ಆ್ಯಪ್ನಗರ

ಸೆ.20ರಂದು ಮೂಡಿಗೆರೆಯಲ್ಲಿಪ್ರತಿಭಟನೆ

ಮಹಾಮಳೆಯಿಂದ ತಾಲೂಕಿನಲ್ಲಿ500 ಕೋಟಿಗೂ ಅಧಿಕ ನಷ್ಟ ಸಂಭವಿಸಿದೆ. ಆದರೆ ಇದೂವರೆಗೂ ಕೇಂದ್ರ ಹಾಗೂ ರಾಜ್ಯ ಸರಕಾರ ಪರಿಹಾರ ನೀಡದೇ ವಂಚಿಸಿರುವುದರಿಂದ ಸೆ.20ರಂದು ನೆರೆ ಸಂತ್ರಸ್ತರ ಹೋರಾಟ ಸಮಿತಿ ವಿವಿಧ ರಾಜಕೀಯ ಪಕ್ಷಗಳು ಹಾಗೂ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಪಟ್ಟಣದಲ್ಲಿಬೃಹತ್‌ ಪ್ರತಿಭಟನೆ ಹಮ್ಮಿಕೊಂಡಿದೆ.

Vijaya Karnataka 19 Sep 2019, 5:00 am
ಮೂಡಿಗೆರೆ: ಮಹಾಮಳೆಯಿಂದ ತಾಲೂಕಿನಲ್ಲಿ500 ಕೋಟಿಗೂ ಅಧಿಕ ನಷ್ಟ ಸಂಭವಿಸಿದೆ. ಆದರೆ ಇದೂವರೆಗೂ ಕೇಂದ್ರ ಹಾಗೂ ರಾಜ್ಯ ಸರಕಾರ ಪರಿಹಾರ ನೀಡದೇ ವಂಚಿಸಿರುವುದರಿಂದ ಸೆ.20ರಂದು ನೆರೆ ಸಂತ್ರಸ್ತರ ಹೋರಾಟ ಸಮಿತಿ ವಿವಿಧ ರಾಜಕೀಯ ಪಕ್ಷಗಳು ಹಾಗೂ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಪಟ್ಟಣದಲ್ಲಿಬೃಹತ್‌ ಪ್ರತಿಭಟನೆ ಹಮ್ಮಿಕೊಂಡಿದೆ.
Vijaya Karnataka Web protest in moodydire on september 20
ಸೆ.20ರಂದು ಮೂಡಿಗೆರೆಯಲ್ಲಿಪ್ರತಿಭಟನೆ


ಮಾಜಿ ಸಚಿವ ಬಿ.ಬಿ.ನಿಂಗಯ್ಯ ಅವರು ಬುಧವಾರ ಪಟ್ಟಣದಲ್ಲಿಸುದ್ದಿಗೋಷ್ಟಿಯಲ್ಲಿಮಾತನಾಡಿ, ಅಂದು ಬೆಳಗ್ಗೆ 10,30ಕ್ಕೆ ಪಟ್ಟಣದ ಪ್ರವಾಸಿ ಮಂದಿರದಿಂದ ಪ್ರಮುಖ ಬೀದಿಯಲ್ಲಿಮೆರವಣಿಗೆ ಸಾಗಿ ತಹಸೀಲ್ದಾರ್‌ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಮದರು.

ಹಿಂದೆಂದೂ ಕಾಣದಂತಹ ಅತಿವೃಷ್ಟಿ ತಾಲೂಕಿನಲ್ಲಿಸಂಭವಿಸಿದೆ. ಇದನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಬೇಕು. ಕಳೆದ ವರ್ಷ ಕೊಡಗಿನಲ್ಲಿನೆರೆಯಿಂದ ಹಾನಿಗೊಂಡ ಪ್ರದೇಶಕ್ಕೆ ಅಂದಿನ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಸರಕಾರ ದಿ ಬೆಸ್ಟ್‌ ಪ್ಯಾಕೇಜ್‌ ಘೋಷಿಸಿದ್ದರು. ಅದೇ ಮಾದರಿಯಲ್ಲಿಈಗಿನ ರಾಜ್ಯ ಸರಕಾರ ಪರಿಹಾರ ಘೋಷಿಸಬೇಕು. ವೈಜ್ಞಾನಿಕವಾಗಿ ಸರ್ವೆ ನಡೆಸಿ ಹಾನಿಗೊಂಡಿರುವ ಜಮೀನು, ಬೆಳೆ, ಮನೆ ಕುಸಿತ, ಸಾರ್ವಜನಿಕರ ಆಸ್ತಿ ನಷ್ಟಕ್ಕೆ ಸೂಕ್ತ ಪರಿಹಾರ ನೀಡಬೇಕು. ಕುಸಿದಿರುವ 10 ಸೇತುವೆ ನಿರ್ಮಿಸಬೇಕೆಂದು ಒತ್ತಾಯಿಸಿದರು.

ಕಾಂಗ್ರೆಸ್‌ ಮುಖಂಡ ಬಿ.ಎಸ್‌.ಜಯರಾಂ , ಜೆಡಿಎಸ್‌ ಜಿಲ್ಲಾಧ್ಯಕ್ಷ ರಂಜನ್‌ ಅಜಿತ್‌ ಕುಮಾರ್‌, ರಾಷ್ಟ್ರೀಯ ಸಮಿತಿ ಜಿಲ್ಲಾಧ್ಯಕ್ಷ ಮಗ್ಗಲಮಕ್ಕಿ ಗಣೇಶ್‌, ಬಿಎಸ್‌ಪಿ ಅಧ್ಯಕ್ಷ ಬಕ್ಕಿ ಮಂಜು, ಪ.ಪಂ. ಸದಸ್ಯ ಹೊಸಕರೆ ರಮೇಶ್‌, ಬೆಳೆಗಾರ ಸಂಘದ ಉಪಾಧ್ಯಕ್ಷ ದೇವರಾಜು, ರೈತ ಸಂಘದ ಅಧ್ಯಕ್ಷ ಪುಟ್ಟಸ್ವಾಮಿ ಗೌಡ, ಜೆಡಿಎಸ್‌ ಮುಖಂಡರಾದ ಗಬ್ಬಳ್ಳಿ ಚಂದ್ರೇಗೌಡ, ಬಿ.ಎಂ.ಲೋಹಿತ್‌, ಕಾಂಗ್ರೆಸ್‌ ಮುಖಂಡರಾದ ಎಂ.ಎಸ್‌.ಅನಂತ್‌, ಬಿಳಗುಳ ಸಂಪತ್‌ ಉಪಸ್ಥಿತರಿದ್ದರು.

---------

ಈ ಬಾರಿ ಎಲ್ಲಾರಾಜಕೀಯ ಪಕ್ಷಗಳು ವಿವಿಧ ಸಂಘ ಸಂಸ್ಥೆಗಳು ಸೇರಿ ಪ್ರತಿಭಟಿಸಿ ಸರಕಾರಕ್ಕೆ ಎಚ್ಚರಿಕೆ ನೀಡುತ್ತಿದ್ದೇವೆ. ಮುಂದಿನ 15 ದಿನದಲ್ಲಿಪರಿಹಾರ ಘೋಷಣೆಯಾಗಬೇಕು. ಇಲ್ಲವಾದರೆ ತಾಲೂಕು ಕಚೇರಿ ಎದುರು ಅನಿರ್ಧಿಷ್ಟಾವಧಿ ದರಣಿ ನಡೆಸಲಾಗುವುದು.

-ಎಂ.ಎಸ್‌.ಅನಂತ್‌,
ಬ್ಲಾಕ್‌ ಕಾಂಗ್ರೆಸ್‌ ವಕ್ತಾರ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ