ಆ್ಯಪ್ನಗರ

ಜಗತ್ತಿನ ಉಳಿವಿಗೆ ಧರ್ಮ ಅಗತ್ಯ: ಶೃಂಗೇರಿ ಶ್ರೀ

ಹಿಂದೂ ಧರ್ಮದ ಮಹಾನ್‌ ಗ್ರಂಥಗಳಾದ ರಾಮಾಯಣ, ಮಹಾಭಾರತ ವೇದಗಳ ತಳಹದಿಯಲ್ಲಿ ರೂಪಿತಗೊಂಡಿವೆ ಎಂದು ಶ್ರೀ ಶಾರದಾ ಪೀಠದ ಜಗದ್ಗುರು ಭಾರತೀತೀರ್ಥ ಸ್ವಾಮೀಜಿ ಹೇಳಿದರು.

Vijaya Karnataka 7 Feb 2019, 5:00 am
ಶೃಂಗೇರಿ: ಹಿಂದೂ ಧರ್ಮದ ಮಹಾನ್‌ ಗ್ರಂಥಗಳಾದ ರಾಮಾಯಣ, ಮಹಾಭಾರತ ವೇದಗಳ ತಳಹದಿಯಲ್ಲಿ ರೂಪಿತಗೊಂಡಿವೆ ಎಂದು ಶ್ರೀ ಶಾರದಾ ಪೀಠದ ಜಗದ್ಗುರು ಭಾರತೀತೀರ್ಥ ಸ್ವಾಮೀಜಿ ಹೇಳಿದರು.
Vijaya Karnataka Web CKM-6SRI2


ನರಸಿಂಹವನದ ಗುರುನಿವಾಸದಲ್ಲಿ ಮಂಗಳವಾರ ಕನ್ನಡ ವೈಶ್ಯ ಸಮಾಜದ ಸುವರ್ಣ ಮಹೋತ್ಸವದ ಗುರುವಂದನಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಜಗತ್ತಿನ ಸೃಷ್ಟಿಯೊಂದಿಗೆ ಧರ್ಮದ ಅಸ್ತಿತ್ವದ ಉಳಿವಿಗಾಗಿ ಯಜ್ಞ ಯಾಗಾದಿಗಳು ಪ್ರಾರಂಭಗೊಂಡವು. ನಾವು ಸಂತೃಪ್ತರಾಗಬೇಕಾದರೆ ದೇವರನ್ನು ಸಂತೃಪ್ತಿಗೊಳಿಸಬೇಕು. ಧಾರ್ಮಿಕ ಆಚರಣೆ ನಿರಂತರವಾಗಿ ನಡೆದರೆ ಮಾತ್ರ ಕಾಲಕಾಲಕ್ಕೆ ಮಳೆ ಬೆಳೆಯಾಗಲು ಸಾಧ್ಯ. ಧರ್ಮದ ಉಳಿವು ಜಗತ್ತಿನ ಉಳಿವು ಎಂದು ವೇದಗಳಲ್ಲಿ ಹೇಳಲಾಗಿದೆ. ಧರ್ಮದ ರಕ್ಷ ಣೆಗಾಗಿ ಬೇರೆ ಬೇರೆಬೇರೆ ಯುಗದಲ್ಲಿ ನಾನಾ ರೂಪದಲ್ಲಿ ಭಗವಂತ ಆವತರಿಸಿದ್ದಾನೆ. ಶ್ರೀ ಶಂಕರಭಗವತ್ಪಾದರ ಆವತಾರದ ಮುನ್ನ ದೇಶದಲ್ಲಿ ಧರ್ಮಸ್ವರೂಪದ ಗೊಂದಲವಿತ್ತು. ಧರ್ಮದ ಸ್ವರೂಪ ಬುದ್ಧಿಗೆ ಎಟಕುವುದಿಲ್ಲ. ವೇದಗಳ ಮೂಲಕ ಧರ್ಮದ ಸೂಕ್ಷ ್ಮತೆಗಳನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.

ನಮ್ಮ ದೇಶದಲ್ಲಿ ಅನಾದಿಕಾಲದಿಂದ ಆಚರಣೆಯಲ್ಲಿ ಇದ್ದ ಸನಾತನಧರ್ಮ ಅತ್ಯಂತ ಪವಿತ್ರವಾದುದು. ಧರ್ಮ ಮಾನವನ ಬದುಕಿನ ಅವಿಭಾಜ್ಯ ಅಂಗ. ಧರ್ಮವನ್ನು ಬಿಟ್ಟು ಮನುಷ್ಯ ಜೀವನ ಸಾಗಿಸಲು ಸಾಧ್ಯವಿಲ್ಲ. ಜಗತ್ತಿನ ಉಳಿವಿಗೆ ಧರ್ಮದ ಅಗತ್ಯವಿದೆ. ಧರ್ಮದ ಅಧಃಪತನವಾದಾಗ ಸಾಕ್ಷಾತ್‌ ಭಗವಂತ ಭೂಮಿಯಲ್ಲಿ ಅವತರಿಸಿ ಅಧರ್ಮವನ್ನು ನೀಗಿಸಿ ಧರ್ಮ ಕಾಪಾಡುತ್ತಾನೆ ಎಂಬ ಸಂದೇಶವನ್ನು ಭಗವತ್‌ಗೀತೆಯಲ್ಲಿ ಉಲ್ಲೇಖಿಸಲಾಗಿದೆ ಎಂದರು.

ಕನ್ನಡ ವೈಶ್ಯ ಸಮಾಜದ ಮಂಜುನಾಥ ಪದ್ಮನಾಭ ಶ್ರೇಷ್ಠಿ ಮಾತನಾಡಿ, ಶ್ರೀ ಅಭಿನವತೀರ್ಥ ಮಹಾಸ್ವಾಮೀಜಿ ಅವರ ಕೃಪಾಶೀರ್ವಾದದಿಂದ 1969ರಲ್ಲಿ ರೂಪಿತಗೊಂಡ ನಮ್ಮ ಸಮಾಜ ಪ್ರಸ್ತುತ ಉಭಯ ಶ್ರೀಗಳ ಮಾರ್ಗದರ್ಶನದಂತೆ ಮುನ್ನಡೆ ಸಾಧಿಸಿದೆ ಎಂದರು. ಸುವರ್ಣ ಮಹೋತ್ಸವದ ಸ್ಮರಣ ಸಂಚಿಕೆ ಸುವರ್ಣಸಂಭ್ರಮ ಕನ್ನಡ ವೈಶ್ಯ ಸಮಾಜ ನಡೆದು ಬಂದ ದಾರಿ ಸಾಕ್ಷ ್ಯಚಿತ್ರ ಹಾಗೂ ಛಾಯಾಚಿತ್ರವನ್ನು ಶ್ರೀ ಭಾರತೀತೀರ್ಥ ಸ್ವಾಮೀಜಿ ಬಿಡುಗಡೆಗೊಳಿಸಿದರು. ಶ್ರೀಗಳ ಆಪ್ತಸಹಾಯಕ ಕೃಷ್ಣಮೂರ್ತಿ, ಆದ್ವೈತ ರೀಸರ್ಚ್‌ ಸೆಂಟರ್‌ನ ಆನಂದ್‌ ಮುಂತಾದವರನ್ನು ಕನ್ನಡ ವೈಶ್ಯ ಸಮಾಜದ ವತಿಯಿಂದ ಗೌರವಿಸಲಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ