ಆ್ಯಪ್ನಗರ

ಬಿಜೆಪಿ ನಾಯಕರ ಪ್ರತಿಕೃತಿ ದಹಿಸಿ ಪ್ರತಿಭಟನೆ

ಪಟ್ಟಣದ ಬಸ್‌ ನಿಲ್ದಾಣ ಆವರಣದಲ್ಲಿ ಸೋಮವಾರ ಬ್ಲಾಕ್‌ ಕಾಂಗ್ರೆಸ್‌ ಕಾರ್ಯಕರ್ತರು ಬಿಜೆಪಿ ಭೂತ ದಹನ ಮಾಡಿ ಪ್ರತಿಭಟಿಸಿದರು.

Vijaya Karnataka 12 Feb 2019, 5:00 am
ಕೊಪ್ಪ: ಪಟ್ಟಣದ ಬಸ್‌ ನಿಲ್ದಾಣ ಆವರಣದಲ್ಲಿ ಸೋಮವಾರ ಬ್ಲಾಕ್‌ ಕಾಂಗ್ರೆಸ್‌ ಕಾರ್ಯಕರ್ತರು ಬಿಜೆಪಿ ಭೂತ ದಹನ ಮಾಡಿ ಪ್ರತಿಭಟಿಸಿದರು.
Vijaya Karnataka Web CKM-11KPH5


ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಸುಧೀರ್‌ ಕುಮಾರ್‌ ಮುರೊಳ್ಳಿ ಮಾತನಾಡಿ, ವ್ಯಾಟ್ಸ್‌ ಅಪ್‌ನಲ್ಲಿ ಮಹಾತ್ಮ ಗಾಂಧಿ ಪ್ರತಿಮೆಗೆ ಹೆಣ್ಣು ಮಗಳೊಬ್ಬಳು ಪಿಸ್ತೂಲ್‌ನಿಂದ ಶೂಟ್‌ ಮಾಡಿರುವ ದೃಶ್ಯ ಪ್ರಸಾರವಾಗಿದೆ. ಇದು ಬಿಜೆಪಿ ನಾಯಕರ ಭೀಭತ್ಸ ಮತ್ತು ಕ್ರೌರ್ಯದ ಮನಸ್ಥಿತಿಯನ್ನು ಬಿಂಬಿಸುತ್ತದೆ. ಇಂತಹ ಭೂತವನ್ನು ಮತ್ತು ಆಪರೇಶನ್‌ ಕಮಲದ ಮೂಲಕ ಸರಕಾರ ಅಸ್ಥಿರಗೊಳಿಸಲು ಯತ್ನಿಸಿರುವ ಯಡಿಯೂರಪ್ಪ ಅವರ ಭೂತದ ಪ್ರತಿಕೃತಿಯನ್ನು ಸುಡುವ ಮೂಲಕ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಕೋಟಿಗಟ್ಟಲೆ ಹಣದ ಆಮಿಷ ಒಡ್ಡಿರುವ ಬಿ.ಎಸ್‌.ಯಡಿಯೂರಪ್ಪ ಅವರ ಬಳಿ ಅಷ್ಟೊಂದು ಹಣ ಹೇಗೆ ಬಂತು ಎಂಬ ಬಗ್ಗೆ ಯಾವುದೇ ಐಟಿ ಅಧಿಕಾರಿ ತಂಡ ಪ್ರಶ್ನಿಸಿಲ್ಲ. ಯಡಿಯೂರಪ್ಪ ಅದರ ಬಗ್ಗೆ ಜನರಿಗೆ ಸ್ಪಷ್ಟನೆ ನೀಡಬೇಕು. ಇದು ಅವರ ಹಣವಲ್ಲ. ಮೋದಿ ಕಳುಹಿಸಿರುವ ಹಣವಾಗಿದೆ. ಮೋದಿ ಒಬ್ಬ ಶೋಕಿಲಾಲ, ಬೇಜವಾಬ್ದಾರಿ ಪ್ರಧಾನಿ. ಅವರಿಗೆ ಬಡವರ, ರೈತರ ಬಗ್ಗೆ ಕಾಳಜಿಯಿಲ್ಲ. ಅಟೊ ವಿಮೆ ಮತ್ತು ತೆರಿಗೆ ಹೆಚ್ಚಳ, ಪೆಟ್ರೋಲ್‌ ಬೆಲೆ ಹೆಚ್ಚಳವಾಗಿದೆ. ಬಡವರ ಖಾತೆಗೆ 15 ಲಕ್ಷ ರೂ., ಪಾಕಿಸ್ತಾನವನ್ನು ಬಗ್ಗುಬಡಿಯುವ, ದೇಶದ ಯುವಜನತೆಗೆ ಉದ್ಯೋಗ ಸೃಷ್ಟಿಸುವ, ರಾಮ ಮಂದಿರ ನಿರ್ಮಿಸುವ ಅವರ ಭರವಸೆ ಸುಳ್ಳಾಗಿದೆ. ಪ್ರಸ್ತುತ ಬಿಜೆಪಿ ನಾಯಕರು ದೇಶದಲ್ಲಿ ಕೋಮು ಗಲಭೆ ಹುಟ್ಟುಹಾಕಲು ಪ್ರಯತ್ನ ಮಾಡುತ್ತಿದ್ದಾರೆ. ಅವರಿಗೆ ಜನರು ಬದ್ಧಿ ಕಲಿಸಬೇಕು ಎಂದರು.

ಕಾಂಗ್ರೆಸ್‌ ಮುಖಂಡ ಎ.ಎಸ್‌.ನಾಗೇಶ್‌ ಮಾತನಾಡಿ, ಬಿಜೆಪಿ ನಾಯಕರ ವಿಕೃತ ಮನಸ್ಥಿತಿಯನ್ನು ಎಲ್ಲರೂ ಖಂಡಿಸಬೇಕು. ಅವರ ಸುಳ್ಳು ಆಶ್ವಾಸನೆಗೆ ಮರುಳಾಗಬಾರದು ಎಂದರು.

ಕಾಂಗ್ರೆಸ್‌ ಕಾರ್ಯಕರ್ತರು ಮಾನವ ಸರಪಳಿ ನಿರ್ಮಿಸಿ, ಪ್ರತಿಕೃತಿ ದಹನ ಮಾಡಿದರು.

ಮುಖಂಡರಾದ ಯು.ಎಸ್‌.ಶಿವಪ್ಪ, ಎಚ್‌.ಎಂ.ಸತೀಶ್‌, ಹರೀಶ್‌ ಭಂಡಾರಿ ಮತ್ತಿತರರು ಮಾತನಾಡಿದರು. ನಂತರ ಬಿಜೆಪಿ ನಾಯಕರ ಭೂತ ದಹನ ಮಾಡಿ ಆಕ್ರೋಶ ವ್ಯಕ್ತಪಡಿಸಲಾಯಿತು. ಮುಖಂಡರಾದ ಓಣಿತೋಟ ರತ್ನಾಕರ್‌, ಸುಬ್ರಹ್ಮಣ್ಯ ಶೆಟ್ಟಿ, ವಿಜಯಕುಮಾರ್‌, ಇನೇಶ್‌, ಚಿಂತನ್‌, ದೇವರಾಜ್‌, ಬರ್ಕತ್‌ ಆಲಿ, ಶಶಿಕುಮಾರ್‌ ಮತ್ತಿತರರು ಹಾಜರಿದ್ದರು.

ನುಗ್ಗಿ ಮಂಜುನಾಥ್‌ ಸ್ವಾಗತಿಸಿ, ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ