ಆ್ಯಪ್ನಗರ

ಗ್ರಾಮ ಸಭೆಯಲ್ಲಿಶಾಲಾ ಮಕ್ಕಳ ಕೂಗು

ನಮ್ಮ ಶಾಲೆಗೆ ಕಾಂಪೌಂಡ್‌ ನಿರ್ಮಿಸಿ ಕೊಡಿ, ರಸ್ತೆ ಸರಿ ಮಾಡಿ,ನೀರಿನ ವ್ಯವಸ್ಥೆಗಳನ್ನು ಮಾಡಿ ಕೊಡಿ ಎಂದು ಶಾಲಾ ವಿದ್ಯಾರ್ಥಿಗಳು ಗ್ರಾಮ ಪಂಚಾಯಿತಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಬಳಿ ಕೇಳಿಕೊಂಡರು.

Vijaya Karnataka 29 Nov 2019, 5:00 am
ಕಳಸ: ನಮ್ಮ ಶಾಲೆಗೆ ಕಾಂಪೌಂಡ್‌ ನಿರ್ಮಿಸಿ ಕೊಡಿ, ರಸ್ತೆ ಸರಿ ಮಾಡಿ,ನೀರಿನ ವ್ಯವಸ್ಥೆಗಳನ್ನು ಮಾಡಿ ಕೊಡಿ ಎಂದು ಶಾಲಾ ವಿದ್ಯಾರ್ಥಿಗಳು ಗ್ರಾಮ ಪಂಚಾಯಿತಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಬಳಿ ಕೇಳಿಕೊಂಡರು. ಕಳಸ ಪದವಿ ಪೂರ್ವ ಕಾಲೇಜು ಪ್ರೌಢ ಶಾಲಾ ವಿಭಾಗದ ಸಭಾಂಗಣದಲ್ಲಿಕಳಸ ಗ್ರಾಮ ಪಂಚಾಯಿತಿ ವತಿಯಿಂದ ಗುರುವಾರ ನಡೆದ ಮಕ್ಕಳ ಮತ್ತು ಮಹಿಳಾ ವಿಶೇಷ ಗ್ರಾಮ ಸಭೆಯಲ್ಲಿತಮ್ಮ ಶಾಲೆ ಮತ್ತು ತಮ್ಮ ಊರಿಗೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿದರು.ಕಳೆದ ವರ್ಷ ನಡೆದ ಮಕ್ಕಳ ಗ್ರಾಮ ಸಭೆಯಲ್ಲಿಗಂಗನಗುಡಿಗೆ ಶಾಲೆಯ ಹಿಂಬದಿಯ ಚರಂಡಿಯಲ್ಲಿಅಲ್ಲಿಯ ನಿವಾಸಿಗಳ ಮನೆಗಳ ಕೊಳಚೆ ನೀರು ಹರಿಯುತ್ತದೆ. ಇದರ ವಾಸನೆ ಯಲ್ಲಿತರಗತಿಯಲ್ಲಿಕುಳಿತುಕೊಳ್ಳಲು ಸಾಧÜ್ಯವಿಲ್ಲಎಂದು ತಿಳಿಸಿದ್ದೆವು. ಆದರೆ ಅದನ್ನು ಇನ್ನೂ ಸರಿಪಡಿಸಿಲ್ಲ.ಮತ್ತು ಶಾಲೆಗೆ ನೀರಿನ ಸಮಸ್ಯೆ ಇದೆ ಕೊಳವೆ ಬಾವಿಯನ್ನು ತೆಗೆಸಿಕೊಡಿ ಎಂದು ಗಂಗನಗುಡಿಗೆ ಶಾಲಾ ವಿದ್ಯಾರ್ಥಿಗಳು ಕೇಳಿಕೊಂಡರು.ಶಾಲೆಗೆ ನೀರಿನ ಸಮಸ್ಯೆ, ಶಾಲೆಯ ಕಿಟಕಿ ಶಿಥಿಲ ಗೊಂಡಿದೆ.ರಸ್ತೆಗಳು ಸರಿ ಇಲ್ಲಸರಿಪಡಿಸಿಕೊಡಿ ಎಂದು ತೋಡ್ಲುಶಾಲಾ ವಿದ್ಯಾರ್ಥಿಗಳು ಕೇಳಿಕೊಂಡರು. ಗ್ರಾ. ಪಂ. ಅಧ್ಯಕ್ಷೆ ರತೀ ರವೀಂದ್ರ, ಪ್ರಾಚಾರ್ಯ ಅರುಣ್‌ ಕುಮಾರ್‌ ಇದ್ದರು.
Vijaya Karnataka Web school children at village meeting
ಗ್ರಾಮ ಸಭೆಯಲ್ಲಿಶಾಲಾ ಮಕ್ಕಳ ಕೂಗು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ