ಆ್ಯಪ್ನಗರ

ಕುಡಿಯುವ ನೀರು ಒದಗಿಸುವಂತೆ ಮನವಿ

ಕೊಟ್ಟಿಗೆಹಾರ ಸಮೀಪದ ದೇವನಗೂಲ್‌ ಗ್ರಾಮದಲ್ಲಿ ಕಳೆದ ಹನ್ನೆರಡು ದಿನದಿಂದ ಕುಡಿಯುವ ನೀರು ಸಮರ್ಪಕವಾಗಿ ಬಾರದೆ ಇರುವುದರಿಂದ ತೊಂದರೆಯಾಗಿದ್ದು ಕ್ರಮ ಕೈಗೊಳ್ಳಬೇಕು ಎಂದು ದೇವನಗೂಲ್‌ ಗ್ರಾಮಸ್ಥರು ತರುವೆ ಗ್ರಾ.ಪಂ. ಪಿಡಿಒ ಕೆ.ವಿ.ಶಾರದಾ ಅವರಿಗೆ ಮನವಿ ಸಲ್ಲಿಸಿದರು.

Vijaya Karnataka 2 Apr 2019, 5:00 am
ಬಣಕಲ್‌ : ಕೊಟ್ಟಿಗೆಹಾರ ಸಮೀಪದ ದೇವನಗೂಲ್‌ ಗ್ರಾಮದಲ್ಲಿ ಕಳೆದ ಹನ್ನೆರಡು ದಿನದಿಂದ ಕುಡಿಯುವ ನೀರು ಸಮರ್ಪಕವಾಗಿ ಬಾರದೆ ಇರುವುದರಿಂದ ತೊಂದರೆಯಾಗಿದ್ದು ಕ್ರಮ ಕೈಗೊಳ್ಳಬೇಕು ಎಂದು ದೇವನಗೂಲ್‌ ಗ್ರಾಮಸ್ಥರು ತರುವೆ ಗ್ರಾ.ಪಂ. ಪಿಡಿಒ ಕೆ.ವಿ.ಶಾರದಾ ಅವರಿಗೆ ಮನವಿ ಸಲ್ಲಿಸಿದರು.
Vijaya Karnataka Web request drinking water
ಕುಡಿಯುವ ನೀರು ಒದಗಿಸುವಂತೆ ಮನವಿ


ಕಳೆದ ಒಂದು ವಾರದಿಂದ ಗ್ರಾಮದಲ್ಲಿ ಕುಡಿಯುವ ನೀರಿಗೆ ವ್ಯತ್ಯಯ ಉಂಟಾಗಿದೆ. ಗ್ರಾಮಕ್ಕೆ ಸರಾಗವಾಗಿ ಬರುತ್ತಿದ್ದ ನೀರಿಗೆ ಅಡ್ಡಲಾಗಿ ಇನ್ನೊಂದು ದೊಡ್ಡ ಪೈಪ್‌ ಅಳವಡಿಸಿರುವುದರಿಂದ ನಮ್ಮ ಗ್ರಾಮಕ್ಕೆ ನೀರೇ ಬರುತ್ತಿಲ್ಲ. ಮೊದಲೇ ಬಿಸಿಲ ಝಳಕ್ಕೆ ಅಂತರ್ಜಲ ಕುಸಿತದಿಂದ ಕುಡಿಯುವ ನೀರು ಪೈಪ್‌ನಲ್ಲಿ ತೊಟ್ಟಿಕ್ಕುತ್ತಿರುವುದರಿಂದ ಈಗ ಬರುತ್ತಿರುವ ನೀರೂ ನಿಂತು ಹೋಗಿದೆ. ಗ್ರಾಮದಲ್ಲಿ ನೀರಿಲ್ಲದೇ ಜನರು ಪರದಾಡುವಂತಾಗಿದೆ ಎಂದರು.

ಮನವಿ ಸ್ವೀಕರಿಸಿ ಮಾತನಾಡಿದ ಪಿಡಿಒ ಶಾರದಾ, ನಾನು ದೇವನಗೂಲ್‌ ಗ್ರಾಮಕ್ಕೆ ಭæೕಟಿ ನೀಡಿ ನೀರಿನ ಸಮಸ್ಯೆ ಬಗ್ಗೆ ಪರಿಶೀಲನೆ ನಡೆಸುತ್ತೇನೆ. ನೀರು ಯಾಕೆ ಬರುತ್ತಿಲ್ಲ ಎಂಬ ಬಗ್ಗೆಯೂ ಪರಿಶೀಲನೆ ನಡೆಸಿ ಸಮಸ್ಯೆ ಇತ್ಯರ್ಥ ಮಾಡಿಕೊಡುವುದಾಗಿ ಭರವಸೆ ನೀಡಿದರು. ಅಕ್ರಮ ಪೈಪ್‌ ಜೋಡಣೆ ಕಂಡು ಬಂದಲ್ಲಿ ಅದನ್ನು ತೆರವುಗೊಳಿಸಲಾಗುವುದು ಎಂದರು.

ಗ್ರಾಮಸ್ಥರಾದ ಟಿ.ಸಿ.ಕಾಂತರಾಜು, ಸುಜಾತ, ಜಯ, ಸವಿತ, ವೆಲೆಟ್‌ಡಿಸೋಜ, ಅಪೋಲಿನ್‌ ಕ್ರಾಸ್ತ, ಕೋಮಲಮಣಿ, ಪುಷ್ಪಲತ, ಆಗ್ನೇಸ್‌, ಲೀಲಾ ಮತ್ತಿತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ