆಸಿದರು.
Vijaya Karnataka Web CKM-27nrp2


ಎಂ.ಸಿ.ಸಿ. ತಂಡದ ಮುಖ್ಯಸ್ಥರೊಡನೆ ಚರ್ಚೆ ನಡೆಸಿ, ಚುನಾವಣಾ ಸಂದರ್ಭದಲ್ಲಿ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ನಿಗಾ ವಹಿಸುವಂತೆ ಸೂಚಿಸಿದರು. ನಂತರ ಪಟ್ಟಣ 11 ವಾರ್ಡುಗಳಿಗೂ ತೆರಳಿ ಮತಗಟ್ಟೆಯ ಪೂರ್ವ ಸಿದ್ದತೆ ಬಗ್ಗೆ ಪರಿಶೀಲನೆ ನಡೆಸಿದರು.

ಸಭೆಯಲ್ಲಿ ಚುನಾವಣಾಧಕಾರಿ ಪಿ.ನಾಗರಾಜ್‌ ಮಾತನಾಡಿ, ಚುನಾವಣಾ ಆಯೋಗದ ನಿರ್ದೇಶನದಂತೆ ಪಟ್ಟಣ ಪಂಚಾಯಿತಿ ಚುನಾವಣೆ ನಡೆಯುವ ಮೇ 29 ರಂದು ಪಟ್ಟಣದ ವ್ಯಾಪ್ತಿಯಲ್ಲಿ ಸಾರ್ವತ್ರಿಕ ರಜೆ ಘೋಷಿಸಲಾಗಿದೆ. ಸರಕಾರಿ ಕಚೇರಿ, ಸರಕಾರಿ ಶಾಲೆ-ಕಾಲೇಜು, ಖಾಸಗಿ ಶಾಲೆ-ಕಾಲೇಜು, ಬ್ಯಾಂಕ್‌ಗಳಿಗೂ ರಜೆ ಘೋಷಿಸಲಾಗಿದೆ. ಮೇ 29ರಂದು ಬೆಳಿಗ್ಗೆ 7 ರಿಂದ ಸಂಜೆ 5 ಗಂಟೆಯವರೆಗೆ ಚುನಾವಣೆ ನಡೆಯಲಿದ್ದು, ಈಗಾಗಲೇ ಮತಗಟ್ಟೆ ಅಧಿಕರಿಗಳಿಗೆ ತರಬೇತಿ ನೀಡಲಾಗಿದೆ. ಇದುವರೆಗೂ ಎಂ.ಸಿ.ಸಿ.ತಂಡಗಳಿಂದ ಯಾವುದೇ ದೂರು ದಾಖಲು ಆಗಿಲ್ಲ ಎಂದರು.

ಸಭೆಯಲ್ಲಿ ತಹಶೀಲ್ದಾರ್‌ ಚಂದ್ರಶೇಖರನಾಯಕ್‌, ಎಂ.ಸಿ.ತಂಡದ ಮುಖ್ಯಸ್ಥರಾದ ಸಹಾಯಕ ಕೃಷಿ ನಿರ್ದೇಶಕ ಪರಮೇಶ್ವರಪ್ಪ, ಸಹಾಯಕ ತೋಟಗಾರಿಕೆ ನಿರ್ದೇಶಕ ಈಶ್ವರಪ್ಪ, ಪಿ.ಡಿ.ಓ ಮನೀಶ್‌, ಚುನಾವಣಾ ವೆಚ್ಚದ ನೋಡಲ್‌ ಅಧಿಕಾರಿ ಧನಂಜಯ, ಎ.ಎಸ್‌.ಐ. ಚಂದ್ರಪ್ಪ, ಅಬಕಾರಿ ಇಲಾಖೆಯ ಅಧಿಕಾರಿ ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ