ಆ್ಯಪ್ನಗರ

ಪರಿಶೀಲನೆ, ಮಕ್ಕಳ ಸಮಸ್ಯೆಗೆ ಸ್ಪಂದನೆ

ತಾಲೂಕಿನ ಯಳ್ಳಂಬಳಸೆ ಗ್ರಾಮದಲ್ಲಿರುವ ಸರಕಾರಿ ಕಸ್ತೂರಬಾ ಬಾಲಕಿಯರ ವಸತಿ ಶಾಲೆಗೆ ಜಿ.ಪಂ. ಅಧ್ಯಕ್ಷೆ ಸುಜಾತಕೃಷ್ಣಪ್ಪ, ಸದಸ್ಯರಾದ ಕೆ.ಆರ್‌. ಮಹೇಶ್‌ಒಡೆಯರ್‌, ಜೆಸಿಂತಾ, ಮತ್ತು ಕಾವೇರಿಲಕ್ಕಪ್ಪ ಸೋಮವಾರ ದಿಢೀರ್‌ ಭೇಟಿ ನೀಡಿ ಮಕ್ಕಳಿಂದ ಕುಂದು-ಕೊರತೆ ಆಲಿಸಿದರು.

Vijaya Karnataka 16 Jul 2019, 5:00 am
ಕಡೂರು : ತಾಲೂಕಿನ ಯಳ್ಳಂಬಳಸೆ ಗ್ರಾಮದಲ್ಲಿರುವ ಸರಕಾರಿ ಕಸ್ತೂರಬಾ ಬಾಲಕಿಯರ ವಸತಿ ಶಾಲೆಗೆ ಜಿ.ಪಂ. ಅಧ್ಯಕ್ಷೆ ಸುಜಾತಕೃಷ್ಣಪ್ಪ, ಸದಸ್ಯರಾದ ಕೆ.ಆರ್‌. ಮಹೇಶ್‌ಒಡೆಯರ್‌, ಜೆಸಿಂತಾ, ಮತ್ತು ಕಾವೇರಿಲಕ್ಕಪ್ಪ ಸೋಮವಾರ ದಿಢೀರ್‌ ಭೇಟಿ ನೀಡಿ ಮಕ್ಕಳಿಂದ ಕುಂದು-ಕೊರತೆ ಆಲಿಸಿದರು.
Vijaya Karnataka Web CKM-15KDR3


ಮಧ್ಯಾಹ್ನ ವಸತಿ ಶಾಲೆಗೆ ಆಗಮಿಸಿದ ತಂಡ ಸ್ವಚ್ಛತೆ, ನೀರಿನ ವ್ಯವಸ್ಥೆ ಮತ್ತಿತರ ಮೂಲ ಸೌಕರ್ಯ ಕುರಿತಂತೆ ವಸತಿ ಶಾಲೆಯೊಳಗೆ ತಪಾಸಣೆ ಮಾಡಿತಲ್ಲದೇ ಮಕ್ಕಳಿಗೆ ತಯಾರಿಸಿದ ಆಹಾರ ಪದಾರ್ಥವನ್ನು ಪರಿಶೀಲಿಸಿ ಇನ್ನಷ್ಟು ರುಚಿಕರವಾಗಿ ತಯಾರಿಸಲು ಸಿಬ್ಬಂದಿಗೆ ನಿರ್ದೇಶಿಸಿತು.

ಸಾರ್ವಜನಿಕ ಶಿಕ್ಷ ಣ ಇಲಾಖೆಯ ಮೇಲುಸ್ತುವಾರಿಯಲ್ಲಿ ನಡೆಯುತ್ತಿರುವ ಈ ವಸತಿ ಶಾಲೆಯಲ್ಲಿ 6ರಿಂದ 10ನೇ ತರಗತಿವರೆಗಿನ 100 ಮಕ್ಕಳು ವ್ಯಾಸಂಗ ಪಡೆಯುತ್ತಿದ್ದು, ಕೊಠಡಿಗಳ ಸಮಸ್ಯೆ ಮತ್ತು ಮೂಲಸೌಕರ್ಯದ ಕೊರತೆಯಿಂದ ಬಳಲುತ್ತಿರುವುದು ತಂಡದ ಅರಿವಿಗೆ ಬಂದಿತು.

ಈ ಸಂದರ್ಭ ಜಿ.ಪಂ. ಸದಸ್ಯ ಮಹೇಶ್‌ಒಡೆಯರ್‌ ಅಧ್ಯಕ್ಷೆ ಸುಜಾತ ಅವರಿಗೆ ಮಾಹಿತಿ ನೀಡಿ, ದಿ. ಡಾ.ವೈ.ಸಿ.ವಿಶ್ವನಾಥ್‌ ಅವರ ಆಡಳಿತ ಅವಧಿಯಲ್ಲಿ 70 ಲಕ್ಷ ಅನುದಾನ ವಸತಿ ಶಾಲೆಯ ಅಭಿವೃದ್ಧಿಗೆ ಮಂಜೂರಾಗಿತ್ತು. ನಂತರದ ಅವಧಿಯಲ್ಲಿ ಮಾಜಿ ಶಾಸಕ ವೈ.ಎಸ್‌.ವಿ ದತ್ತ ಈ ಅನುದಾನ ಸದ್ಬಳಕೆಯತ್ತ ತಮ್ಮ ಗಮನಹರಿಸಲಿಲ್ಲ. ಹಾಗಾಗಿ ವಸತಿ ಶಾಲೆ ಹಾಲಿ ಸರಕಾರಿ ಪ್ರೌಢಶಾಲೆಯ ಕಟ್ಟಡದೊಳಗೆ ನಡೆಯುತ್ತಿದೆ ಎಂದರು.

ವಸತಿ ಶಾಲೆಯ ವಿದ್ಯಾರ್ಥಿನಿಯರು ದೂರಿನ ಸರಮಾಲೆಯನ್ನೇ ಹೇಳುತ್ತಾ ತಮಗೆ ತಲೆಗೆ ಎಣ್ಣೆ ಹಚ್ಚಿಕೊಳ್ಳಲು ನೀಡುತ್ತಿಲ್ಲ. ಸ್ಯಾನಿಟರಿ ನ್ಯಾಪ್‌ಕಿನ್‌ ನೀಡದೇ ಎಷ್ಟೋ ತಿಂಗಳಾಗಿದೆ. ಊಟದ ರುಚಿ ಅಷ್ಟಕ್ಕಷ್ಟೇ ಎಂದು ತಮ್ಮ ಅಳಲನ್ನು ತೋಡಿಕೊಂಡರು.

ಇದಕ್ಕೆ ಉತ್ತರಿಸಿದ ಅಧ್ಯಕ್ಷೆ ಸುಜಾತ, ನಿಮ್ಮ ಸಮಸ್ಯೆಗಳನ್ನು ಪರಿಹರಿಸಲಾಗುವುದು ಎಂದರಲ್ಲದೆ ಸ್ಥಳದಲ್ಲಿದ್ದ ಕ್ಷೇತ್ರ ಶಿಕ್ಷ ಣಾಧಿಕಾರಿ ಜಿ.ರಂಗನಾಥಸ್ವಾಮಿ ಅವರಿಗೆ ಕೂಡಲೇ ಇದನ್ನೆಲ್ಲಾ ಸರಿಪಡಿಸಿ ತಮಗೆ ವರದಿ ನೀಡಲು ಸೂಚಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ