ಆ್ಯಪ್ನಗರ

ಕಲಾಪದಿಂದ ದೂರ ಉಳಿದು ವಕೀಲರ ಪ್ರತಿಭಟನೆ

ಮೋಟಾರು ವಾಹನ ಕಾಯಿದೆ ತಿದ್ದುಪಡಿ ಮಾಡಿದ ಕೇಂದ್ರ ಸರಕಾರದ ಧೋರಣೆ ಖಂಡಿಸಿ ಗುರುವಾರ ಪಟ್ಟಣದ ವಕೀಲರು ಪ್ರತಿಭಟನೆ ನಡೆಸಿ ನ್ಯಾಯಾಲಯ ಕಲಾಪಗಳಿಂದ ದೂರ ಉಳಿದರು.

Vijaya Karnataka 20 Sep 2019, 5:00 am
ತರೀಕೆರೆ : ಮೋಟಾರು ವಾಹನ ಕಾಯಿದೆ ತಿದ್ದುಪಡಿ ಮಾಡಿದ ಕೇಂದ್ರ ಸರಕಾರದ ಧೋರಣೆ ಖಂಡಿಸಿ ಗುರುವಾರ ಪಟ್ಟಣದ ವಕೀಲರು ಪ್ರತಿಭಟನೆ ನಡೆಸಿ ನ್ಯಾಯಾಲಯ ಕಲಾಪಗಳಿಂದ ದೂರ ಉಳಿದರು.
Vijaya Karnataka Web 19SHIVUP4_35


ಸಭೆಯಲ್ಲಿಮಾತನಾಡಿದ ಹಿರಿಯ ವಕೀಲ ಕೆ.ಲಿಂಗರಾಜು, ಇದು ಸಾರ್ವಜನಿಕರ ಮೇಲೇ ಸರಕಾರ ನಡೆಸಿದ ದೌರ್ಜನ್ಯ. ಯಾವುದೇ ಸಂಘ ಸಂಸ್ಥೆ, ಸಾರ್ವಜನಿಕ ಸಂಸ್ಥೆಗಳೂಂದಿಗೆ ಚರ್ಚೆ ನಡೆಸದೆ ಏಕಾಏಕಿ ಕೇಂದ್ರ ಸರಕಾರ ತೆಗೆದುಕೊಂಡ ನಿರ್ಣಯ ಖಂಡನೀಯ ಎಂದು ಹೇಳಿದರು.

ವಕೀಲರ ಸಂಘದ ಅಧ್ಯಕ್ಷ ಟಿ.ಎನ್‌.ಮಹದೇವಸ್ವಾಮಿ ಮಾತನಾಡಿ, ಬೆಂಗಳೂರು ವಕೀಲರ ಸಂಘ ಕರೆ ನೀಡಿದೆ ಎಂದು ಪ್ರತಿಭಟಿಸುತ್ತಿಲ್ಲ, ರಾಜ್ಯ ಎಲ್ಲವಕೀಲರ ಸಂಘಗಳು ಪ್ರತಿಭಟನೆ ಮಾಡುತ್ತಿದ್ದು, ಕೇಂದ್ರ ಸರಕಾರ ವಿಧಿಸುತ್ತಿರುವ ದಂಡ ಕೂಡ ಅವೈಜ್ಞಾನಿಕವಾಗಿದೆ. ಸರಿ ಇಲ್ಲದ ಕಾರಣ ಸರಕಾರದ ಕಣ್ಣು ತೆರೆಸಲು ಈ ಪ್ರತಿಭಟನೆ ಎಂದು ಹೇಳಿದರು.

ವಕೀಲ ಎಸ್‌.ಎನ್‌.ಮಲ್ಲೇಗೌಡ ಮಾತನಾಡಿ,ದಿನ ನಿತ್ಯ ತೆಗೆದಕೊಳ್ಳುವ ಕೂಲಿ 100 ರೂ ಆದರೆ ಇದರ ಹತ್ತು ಪಟ್ಟು ದಂಡ ವಿಧಿಸುವುದು ಯಾವ ನ್ಯಾಯ, ಮೊದಲು ಸರಕಾರ ಉತ್ತಮ ರಸ್ತೆಗಳನ್ನು ರೂಪಿಸಲು ಎಂದು ಹೇಳಿದರು.

ವಕೀಲ ಕೆ.ಸಿ.ಚಂದ್ರಪ್ಪ ಮಾತನಾಡಿ, ಕೇಂದ್ರ ಸರಕಾರದ ನೀತಿ ಹಗಲು ದರೋಡೆ, ಕೂಡಲೆ ಹೆಚ್ಚಿಸಿರುವ ದಂಡ ಕಡಿಮೆ ಮಾಡಬೇಕು ಎಂದು ಆಗ್ರಹಿಸಿದರು.

ವಕೀಲ ಬಿ.ಎಸ್‌.ನಿರಂಜನಮೂರ್ತಿ ಮಾತನಾಡಿ, ಇದುವರೆಗೂ ರಾಜ್ಯ ಬಾರ್‌ ಕೌನ್ಸಿಲ್‌ ಆಗಲಿ, ಕೇಂದ್ರ ಬಾರ್‌ ಕೌನ್ಸಿಲ್‌ ಆಗಲಿ ಪ್ರತಿಭಟನೆಗೆ ಕರೆ ನೀಡಿಲ್ಲ. ಇದುವರೆಗೂ ರಾಜ್ಯ ವಕೀಲರ ಸಂಘ ನಮ್ಮ ಯಾವುದೇ ಸಮಸ್ಯೆಗಳಿಗೆ ಸ್ಪಂದಿಸಿಲ್ಲ, ಆದರೆ ಬೆಂಗಳೂರಿಗೆ ಸೀಮಿತವಾಗಿರುವ ಬೆಂಗಳೂರು ವಕೀಲರ ಸಂಘ ನೀಡಿರುವ ಕರೆಗೆ ನಾವು ಪ್ರತಿಭಟನೆ ಮಾಡುವುದು ಸರಿಯಲ್ಲಎಂದು ಹೇಳಿದರು. ಬಿ.ಪಿ.ವಿಕಾಸ್‌, ಎಂ.ಕೆ.ತೇಜಮೂರ್ತಿ,ಜಿ.ಎನ್‌.ಚಂದ್ರಶೇಖರ್‌, ಕೆ.ಸಿ.ಜ್ಞಾನಮೂರ್ತಿ, ಎಚ್‌.ಸಿ.ಸತೀಶ್‌ ಇನ್ನಿತರರು ಮಾತನಾಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ