ಆ್ಯಪ್ನಗರ

ಸಹಕಾರ ಸಂಘ ಉಳಿಸಿ, ಬೆಳೆಸಿ

ರೈತರ ಏಳಿಗೆಗೆ ಇರುವ ಸಹಕಾರ ಸಂಘದಲ್ಲಿರೈತರು ತೊಡಗಿಸಿಕೊಂಡು ವೈಯಕ್ತಿಕವಾಗಿ ಲಾಭ ಪಡೆದುಕೊಳ್ಳುವುದಲ್ಲದೇ, ಸಂಘವನ್ನು ಉಳಿಸಿ,ಬೆಳೆಸಬೇಕು ಎಂದು ಡಿಸಿಸಿ ಬ್ಯಾಂಕ್‌ ಉಪಾಧ್ಯಕ್ಷ ದಿನೇಶ್‌ ಹೆಗ್ಡೆ ಹೇಳಿದರು.

Vijaya Karnataka 24 Sep 2019, 5:00 am
ಶೃಂಗೇರಿ: ರೈತರ ಏಳಿಗೆಗೆ ಇರುವ ಸಹಕಾರ ಸಂಘದಲ್ಲಿರೈತರು ತೊಡಗಿಸಿಕೊಂಡು ವೈಯಕ್ತಿಕವಾಗಿ ಲಾಭ ಪಡೆದುಕೊಳ್ಳುವುದಲ್ಲದೇ, ಸಂಘವನ್ನು ಉಳಿಸಿ,ಬೆಳೆಸಬೇಕು ಎಂದು ಡಿಸಿಸಿ ಬ್ಯಾಂಕ್‌ ಉಪಾಧ್ಯಕ್ಷ ದಿನೇಶ್‌ ಹೆಗ್ಡೆ ಹೇಳಿದರು.
Vijaya Karnataka Web save and grow cooperatives
ಸಹಕಾರ ಸಂಘ ಉಳಿಸಿ, ಬೆಳೆಸಿ


ಮೆಣಸೆ ಸರಕಾರಿ ಶಾಲಾ ಸಭಾಂಗಣದಲ್ಲಿಭಾನುವಾರ ಮೆಣಸೆಯಲ್ಲಿರುವ ಹಾಲಂದೂರು ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಸಭೆಯಲ್ಲಿಮಾತನಾಡಿದರು.

ಸಾಲ ಪಡೆದ ರೈತರು ಸಕಾಲಕ್ಕೆ ಮರು ಪಾವತಿ ಮಾಡಿದಾಗ ಮಾತ್ರ ಸಂಘದ ಅಭಿವೃದ್ಧಿ ಸಾಧ್ಯ. ಸರಕಾರದಿಂದ ಬರುವ ಯಾವುದೇ ಸೌಲಭ್ಯವನ್ನು ಶೇರುದಾರರಿಗೆ ತಲುಪಿಸಲು ಸಂಘ ಪ್ರಾಮಾಣಿಕ ಪ್ರಯತ್ನ ನಡೆಸಿದೆ ಎಂದರು.

ಸಂಘದ ಅಧ್ಯಕ್ಷ ಮೇಗಳಬೈಲು ಚಂದ್ರಶೇಖರ್‌ ಮಾತನಾಡಿ, ಪ್ರಸಕ್ತ ಸಾಲಿನಲ್ಲಿಸಂಘವು 4.29 ಲಕ್ಷ ಲಾಭ ಗಳಿಸಿದೆ. 202 ರೈತರಿಗೆ 166.21 ಲಕ್ಷ ರೂ ಸಾಲ ಮನ್ನಾ ದೊರಕಿದೆ. ಸಂಘದಲ್ಲಿ418 ಲಕ್ಷ ಠೇವಣಿ ಸಂಗ್ರಹ ಹೊಂದಿದ್ದು, ಕೆಸಿಸಿ ಸಾಲದಲ್ಲಿಶೇ.100 ಸಾಧನೆ ಸಾಧ್ಯವಾಗಿದೆ ಎಂದರು.

ಸಂಘದ ಉಪಾಧ್ಯಕ್ಷ ಚಿನ್ನಪ್ಪ ನಿರ್ದೇಶಕರಾದ ಕೆ.ಎಸ್‌.ರಮೇಶ್‌, ಅಣ್ಣಪ್ಪಹೆಗ್ಡೆ, ರಾಜೇಶ್‌, ಅಶೋಕ್‌, ಶ್ರೀದೇವಿ, ಕೇಶವ, ನಾರಾಯಣಮೂರ್ತಿ, ಸಿಇಒ ರಜನಿ ಇದ್ದರು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ