ಆ್ಯಪ್ನಗರ

ಮಂಗನ ಕಾಯಿಲೆಗೆ ಮುಂಜಾಗ್ರತೆ ಕ್ರಮ

ಕೊಪ್ಪ ತಾಲೂಕಿನ ನಕ್ಸಲ್‌ ಪೀಡಿತ ಪ್ರದೇಶದ ಕೆಲವೆಡೆಗಳಲ್ಲಿಮಂಗನ ಕಾಯಿಲೆ ಹರಡಿದೆ ಎಂಬುದು ಕೇವಲ ವದಂತಿಯಾಗಿದ್ದು, ಜನರು ಈ ಕುರಿತು ಭಯಭೀತರಾಗುವುದು ಬೇಡ ಎಂದು ಆರೋಗ್ಯ ಇಲಾಖೆ ಸ್ಪಷ್ಟನೆ ನೀಡಿದೆ.

Vijaya Karnataka 25 Jan 2020, 5:00 am
ಜಯಪುರ (ಚಿಕ್ಕಮಗಳೂರು) : ಕೊಪ್ಪ ತಾಲೂಕಿನ ನಕ್ಸಲ್‌ ಪೀಡಿತ ಪ್ರದೇಶದ ಕೆಲವೆಡೆಗಳಲ್ಲಿಮಂಗನ ಕಾಯಿಲೆ ಹರಡಿದೆ ಎಂಬುದು ಕೇವಲ ವದಂತಿಯಾಗಿದ್ದು, ಜನರು ಈ ಕುರಿತು ಭಯಭೀತರಾಗುವುದು ಬೇಡ ಎಂದು ಆರೋಗ್ಯ ಇಲಾಖೆ ಸ್ಪಷ್ಟನೆ ನೀಡಿದೆ.
Vijaya Karnataka Web 24JPR1_35
ಕೊಪ್ಪ ತಾಲೂಕಿನ ಮೆಣಸಿನಹಾಡ್ಯ ಮತ್ತಿತರ ಪ್ರದೇಶಗಳಲ್ಲಿಮಂಗನ ಕಾಯಿಲೆ ನಿಯಂತ್ರಣಕ್ಕೆ ಮುಂಜಾಗರೂಕತಾ ಕ್ರಮವಾಗಿ ಆರೋಗ್ಯ ಇಲಾಖೆಯಿಂದ ಲಸಿಕೆ ನೀಡಲಾಯಿತು.


ಜ.13ರಿಂದ ಮೂರು ದಿನಗಳ ಕಾಲ ಶಾಂತಿಗ್ರಾಮ ಆರೋಗ್ಯ ಕೇಂದ್ರದ ವೈದ್ಯರ ತಂಡ ವನ ಪ್ರದೇಶಗಳಲ್ಲಿರುವ ಉಣ್ಣೆಗಳನ್ನು ಶಿವಮೊಗ್ಗದ ಪರಿಮಾಣು ಕ್ರಿಮಿ ಪರಿಶೋಧನಾಲಯಕ್ಕೆ ಪರೀಕ್ಷೆಗೆ ಕಳುಹಿಸಲಾಗಿದೆ. ಸಾತ್‌ಕೊಡಿಗೆ ಎಸ್ಟೇಟ್‌ ವ್ಯಾಪ್ತಿಯಲ್ಲಿಸಿಕ್ಕ ಉಣ್ಣೆಯಲ್ಲಿಮಂಗನ ಕಾಯಿಲೆ ಪಾಸಿಟಿವ್‌ ಇರುವುದು ಪತ್ತೆಯಾಗಿದೆ. ಆದರೂ ಮಂಗನ ಕಾಯಿಲೆ ಬಗ್ಗೆ ಆತಂಕಪಡುವ ಅಗತ್ಯವಿಲ್ಲಎಂದು ಇಲಾಖೆ ತಿಳಿಸಿದೆ.

ತ್ವರಿತ ಮುಂಜಾಗ್ರತಾ ಕ್ರಮ
ಸೂಕ್ಷ್ಮ ಮಾಹಿತಿ ದೊರೆತ ತಕ್ಷಣವೇ ಮೆಣಸಿನಹಾಡ್ಯ, ಕಲ್ಲುಗುಡ್ಡೆ, ಕೊಗ್ರೆಯ 10 ಕಿ.ಮೀ. ಅಂತರದಲ್ಲಿವಾಸಿಸುವ 6ರಿಂದ 65 ವರ್ಷದೊಳಗಿನ ಸುಮಾರು 925 ಜನರಿಗೆ ಮುಂಜಾಗರೂಕತಾ ಕ್ರಮವಾಗಿ ಚುಚ್ಚುಮದ್ದು ನೀಡಲಾಗಿದೆ. 2010ರಲ್ಲಿಇದೇ ರೀತಿ ವ್ಯಾಕ್ಸಿಲೇಷನ್‌ ನೀಡಲಾಗಿದ್ದು, ಈ ವರ್ಷವೂ ಹೆಚ್ಚು ಜನರು ಇದರ ಪ್ರಯೋಜನ ಪಡೆದಿರುವುದರಿಂದ ಊಹಾಪೋಹಗಳನ್ನು ನಂಬದೆ ನಿರಾತಂಕವಾಗಿರಬಹುದು.
- ಡಾ.ಸುಧೀಂದ್ರ,
ವೈಧ್ಯಾಧಿಕಾರಿ, ಜಯಪುರ ಪಿಎಚ್‌ಸಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ