ಆ್ಯಪ್ನಗರ

ಅತಿವೃಷ್ಠಿ ಪರಿಹಾರಕ್ಕೆ 12 ಕೋಟಿ ಬಿಡುಗಡೆ

ಶೃಂಗೇರಿ ಕ್ಷೇತ್ರಕ್ಕೆ ಅತಿವೃಷ್ಠಿಯಿಂದ ಹಾನಿಗಳೊಗಾದ ಕಾಮಗಾರಿಗಾಗಿ ಎರಡನೇ ಹಂತದಲ್ಲಿ 12 ಕೋಟಿ ರೂ. ಬಿಡುಗಡೆಯಾಗಿದೆ ಎಂದು ಮಲೆನಾಡು ಅಭಿವೃದ್ಧಿ ಮಂಡಳಿ ಅಧ್ಯಕ್ಷ ಹಾಗೂ ಶಾಸಕ ಟಿ.ಡಿ.ರಾಜೇಗೌಡ ತಿಳಿಸಿದರು.

Vijaya Karnataka 10 Mar 2019, 5:00 am
ನರಸಿಂಹರಾಜಪುರ : ಶೃಂಗೇರಿ ಕ್ಷೇತ್ರಕ್ಕೆ ಅತಿವೃಷ್ಠಿಯಿಂದ ಹಾನಿಗಳೊಗಾದ ಕಾಮಗಾರಿಗಾಗಿ ಎರಡನೇ ಹಂತದಲ್ಲಿ 12 ಕೋಟಿ ರೂ. ಬಿಡುಗಡೆಯಾಗಿದೆ ಎಂದು ಮಲೆನಾಡು ಅಭಿವೃದ್ಧಿ ಮಂಡಳಿ ಅಧ್ಯಕ್ಷ ಹಾಗೂ ಶಾಸಕ ಟಿ.ಡಿ.ರಾಜೇಗೌಡ ತಿಳಿಸಿದರು.
Vijaya Karnataka Web CKM-9nrp4


ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ,ಈ ಹಿಂದೆ ಅತಿವೃಷ್ಟಿ ಪರಿಹಾರ ಕಾಮಗಾರಿಗೆ 25 ಕೋಟಿ ರೂ. ಬಿಡುಗಡೆಯಾಗಿದ್ದು ಕಾಮಗಾರಿಗಳು ಪ್ರಗತಿಯಲ್ಲಿದೆ.ಅತಿವೃಷ್ಠಿಯಿಂದ ಹಾನಿಗೊಳಗಾದ ಕಾಮಗಾರಿಗಳನ್ನು ಮತ್ತೆ ಕೈಗೆತ್ತಿಕೊಳ್ಳಲಾಗುವುದು.ಮಲೆನಾಡು ಭಾಗದಲ್ಲಿ ಮಳೆಗಾಲದಲ್ಲಿ ಡಾಂಬರೀಕರಣ ಮಾಡಲು ಸಮಸ್ಯೆಯಾಗುವುದರಿಂದ ಮೇ 15 ರ ಒಳಗೆ ಎಲ್ಲ ಕಾಮಗಾರಿ ಮುಗಿಸಬೇಕಾಗಿದೆ ಎಂದರು.

ಕುಡಿಯುವ ನೀರಿಗೆ 50 ಲಕ್ಷ

ಈಗಾಗಲೇ ಕುಡಿಯುವ ನೀರಿಗಾಗಿ ಕ್ಷೇತ್ರದ 3 ತಾಲೂಕು ಹಾಗೂ ಖಾಂಡ್ಯ ಹೋಬಳಿಗೆ ತಲಾ 50 ಲಕ್ಷ ರೂ. ಬಿಡುಗಡೆಯಾಗಿದೆ.ಈಗಾಗಲೇ ಸಂಬಂಧಪಟ್ಟ ಎಂಜಿನಿಯರ್‌ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಕಾಮಗಾರಿಗೆ ಟೆಂಡರ್‌ ಕರೆಯಲಾಗಿದೆ.ಕುಡಿಯುವ ನೀರಿಗೆ ಹಣದ ಕೊರತೆ ಇಲ್ಲ.ತೀವ್ರ ತೊಂದರೆಯಾದಲ್ಲಿ ಟ್ಯಾಂಕರ್‌ ಮೂಲಕ ಕುಡಿಯುವ ನೀರು ನೀಡಲಾಗುವುದು.ಕೆಲವು ಭಾಗದಲ್ಲಿ ವಿದ್ಯುತ್‌ ಸಮಸ್ಯೆ ಇದೆ ಎಂಬ ದೂರುಗಳು ಬಂದಿದ್ದು ಅಗತ್ಯವಿದ್ದರೆ 3 ತಾಲೂಕುಗಳಿಗೂ ಮೊಬೈಲ್‌ ಜನರೇಟರ್‌ ವ್ಯವಸ್ಥೆ ಮಾಡಲಾಗುವುದು.ಆ ಜನರೇಟರ್‌ ನ್ನು ಸಮಸ್ಯೆ ಇರುವ ಜಾಗಕ್ಕೆ ಕಳಿಸಲಾಗುವುದು. ಸರಕಾರಿ ಬೋರ್‌ವೆಲ್‌ನಲ್ಲಿ ಸಾಕಷ್ಟು ನೀರು ಸಿಗದಿದ್ದರೆ ಖಾಸಗಿಯವರ ಒಪ್ಪಿಗೆ ಪಡೆದು ಅವರ ಕೊಳವೆಬಾವಿಯನ್ನು ಬಳಸಿಕೊಂಡು ಕುಡಿಯುವ ನೀರು ನೀಡಲಾಗುವುದು ಎಂದರು.

3 ಪಟ್ಟಣಗಳಿಗೆ ತಲಾ 15 ಲಕ್ಷ


ನರಸಿಂಹರಾಜಪುರ,ಕೊಪ್ಪ ಹಾಗೂ ಶೃಂಗೇರಿ ಪಟ್ಟಣದ ಕುಡಿಯುವ ನೀರಿನ ಯೋಜನೆಗೆ ತಲಾ 15 ಲಕ್ಷ ಬಿಡುಗಡೆಯಾಗಿದೆ.ಕ್ಷೇತ್ರಕ್ಕೆ ಅಲ್ಪಸಂಖ್ಯಾತರ ಕಲ್ಯಾಣ ಅಭಿವೃದ್ಧಿಗೆ 4.99 ಕೋಟಿ ರೂ.ಬಿಡುಗಡೆಯಾಗಿದೆ.ಶೀಘ್ರದಲ್ಲೇ ಕಾಮಗಾರಿ ಪ್ರಾರಂಭಿಸಲಾಗುವುದು.ಶುದ್ಧಗಂಗಾ ಘಟಕ ಯೋಜನೆಯಡಿ ಕಾಮಗಾರಿಗೆ 1.20 ಕೋಟಿ ರೂ. ಬಿಡುಗಡೆಯಾಗಿದೆ.ವಿಶ್ವೇಶ್ವರಯ್ಯ ಜಲ ನೀರಾವರಿ ನಿಗಮದಿಂದ 5 ಕೋಟಿ ಬಿಡುಗಡೆ ಆಗಿದ್ದು, ಈ ಅನುದಾನದಲ್ಲಿ ರಸ್ತೆ,ಚರಂಡಿ ನಿರ್ಮಿಸಲಾಗುವುದು.ಕಾವೇರಿ ನೀರಾವರಿ ನಿಗಮಕ್ಕೆ 4.50 ಕೋಟಿ ರೂ.ಪ್ರಸ್ತಾವನೆ ಸಲ್ಲಿಸಿದ್ದು ಹಣ ಮಂಜೂರಾಗಿದೆ ಎಂದು ತಿಳಿಸಿದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ