ಆ್ಯಪ್ನಗರ

ಜಿಲ್ಲಾಧಿಕಾರಿ ಕಚೇರಿ ಎದುರೇ ಸರ್ವೆಯರ್‌ ಬೆವರಿಳಿಸಿದ ರೈತ

ಜಮೀನು ಸರ್ವೆಗೆ ಸಂಬಂಧಿಸಿದಂತೆ ರೈತರೊಬ್ಬರು ಸರ್ವೆ ಇಲಾಖೆ ಅಧಿಕಾರಿಗೆ ಜಿಲ್ಲಾಧಿಕಾರಿ ಕಚೇರಿ ಎದುರಲ್ಲೇ ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡು ಬೆವರಿಳಿಸಿದ ಘಟನೆ ನಡೆದಿದೆ.

Vijaya Karnataka 18 Jul 2018, 5:00 am
ಚಿಕ್ಕಮಗಳೂರು: ಜಮೀನು ಸರ್ವೆಗೆ ಸಂಬಂಧಿಸಿದಂತೆ ರೈತರೊಬ್ಬರು ಸರ್ವೆ ಇಲಾಖೆ ಅಧಿಕಾರಿಗೆ ಜಿಲ್ಲಾಧಿಕಾರಿ ಕಚೇರಿ ಎದುರಲ್ಲೇ ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡು ಬೆವರಿಳಿಸಿದ ಘಟನೆ ನಡೆದಿದೆ.
Vijaya Karnataka Web sarveyar bevarilisida farmer
ಜಿಲ್ಲಾಧಿಕಾರಿ ಕಚೇರಿ ಎದುರೇ ಸರ್ವೆಯರ್‌ ಬೆವರಿಳಿಸಿದ ರೈತ


ಸರ್ವೆ ಇಲಾಖೆ ಅಧಿಕಾರಿ ಮಹೇಶ್‌ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡ ಕಡೂರು ತಾಲೂಕಿನ ರೈತ ರೇವಣಸಿದ್ದಪ್ಪ, ನಿನಗೆ ಏನು ಮಾಡಬೇಕೆಂದು ನನಗೆ ಗೊತ್ತಿದೆ ಎಂದು ಆವಾಜ್‌ ಹಾಕಿದ್ದಾರೆ.

ಜಮೀನು ಸರ್ವೆ ಮಾಡಲು ಹಣ ಪಡೆದುಕೊಂಡು ಸರ್ವೆ ಮಾಡಿಕೊಟ್ಟಿಲ್ಲ. ಈಗ ಕೇಳಿದರೆ ಹಣವನ್ನೂ ಕೊಟ್ಟಿಲ್ಲ ಎಂದು ಹೇಳುತ್ತಿದ್ದೀಯ ಎಂದು ರೈತ ರೇವಣಸಿದ್ದಪ್ಪ ಹೇಳುತ್ತಿದ್ದಂತೆ ನಾನು ಪ್ರಾಮಾಣಿಕವಾಗಿದ್ದೇನೆ. ಮೋಸ ಮಾಡಿರುವವನು ನೀನು ಎಂದು ಅಧಿಕಾರಿ ತಿರುಗಿ ಹೇಳುತ್ತ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಸಾಗಿದ್ದಾರೆ.

ಇಷ್ಟಾದರೂ ಬಿಡದೆ ಬೆನ್ನತ್ತಿದ ರೈತ, ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಮತ್ತೆ ತರಾಟೆಗೆ ತೆಗೆದುಕೊಂಡಿದ್ದು, ಇಬ್ಬರ ನಡುವೆಯೂ ಮಾತಿನ ಚಕಮಕಿ ನಡೆದಿದೆ. ರೈತನ ಧ್ವನಿ ಜೋರಾಗುತ್ತಿದ್ದಂತೆ ಅಧಿಕಾರಿ ಅಲ್ಲಿಂದ ಹೊರಟು ಹೋಗಿದ್ದು, ರೈತ ರೇವಣಸಿದ್ದಪ್ಪ ಕೂಡ ಅಧಿಕಾರಿಗೆ ಹಿಡಿಶಾಪ ಹಾಕುತ್ತ ಅಲ್ಲಿಂದ ಹೊರಟು ಹೋಗಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ