ಆ್ಯಪ್ನಗರ

ಅಜ್ಜಂಪುರದ ನೂರಾರು ಸಮಸ್ಯೆ ತೆರೆದಿಟ್ಟ ಸಾರ್ವಜನಿಕರು

ಪಟ್ಟಣದ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿಚಿಕ್ಕಮಗಳೂರು ಲೋಕಾಯುಕ್ತ ಡಿವೈಎಸ್‌ಪಿ ಸಚಿನ್‌ಕುಮಾರ್‌ ಅವರು ಏರ್ಪಡಿಸಿದ್ದ ಸಾರ್ವಜನಿಕರ ಕುಂದು ಕೊರತೆ, ಅಹವಾಲು ಮತ್ತು ಅಧಿಕಾರಿಗಳ ಸಭೆಯಲ್ಲಿನೂರಾರು ಸಮಸ್ಯೆಗಳನ್ನು ಸಾರ್ವಜನಿಕರು ತೆರೆದಿಟ್ಟರು.

Vijaya Karnataka 21 Sep 2019, 5:00 am
ಅಜ್ಜಂಪುರ: ಪಟ್ಟಣದ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿಚಿಕ್ಕಮಗಳೂರು ಲೋಕಾಯುಕ್ತ ಡಿವೈಎಸ್‌ಪಿ ಸಚಿನ್‌ಕುಮಾರ್‌ ಅವರು ಏರ್ಪಡಿಸಿದ್ದ ಸಾರ್ವಜನಿಕರ ಕುಂದು ಕೊರತೆ, ಅಹವಾಲು ಮತ್ತು ಅಧಿಕಾರಿಗಳ ಸಭೆಯಲ್ಲಿನೂರಾರು ಸಮಸ್ಯೆಗಳನ್ನು ಸಾರ್ವಜನಿಕರು ತೆರೆದಿಟ್ಟರು.
Vijaya Karnataka Web reception by lokayukta dysp
ಅಜ್ಜಂಪುರದ ನೂರಾರು ಸಮಸ್ಯೆ ತೆರೆದಿಟ್ಟ ಸಾರ್ವಜನಿಕರು


ಗಾಂಧಿ ವೃತ್ತದಿಂದ ಬುಕ್ಕಾಂಬುಧಿ ರಸ್ತೆ ತಿರುವಿನಲ್ಲಿರುವ ಕಟ್ಟಡದಿಂದ ವಾಹನ ಸಂಚಾರರು ಅತಿ ವೇಗದಿಂದ ಬಂದು ಅಪಘಾತಕ್ಕೀಡಾಗುತ್ತಿವೆ. ಪಾರ್ಕಿಂಗ್‌ ಸಮಸ್ಯೆ, ಗಾಂಧಿ ವೃತ್ತದಲ್ಲಿರುವ ವೃತ್ತ ವಿಸ್ತರಣೆ ನನೆಗುದಿಗೆ ಬಿದ್ದಿರುವುದರಿಂದ ಟ್ರಾಫಿಕ್‌ ಸಮಸ್ಯೆ, ಡಿ. ಗ್ರೂಪ್‌ ನೌಕರರ ಕೊರತೆಯಿಂದ ಅವನತಿಯತ್ತ ಸಾಗುತ್ತಿರುವ ಅಮೃತಮಹಲ್‌ ತಳಿ ಸಂವರ್ಧನಾ ಕೇಂದ್ರ, ಗಾಂಧಿವೃತ್ತದಿಂದ ನಾಲ್ಕೂ ಕಡೆ ತೆರಳುವ ರಸ್ತೆಗಳ ವಿಸ್ತರಣೆ ಸಮಸ್ಯೆ, ಪ್ರವಾಸಿ ಮಂದಿರ ಸಮಸ್ಯೆ ಬಗ್ಗೆ ಗಮನ ಸೆಳೆದರು.

ಬಸ್‌ ನಿಲ್ದಾಣ ರೋಗ ರುಜಿನಗಳ ತಾಣವಾಗಿದ್ದು, ರಾತ್ರಿ ಸಮಯದಲ್ಲಿಅನೈತಿಕ ಚಟುವಟಿಕೆ ನಡೆಯುತ್ತಿದೆ. ಸಾರ್ವಜನಿಕರ ಶೌಚಾಲಯ ಗಬ್ಬೆದ್ದು ನಾರುತ್ತಿದ್ದು, ಮಹಿಳಾ ಶೌಚಾಲಯಕ್ಕೆ 5 ರೂ. ವಸೂಲಿ ಮಾಡುತ್ತಿದ್ದರೂ ಯಾವುದೇ ಸೌಲಭ್ಯ ಇಲ್ಲ. ತಾಲೂಕು ಕಚೇರಿಯಲ್ಲಿಅರ್ಹ ಫಲಾನುಭವಿಗಳಿಗೆ ಸೌಲಭ್ಯ ಸಿಗದೇ ವಂಚಿತರಾಗಿದ್ದಾರೆ. ಬಗರ್‌ಹುಕುಂ ಜಮೀನು ವಾರಸುದಾರರಿಗೆ ಅರಣ್ಯ ಇಲಾಖೆ ಸಿಬ್ಬಂದಿ ನೀಡುತ್ತಿರುವ ತೊಂದರೆ, ಗ್ರಾ.ಪಂ. ಸದಸ್ಯರಿಂದ ಸರಕಾರಿ ಮೈದಾನ ಅತಿಕ್ರಮಣ ಬಗ್ಗೆ ದೂರು ನೀಡಲಾಯಿತು.

ತರೀಕೆರೆ ರಸ್ತೆಯಲ್ಲಿನಿರ್ಮಿಸುತ್ತಿರುವ ನೇರ ಡಿವೈಡರ್‌ನಿಂದ ವಾಹನ ಸವಾರರಿಗೆ ಆಗುತ್ತಿರುವ ತೊಂದರೆ, ಪಟ್ಟಣದ ವಿವಿಧ ಭಾಗಗಳಲ್ಲಿಗ್ರಾಮ ಪಂಚಾಯಿತಿಗೆ ಸೇರಿದ ಖಾಲಿ ನಿವೇಶನ ವಶಕ್ಕೆ ಪಡೆಯುವುದು, ಕಾಲೇಜು ಆವರಣದಲ್ಲಿಕೊಳಚೆ ನೀರು ಸಂಗ್ರಹಗೊಂಡಿರುವ ಬಗ್ಗೆ ಪರಿಶೀಲಿಸುವಂತೆ ಕೋರಲಾಯಿತು.

ಡಿವೈಎಸ್‌ಪಿ ಸಚಿನ್‌ಕುಮಾರ್‌ ಮಾತನಾಡಿ, ವಿಪರೀತ ಸಮಸ್ಯೆಗಳಿಂದ ತಾಲೂಕು ಕೇಂದ್ರವಾಗಿರುವ ಅಜ್ಜಂಪುರ ನಲುಗುತ್ತಿದೆ. ರಾಜ್ಯ ಸರಕಾರದ ಯೋಜನೆಗಳ ಬಗ್ಗೆ ನಿಗಾವಹಿಸಿ ಅರ್ಹ ಫಲಾನುಭವಿಗಳಿಗೆ ಸೌಲಭ್ಯ ಸಿಗಲೆಂದು ಅಹವಾಲು-ಅಧಿಕಾರಿಗಳ ಸಭೆ ಆಯೋಜಿಸಿದೆ. ಮುಂದಿನ ದಿನದಲ್ಲಿಎಲ್ಲಇಲಾಖೆ ಹಿರಿಯ ಅಧಿಕಾರಿಗಳ ಸಭೆ ಕರೆದು ಪರಿಹಾರಕ್ಕೆ ಪ್ರಯತ್ನಿಸುತ್ತೇನೆ ಎಂದರು.

ನಂತರ ಸಾರ್ವಜನಿಕರೊಂದಿಗೆ ಬಸ್‌ ನಿಲ್ದಾಣಕ್ಕೆ ಆಗಮಿಸಿ, ತಂಗುದಾಣ, ಶೌಚಾಲಯ ವೀಕ್ಷಿಸಿ ಕಿಡಿಕಾರಿದರು. ಬುಕ್ಕಾಂಬುಧಿ ರಸ್ತೆಗೆ ತೆರಳಿ ಅಪಘಾತವಾಗುವ ತಿರುವನ್ನು ಪರಿಶೀಲಿಸಿದರು. ಶೆಟ್ರು ಸಿದ್ದಪ್ಪ ಸರಕಾರಿ ಕ್ರೀಡಾಂಗಣದ ಮೈದಾನವನ್ನು ಅಕ್ರಮವಾಗಿ ಬಳಸಿಕೊಂಡು ಕಟ್ಟಡ ಕಟ್ಟುತ್ತಿರುವ ಬಗ್ಗೆ ಗ್ರಾ.ಪಂ. ಸದಸ್ಯರ ಮೇಲೆ ಜನತಾ ಪ್ರಜಾಪ್ರತಿನಿಧಿ ಕಾಯಿದೆಯಡಿ ಕ್ರಮ ಕೈಗೊಳ್ಳಲಾಗುವುದು ಎಂದರು.

ತಹಸೀಲ್ದಾರ್‌ ವೈ. ವಿಶ್ವೇಶ್ವರರೆಡ್ಡಿ, ಗ್ರಾ.ಪಂ. ಅಧ್ಯಕ್ಷೆ ಚನ್ನಬಸಮ್ಮ, ಪಿಡಿಒ ಶ್ರೀನಿವಾಸ್‌, ಮುಖಂಡ ಜಿ. ನಟರಾಜ್‌, ಮಲ್ಲಿಕಾರ್ಜುನ ಅಡವಿ, ಗುರುಮೂರ್ತಿ ಮತ್ತಿತರರು ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ