ಆ್ಯಪ್ನಗರ

ಮಳೆ ಕ್ಷೀಣಿಸಿದೆ, ಜೀವಜಲ ಮಿತವಾಗಿ ಬಳಸಿ

ನಾಡಿನಲ್ಲಿ ಮಳೆ ಅಭಾವ ತುಂಬಾ ಇದೆ. ಮಕ್ಕಳು ನೀರನ್ನು ಮಿತವಾಗಿ ಬಳಸುವ ಗುಣ ಬೆಳಸಿಕೊಳ್ಳಬೇಕೆಂದು ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

Vijaya Karnataka 21 Jul 2019, 5:00 am
ಅಜ್ಜಂಪುರ : ನಾಡಿನಲ್ಲಿ ಮಳೆ ಅಭಾವ ತುಂಬಾ ಇದೆ. ಮಕ್ಕಳು ನೀರನ್ನು ಮಿತವಾಗಿ ಬಳಸುವ ಗುಣ ಬೆಳಸಿಕೊಳ್ಳಬೇಕೆಂದು ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
Vijaya Karnataka Web CKM-20AJP02


ಸಾಣೇಹಳ್ಳಿ ಶಿವಕುಮಾರ ರಂಗಮಂದಿರದಲ್ಲಿ ಗುರುಪಾದೇಶ್ವರ ಪ್ರೌಢಶಾಲೆ ಹಾಗೂ ಶಿವಕುಮಾರ ಸ್ವಾಮಿಜಿ ಹಿರಿಯ ಪ್ರಾಥಮಿಕ ಶಾಲೆಗಳ ವಿದ್ಯಾರ್ಥಿ ಸಂಘಗಳ ಉದ್ಘಾಟನೆ, ಪ್ರತಿಭಾ ಪುರಸ್ಕಾರ ಹಾಗೂ ಹೆಜ್ಜೆ ಗುರುತು ಸ್ಮರಣೆ ಸಂಚಿಕೆ ಗುರುವಾರ ಬಿಡುಗಡೆಗೊಳಿಸಿ ಮಾತನಾಡಿದರು. ಮಕ್ಕಳಲ್ಲಿ ಅದ್ಭುತ ಪ್ರತಿಭೆ ಅಡಗಿರುತ್ತದೆ. ಪ್ರತಿಭೆಯನ್ನು ಶಿಕ್ಷ ಕರು ಗುರುತಿಸಿ, ಹೆಚ್ಚಿನ ತರಬೇತಿ ನೀಡಿ ಪ್ರೋತ್ಸಾಹಿಸಬೇಕು. ವಿದ್ಯಾರ್ಥಿಗಳು ಕೇವಲ ಪಠ್ಯಕ್ರಮಗಳಿಗೆ ಅಂಟಿಕೊಳ್ಳದೆ ಕಲೆ, ಸಾಹಿತ್ಯ, ಸಂಗೀತ, ಧ್ಯಾನ, ಯೋಗ, ಕ್ರೀಡೆ ಮುಂತಾದ ಪಠ್ಯೇತರ ಚಟುವಟಿಕೆಗಳಲ್ಲೂ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಶಿವಮೊಗ್ಗ ಬಸವಕೇಂದ್ರ ಬಸವ ಮರುಳಸಿದ್ದ ಸ್ವಾಮೀಜಿ ಮಾತನಾಡಿ, ಪ್ರಣತೆ ತಯಾರಾಗಬೇಕಾದಲ್ಲಿ ಕುಂಬಾರ ವರ್ಷವಿಡಿ ಕಷ್ಟಪಡಬೇಕು, ಬತ್ತಿ ತಯಾರಗಬೇಕಾದಲ್ಲಿ ರೈತ ವರ್ಷವಿಡಿ ಕಷ್ಟಪಡಬೇಕು, ಹಾಗೂ ಎಣ್ಣೆ ತಯಾರಾಗಬೇಕಾದಲ್ಲಿ ಮತ್ತೊಬ್ಬ ರೈತ ವರ್ಷವಿಡಿ ಕಷ್ಟಪಡಬೇಕು. ಪ್ರಣತೆ, ಬತ್ತಿ, ಎಣ್ಣೆ ಈ ಮೂರು ವಸ್ತುಗಳು ಸೇರಿದರೆ ಮಾತ್ರ ದೀಪವನ್ನು ಬೆಳಗಿಸಲು ಸಾಧ್ಯ. ಹಾಗೇಯೆ ವಿದ್ಯಾರ್ಥಿಗಳು ತಮ್ಮ ಆಂತರಿಕ ದೀಪವನ್ನು ತುಂಬಾ ಪ್ರಯತ್ನಪಟ್ಟು ಬೆಳಗಿಸಿದಾಗ ಮಾತ್ರ ಗುರಿ ಮುಟ್ಟಬಹುದು ಎಂದರು.

ಸ್ಥಳೀಯ ಸಲಹಾ ಸಮಿತಿಯ ಅಧ್ಯಕ್ಷ ಎ.ಸಿ. ಚಂದ್ರಪ್ಪ ಮಾತನಾಡಿ, ವಿದ್ಯಾರ್ಥಿಗಳು ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಲಿ ಭಾಗವಹಿಸಿ ವಿದ್ಯಾರ್ಥಿಗಳು ಎಲ್ಲ ರೀತಿಯಲ್ಲಿ ಉದಯೋನ್ಮುಖರಾಗಬೇಕು. ಇನ್ನೂ ಹೆಚ್ಚು ಅಂಕಗಳನ್ನು ಗಳಿಸುವುದರ ಮೂಲಕ ಗುರುಗಳಿಗೆ ಹಾಗೂ ಮಠಕ್ಕೆ ಒಳ್ಳೆಯ ಹೆಸರನ್ನು ತರಬೇಕು ಎಂದು ಸಲಹೆ ನೀಡಿದರು.

ಕ್ಷೇತ್ರ ಶಿಕ್ಷ ಣಾಧಿಕಾರಿ ಎಲ್‌. ಜಯಪ್ಪ , ಶಿವಕುಮಾರ ಸ್ವಾಮೀಜಿ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷ ಡಿ.ವಿ. ಗಂಗಾಧರಪ್ಪ ಮಾತನಾಡಿದರು.ಕಾರ್ಯದರ್ಶಿ ಸಿ.ಕೆ. ಸ್ವಾಮಿ, ಖಜಾಂಚಿ ಕೆ.ಸಿ. ಶಿವಮೂರ್ತಿ, ಗುರುಪಾದೇಶ್ವರ ಪ್ರೌಢಶಾಲೆಯ ಮುಖ್ಯ ಶಿಕ್ಷ ಕ ಹೊನ್ನೇಶಪ್ಪ ಹಾಗೂ ಶಿವಕುಮಾರ ಸ್ವಾಮೀಜಿ , ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷ ಕ ಬಿ.ಎಸ್‌. ಶಿವಕುಮಾರ ಉಪಸ್ಥಿತರಿದ್ದರು. ಈ ಸಂದರ್ಭ ಶಿವಕುಮಾರ ಸ್ವಾಮೀಜಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಬಿ.ಎಸ್‌. ಶಿವಕುಮಾರ್‌ ಸಂಪಾದಿತ ಹೆಜ್ಜೆ ಗುರುತು ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಲಾಯಿತು. ಕಳೆದ ಸಾಲಿನಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿ ಗೌರವಿಸಲಾಯಿತು. ಭಾನುಪ್ರಿಯ ಸ್ವಾಗತಿಸಿ, ವಂದನಾ, ಚಂದನ ಕಾರ್ಯಕ್ರಮ ನಿರೂಪಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ