ಆ್ಯಪ್ನಗರ

ನೆರೆ ಸಂತ್ರಸ್ತರಿಗೆ ಸ್ಪಂದಿಸಿ, ನೆರವು ನೀಡಿ

ರಾಜ್ಯಾದ್ಯಂತ ಅತಿವೃಷ್ಠಿಯಾಗಿದ್ದು ನದಿಗಳು ಉಕ್ಕೇರಿದೆ. ಜನ ಸಂಕಷ್ಟಕ್ಕೊಳಗಾಗಿದ್ದು ಮಾನವೀಯತೆಯ ದೃಷ್ಠಿಯಿಂದ ಅವರಿಗೆ ನೆರವು ನೀಡೋಣ ಎಂದು ಸಿಂಹನಗದ್ದೆ ಬಸ್ತಿಮಠದ ಶ್ರೀ ಲಕ್ಷೀ್ಮಸೇನಭಟ್ಟಾರಕ ಸ್ವಾಮೀಜಿ ಕರೆ ನೀಡಿದರು.

Vijaya Karnataka 14 Aug 2019, 5:00 am
ನರಸಿಂಹರಾಜಪುರ : ರಾಜ್ಯಾದ್ಯಂತ ಅತಿವೃಷ್ಠಿಯಾಗಿದ್ದು ನದಿಗಳು ಉಕ್ಕೇರಿದೆ. ಜನ ಸಂಕಷ್ಟಕ್ಕೊಳಗಾಗಿದ್ದು ಮಾನವೀಯತೆಯ ದೃಷ್ಠಿಯಿಂದ ಅವರಿಗೆ ನೆರವು ನೀಡೋಣ ಎಂದು ಸಿಂಹನಗದ್ದೆ ಬಸ್ತಿಮಠದ ಶ್ರೀ ಲಕ್ಷೀ್ಮಸೇನಭಟ್ಟಾರಕ ಸ್ವಾಮೀಜಿ ಕರೆ ನೀಡಿದರು.
Vijaya Karnataka Web CKM-13NRP2


ಅವರು ಪಟ್ಟಣದ ಪ್ರವಾಸಿ ಮಂದಿರ ಸಮೀಪದ ಸರ್ಕಲ್‌ನಲ್ಲಿ ನೆರೆ ಸಂತ್ರಸ್ತರಿಗಾಗಿ ಅಗತ್ಯ ವಸ್ತುಗಳು ಹಾಗೂ ನಿಧಿ ಸಂಗ್ರಹಣೆಗಾಗಿ ಮಂಗಳವಾರ ನಡೆದ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಸರಕಾರ ಸಂತ್ರಸ್ತರಿಗಾಗಿ ಸಾಕಷ್ಟು ನೆರವು ನೀಡುತ್ತಿದೆ. ಆದರೂ, ನಮ್ಮ ಕೈಲಾದ ಸಹಾಯ ಮಾಡುವುದು ಪ್ರಜೆಗಳಾದ ನಮ್ಮ ಕರ್ತವ್ಯ. ರಾಜ್ಯಾದ್ಯಂತ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ದಾನಿಗಳು ದೇಣಿಗೆ ನೀಡುತ್ತಿದ್ದಾರೆ. ಬಸ್ತಿಮಠಕ್ಕೂ ಸಹ ನೆರವು ನೀಡುವಂತೆ ಕರೆ ಬಂದಿತ್ತು. ಆದ್ದರಿಂದ ಜಾಥಾ ನೇತೃತ್ವ ವಹಿಸಿದ್ದೇನೆ. ಎಲ್ಲಾ ನಾಗರಿಕರು ಸ್ಪಂದಿಸಿ ಪಾಲ್ಗೊಳ್ಳುತ್ತಿದ್ದಾರೆ. ಬಸ್ತಿಮಠದ ಜ್ವಾಲಾಮಾಲಿನಿ ಮಾತೆಯ ಅನುಗ್ರಹದಿಂದ ನೆರೆ ಸಂತ್ರಸ್ತರಿಗೆ ಹೆಚ್ಚು ತೊಂದರೆಯಾಗುವುದು ಬೇಡ ಎಂದು ಪ್ರಾರ್ಥಿಸುತ್ತಿದ್ದೇವೆ ಎಂದರು.

ಇದಕ್ಕೂ ಮೊದಲು ಶ್ರೀ ಗಳು ಕೋಟೆ ಮಾರಿಕಾಂಬ ದೇವ ಮಂದಿರಕ್ಕೆ ತೆರಳಿ ಪೂಜೆ ಸಲ್ಲಿಸಿದರು. ನಂತರ ಬಸ್ತಿಮಠದ ಶ್ರೀ ಗಳ ನೇತೃತ್ವದಲ್ಲಿ ಹೊರಟ ಜಾಥ ಟಿ.ಬಿ.ರಸ್ತೆ, ಹಳೇ ಮಂಡಗದ್ದೆ ಸರ್ಕಲ್‌, ಬಸ್ಸು ನಿಲ್ದಾಣ, ಹಳೇ ಪೇಟೆ, ಅಗ್ರಹಾರ, ಬಸ್ತಿಮಠ, ಸಿಂಸೆ, ಬಿ.ಎಚ್‌.ಕೈಮರದವರೆಗೆ ಸಾಗಿತು. ದಾರಿಯುದ್ದಕ್ಕೂ ಜನತೆ ಮೊದಲೇ ಸಿದ್ಧತೆ ಮಾಡಿಕೊಂಡಿದ್ದ ಬಟ್ಟೆ, ಅಕ್ಕಿ, ಚಾಪೆ, ಬಕೆಟ್‌, ಕುಡಿಯುವ ನೀರಿನ ಬಾಟಲ್‌, ಬೆಡಶೀಟು, ಆಹಾರ ಪದಾರ್ಥಗಳು ಹಾಗೂ ನಗದನ್ನು ನೀಡಿದರು.

ಜಾಥಾದಲ್ಲಿ ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ ಪಕ್ಷ ಗಳ ಮುಖಂಡರು, ಆರ್‌ಎಸ್‌ಎಸ್‌ ಕಾರ್ಯಕರ್ತರು, ಜೇಸಿ ಸಂಸ್ಥೆ, ರೋಟರಿ ಸಂಸ್ಥೆ, ಇನ್ನರ್‌ ವೀಲ್‌ ಕ್ಲಬ್‌, ಲಯನ್ಸ್‌ ಕ್ಲಬ್‌, ಕಸಾಪ ಸದಸ್ಯರುಗಳು, ವರ್ತಕರ ಸಂಘದ ಪದಾಧಿಕಾರಿಗಳು, ಪತ್ರಕರ್ತರ ಸಂಘದ ಸದಸ್ಯರು, ಬ್ರಾಹ್ಮಣ ಮಹಾ ಸಭಾ, ಒಕ್ಕಲಿಗರ ಸಂಘ, ಶಾಶ್ವತಿ ಮಹಿಳಾ ಒಕ್ಕಲಿಗರ ಸಂಘದ ಸದಸ್ಯರು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸದಸ್ಯರು, ವಿವಿಧ ಸಂಘ ಸಂಸ್ಥೆಯ ಮುಖಂಡರು, ಪಟ್ಟಣ ಪಂಚಾಯಿತಿ ಸದಸ್ಯರು, ಊರಿನ ನಾಗರಿಕರು ಹೆಜ್ಜೆ ಹಾಕಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ