ಆ್ಯಪ್ನಗರ

ನಿವೇಶನಕ್ಕೆ ಆಗ್ರಹಿಸಿ ಪ್ರತಿಭಟನೆ

ನಿವೇಶನಕ್ಕೆ ಆಗ್ರಹಿಸಿ ತಾಲೂಕಿನ ವಿವಿಧ ಗ್ರಾಮಸ್ಥರು ವಸತಿಗಾಗಿ ಹೋರಾಟ ವೇದಿಕೆ ಹಾಗೂ ಸಿಪಿಐಎಂಎಲ್‌ ನೇತೃತ್ವದಲ್ಲಿ ಗೋಣಿಬೀಡು ಗಾ.್ರಪಂ. ಆವರಣದಿಂದ ಪಟ್ಟಣದವರೆಗೆ ಕಾಲ್ನಡಿಗೆ ಜಾಥಾ ನಡೆಸಿ ತಹಸೀಲ್ದಾರ್‌ ಕಚೇರಿ ಎದುರು ಶುಕ್ರವಾರ ಪ್ರತಿಭಟನಾ ಸಮಾವೇಶ ನಡೆಸಿದರು.

Vijaya Karnataka 3 Feb 2019, 5:00 am
ಮೂಡಿಗೆರೆ : ನಿವೇಶನಕ್ಕೆ ಆಗ್ರಹಿಸಿ ತಾಲೂಕಿನ ವಿವಿಧ ಗ್ರಾಮಸ್ಥರು ವಸತಿಗಾಗಿ ಹೋರಾಟ ವೇದಿಕೆ ಹಾಗೂ ಸಿಪಿಐಎಂಎಲ್‌ ನೇತೃತ್ವದಲ್ಲಿ ಗೋಣಿಬೀಡು ಗಾ.್ರಪಂ. ಆವರಣದಿಂದ ಪಟ್ಟಣದವರೆಗೆ ಕಾಲ್ನಡಿಗೆ ಜಾಥಾ ನಡೆಸಿ ತಹಸೀಲ್ದಾರ್‌ ಕಚೇರಿ ಎದುರು ಶುಕ್ರವಾರ ಪ್ರತಿಭಟನಾ ಸಮಾವೇಶ ನಡೆಸಿದರು.
Vijaya Karnataka Web CKM-2MDG-P1


ಸಿಪಿಐಎಂಎಲ್‌ ರಾಜ್ಯ ಕಾರ್ಯದರ್ಶಿ ರುದ್ರಯ್ಯ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರಕಾರಗಳ ಆಡಳಿತ ನೀತಿ ಎರಡು ಅಂಚಿನ ಕತ್ತರಿಯಂತೆ ಬಡವರನ್ನು ಕತ್ತರಿಸುತ್ತಿವೆ. ಶಾದಿಭಾಗ್ಯ, ಅನ್ನಭಾಗ್ಯ, ಕ್ಷೀರಭಾಗ್ಯ, ಇಂದಿರಾ ಕ್ಯಾಂಟೀನ್‌ ಮೂಲಕ ಬಡವರನ್ನು ಭಿಕ್ಷ ುಕರ ರೀತಿ ಬಿಂಬಿಸಲಾಗುತ್ತಿದೆ. ಮೇಕ್‌ಇನ್‌ ಇಂಡಿಯಾ ಫೋನ್‌ಪೇ, ಸ್ವಚ್ಛಭಾರತ್‌ ಇವುಗಳು ಅಂತೆಕಂತೆಯಲ್ಲಿ ಹಳಿಯಿಲ್ಲದ ರೈಲಿನಂತಾಗಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜನರ ಅಗತ್ಯ ಬೇಡಿಕೆಗಳಾದ ಮನೆ, ನೀರು, ರಸ್ತೆ, ಶಿಕ್ಷ ಣ, ಉದ್ಯೋಗ ಮತ್ತು ಆರೋಗ್ಯ ಇತ್ಯಾದಿಗಳನ್ನು ಬದಿಗೆ ಸರಿಸಿ ಶ್ರೀಮಂತರ ಪರವಾದ ಹೆದ್ದಾರಿಗಳು, ಹೈಸ್ಪೀಡ್‌ ರೈಲು, ವಿಮಾನ, ಯಂತ್ರ ತಂತ್ರಗಳ ಸಂಶೋಧನೆಯಲ್ಲಿ ದಲ್ಲಾಳಿಗಳ ಮುಖಾಂತರ ಬಿಂಬಿಸುತ್ತ, ಧರ್ಮದ ಹೆಸರಿನಲ್ಲಿ ಜನರನ್ನು ವಿಭಜಿಸಿ ದಾರಿ ತಪ್ಪಿಸಲಾಗುತ್ತಿದೆ ಎಂದು ಆರೋಪಿಸಿದರು.

ವಸತಿಗಾಗಿ ಹೋರಾಟ ವೇದಿಕೆ ಅಧÜ್ಯಕ್ಷ ಎಸ್‌.ಶೇಖರ್‌ ಮಾತನಾಡಿ, ಮಲೆನಾಡಿನ ಮಣ್ಣಿನ ಮಕ್ಕಳ ಬದುಕಿಗಾಗಿ ಹಲವು ವರ್ಷಗಳಿಂದ ನಿವೇಶನ ನೀಡಿ ಎಂದು ಮನವಿ ಸಲ್ಲಿಸಲಾಗುತ್ತಿದೆ. ಸಾವಿರಾರು ಜನರು ಇನ್ನೂ ಕೂಲಿ ಲೈನ್‌ಗಳಲ್ಲಿ ಗುಲಾಮರಂತೆ ಜೀವಿಸುತ್ತಿದ್ದು ಇದುವರೆಗೂ ನಿರ್ಲಕ್ಷ ್ಯಕ್ಕೊಳಗಾಗಿದ್ದಾರೆ. ವಂಚಿತರಿಗೆ ಕೂಡಲೇ ನಿವೇಶನ ನೀಡಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ತೀವ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ವೇದಿಕೆ ಕಾರ್ಯದರ್ಶಿ ಶಿವಪ್ಪ, ನಾರಾಯಣ, ರಾಜೇಶ್‌, ರವಿ, ಬಿ.ಕೃಷ್ಣ ಮತ್ತಿತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ