ಆ್ಯಪ್ನಗರ

ಮಲೆನಾಡಲ್ಲಿ ಮತ್ತೆ ಶುರುವಾದ ಮಳೆ

ಜಿಲ್ಲೆಯಲ್ಲಿ ಸತತ 1 ವಾರ ಸುರಿದ ಧಾರಾಕಾರ ಮಳೆ ಇನ್ನೇನು ಹೋಯಿತು ಎನ್ನುವಷ್ಟರಲ್ಲಿ ಮಲೆನಾಡು ಭಾಗದಲ್ಲಿ ಬುಧವಾರದಿಂದ ಮತ್ತೆ ಶುರುವಾಗಿದೆ.

Vijaya Karnataka 15 Aug 2019, 5:00 am
ಚಿಕ್ಕಮಗಳೂರು : ಜಿಲ್ಲೆಯಲ್ಲಿ ಸತತ 1 ವಾರ ಸುರಿದ ಧಾರಾಕಾರ ಮಳೆ ಇನ್ನೇನು ಹೋಯಿತು ಎನ್ನುವಷ್ಟರಲ್ಲಿ ಮಲೆನಾಡು ಭಾಗದಲ್ಲಿ ಬುಧವಾರದಿಂದ ಮತ್ತೆ ಶುರುವಾಗಿದೆ.
Vijaya Karnataka Web rain in malnadu again
ಮಲೆನಾಡಲ್ಲಿ ಮತ್ತೆ ಶುರುವಾದ ಮಳೆ


ಬೋರ್ಗೆರೆದು ಸುರಿದ ಮಹಾಮಳೆಯಿಂದ ಜಿಲ್ಲೆಯ ಮೂಡಿಗೆರೆ, ಶೃಂಗೇರಿ, ಕೊಪ್ಪ ಹಾಗು ನರಸಿಂಹರಾಜಪುರ ತಾಲೂಕಿನಲ್ಲಿ ಅತೀವೃಷ್ಟಿಯಾಗಿದ್ದು, ಮೂಡಿಗೆರೆ ತಾಲೂಕಿನಲ್ಲಿ ಅತಿ ಹೆಚ್ಚು ಭೂಕುಸಿತವಾಗಿ ಜನ ಮನೆ ತೊರೆದು ಕಾಳಜಿ ಕೇಂದ್ರಗಳಲ್ಲಿದ್ದಾರೆ. ಇನ್ನೇನು ಮಳೆ ಬಿಡುವು ನೀಡಿತು ಎಂದು ಮಂಗಳವಾರ ಕೆಲವರು ತಮ್ಮ ಊರುಗಳತ್ತ ಹೆಜ್ಜೆ ಹಾಕಿದ್ದರು. ಮಳೆಯಿಂದ ಮನೆ ಕಳೆದುಕೊಂಡ ನಿರಾಶ್ರಿತರು ಕೂಡ ಇನ್ನೇನು ಊರಿಗೆ ತಲುಪಿ ಮುಂದೆ ಬದುಕು ಕಟ್ಟಿಕೊಳ್ಳುವ ಆಲೋಚನೆಯಲ್ಲಿರುವಾಗ ಮತ್ತೆ ಮಳೆ ಆರಂಭವಾಗಿದೆ.

ಮೂಡಿಗೆರೆ, ಕೊಟ್ಟಿಗೆಹಾರ , ಬಾಳೆಹೊನ್ನೂರು ಭಾಗದಲ್ಲಿ ಮಳೆ ತುಸು ಹೆಚ್ಚಾಗಿದ್ದು ನೆರೆ ಪೀಡಿತ ಪ್ರದೇಶದಲ್ಲಿ ಮತ್ತೆ ಸಮಸ್ಯೆ ಬಿಗಡಾಯಿಸುವ ಸಾಧ್ಯತೆ ಇದೆ. ಕಳೆದ 24 ಗಂಟೆಯಲ್ಲಿ ಜಿಲ್ಲೆಯ ಚಿಕ್ಕಮಗಳೂರು ಕಸಬಾ ಹೋಬಳಿ 3 ಮಿಮೀ, ಅಂಬಳೆ ಹೋಬಳಿ 2, ಆಲ್ದೂರು 8, ಸಂಗಮೇಶ್ವರಪೇಟೆ 10,ಕಳಸಾಪುರ 1, ಆವತಿ 8, ಜಾಗರ 6, ವಸ್ತಾರೆ 6, ಕಡೂರು ತಾಲೂಕಿನ ಸಿಂಗಟಗೆರೆ 2, ಯಗಟಿ 1, ಪಂಚನಹಳ್ಳಿ 5, ಕೊಪ್ಪ 11, ಹರಿಹರಪುರ 19,ಮೇಗುಂದ 18, ಮೂಡಿಗೆರೆ 3, ಬಣಕಲ್‌ 5, ಗೋಣಿಬೀಡು 4, ಕಳಸ 20, ಜಾವಳಿ 10, ನರಸಿಂಹರಾಜಪುರ 7, ಬಾಳೆಹೊನ್ನೂರು 9, ಶೃಂಗೇರಿ 19, ಕಿಗ್ಗಾ ಹೋಬಳಿಯಲ್ಲಿ 36ಮಿಮೀ ಮಳೆಯಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ