ಆ್ಯಪ್ನಗರ

ದಾವಣಗೆರೆಯಲ್ಲಿರಂಭಾಪುರೀ ಜಗದ್ಗುರುಗಳ ಶರನ್ನವರಾತ್ರಿ ಮಹೋತ್ಸವ

ರಂಭಾಪುರಿ ಜಗದ್ಗುರುಗಳಾದ ಪ್ರಸನ್ನ ರೇಣುಕ ಡಾ.ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರ ಈ ಬಾರಿಯ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನ ದಾವಣಗೆರೆಯಲ್ಲಿಜರುಗಲಿದೆ.

Vijaya Karnataka 17 Sep 2019, 5:00 am
ಬಾಳೆಹೊನ್ನೂರು (ಚಿಕ್ಕಮಗಳೂರು) : ರಂಭಾಪುರಿ ಜಗದ್ಗುರುಗಳಾದ ಪ್ರಸನ್ನ ರೇಣುಕ ಡಾ.ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರ ಈ ಬಾರಿಯ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನ ದಾವಣಗೆರೆಯಲ್ಲಿಜರುಗಲಿದೆ.
Vijaya Karnataka Web 16BHR3_35


ನಗರದ ಪಿ.ಬಿ. ರಸ್ತೆ ಪಕ್ಕದಲ್ಲಿರುವ ಸರಕಾರಿ ಹೈಸ್ಕೂಲ್‌ ಮೈದಾನದಲ್ಲಿನಿರ್ಮಿಸಿರುವ 'ಮಾನವ ಧರ್ಮ ಮಂಟಪ'ದಲ್ಲಿರಂಭಾಪುರಿ ಜಗದ್ಗುರುಗಳ ಸಾನ್ನಿಧ್ಯದಲ್ಲಿಸೆ.29ರಿಂದ ಅಕ್ಟೋಬರ್‌ 8ರ ವರೆಗೆ 28ನೇ ವರ್ಷದ ಮಹೋತ್ಸವ ನಡೆಯಲಿದೆ. ಪ್ರತಿ ದಿನ ಸಂಜೆ 7ಗಂಟೆಗೆ ವೇದಿಕೆ ಕಾರ್ಯಕ್ರಮಗಳು ಆರಂಭವಾಗುವವು ಎಂದು ಶ್ರೀ ರಂಭಾಪುರಿ ಜಗದ್ಗುರುಗಳು ಸೋಮವಾರ ಸುದ್ದಿಗೋಷ್ಠಿಯಲ್ಲಿತಿಳಿಸಿದರು.

ಕಾರ್ಯಕ್ರಮಗಳ ವಿವರ:

ಸೆ.29ರಂದು ಮುಖ್ಯ ಮಂತ್ರಿ ಬಿ.ಎಸ್‌.ಯಡಿಯೂರಪ್ಪ ಸಮಾರಂಭ ಉದ್ಘಾಟಿಸುವರು. ಕೊಲ್ಲಿಪಾಕಿ ಕ್ಷೇತ್ರ ದರ್ಶನ ಕೃತಿಯನ್ನು ಶಾಸಕ, ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಬಿಡುಗಡೆಗೊಳಿಸುವರು.

ಅಕ್ಟೋಬರ್‌ 8ರ ವರೆಗೆ ನಡೆಯುವ ಪ್ರತಿ ದಿನದ ಕಾರ್ಯಕ್ರಮದಲ್ಲಿಕೇಂದ್ರ ಸಚಿವರಾದ ಸುರೇಶ ಅಂಗಡಿ, ಡಿ.ವಿ.ಸದಾನಂದಗೌಡ, ಪ್ರಹ್ಲಾದ ಜೋಷಿ, ಡಿಸಿಎಂಗಳಾದ ಗೋವಿಂದ ಕಾರಜೋಳ, ಡಾ.ಸಿ.ಎನ್‌.ಅಶ್ವತ್ಥನಾರಾಯಣ, ಸಚಿವರಾದ ಸಿ.ಟಿ.ರವಿ, ಸಿ.ಸಿ.ಪಾಟೀಲ್‌, ಜಗದೀಶ ಶೆಟ್ಟರ್‌, ಜೆ.ಸಿ.ಮಾಧುಸ್ವಾಮಿ, ಕೆ.ಎಸ್‌.ಈಶ್ವರಪ್ಪ, ಬಸವರಾಜ ಬೊಮ್ಮಾಯಿ, ಸಂಸದರಾದ ಜಿ.ಎಂ.ಸಿದ್ದೇಶ್ವರ, ಬಿ.ವೈ.ರಾಘವೇಂದ್ರ, ಶಾಸಕರಾದ ದಿನೇಶ್‌ ಗುಂಡೂರಾವ್‌, ಮಾಡಾಳು ವಿರುಪಾಕ್ಷಪ್ಪ, ಎಂ.ಪಿ.ರೇಣುಕಾಚಾರ್ಯ, ಎಸ್‌.ಎ.ರವೀಂದ್ರನಾಥ, ಎಚ್‌.ಕೆ.ಪಾಟೀಲ, ಎಸ್‌.ವಿ.ರಾಮಚಂದ್ರಪ್ಪ, ಕಳಕಪ್ಪ ಬಂಡಿ, ಕೆ.ಲಿಂಗಣ್ಣ, ಟಿ.ಡಿ.ರಾಜೇಗೌಡ, ಕೆ.ಎಸ್‌.ಲಿಂಗೇಶ್‌, ಸಿ.ಎಂ.ಉದಾಸಿ, ವಿಧಾನ ಪರಿಷತ್‌ ಸದಸ್ಯ ಅಬ್ದುಲ್‌ ಜಬ್ಬಾರ್‌ಸಾಬ್‌, ಜಿಲ್ಲಾಪಂಚಾಯಿತಿ ಅಧ್ಯಕ್ಷೆ ಶೈಲಜಾ ಬಸವರಾಜ, ವಿಆರ್‌ಎಲ್‌ ಸಮೂಹ ಸಂಸ್ಥೆಗಳ ಚೇರಮನ್‌ ವಿಜಯ ಸಂಕೇಶ್ವರ ಮತ್ತಿತರರು ಭಾಗವಹಿಸುವರು. ಇದೇ ಸಂದರ್ಭಗಳಲ್ಲಿರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳ ಲೇಖನಗಳ ಸಂಗ್ರಹ 'ಸಾಧನೆಯ ಸತ್ಪಥ', 'ಪಂಚಾಚಾರ್ಯ ಪ್ರಭಾ', 'ರಂಭಾಪುರಿ ಬೆಳಗು', ಶ್ರೀಪೀಠದ 2020ರ ದಿನದರ್ಶಿಕೆ ಬಿಡುಗಡೆಯಾಗಲಿವೆ. ದಸರಾ ಮಹೋತ್ಸವದ ಯಶಸ್ಸಿಗಾಗಿ ವಿವಿಧ ಸಮಿತಿಗಳನ್ನು ರಚಿಸಲಾಗಿದ್ದು ಸಮಿತಿಯ ಪದಾಧಿಕಾರಿಗಳು ಮತ್ತು ಎಲ್ಲಉಪ ಸಮಿತಿಯ ಎಲ್ಲಸದಸ್ಯರು ಸಮಾರಂಭದ ಯಶಸ್ಸಿಗಾಗಿ ನಿರಂತರ ಶ್ರಮಿಸುತ್ತಿದ್ದಾರೆ ಎಂದರು.

ಪ್ರಶಸ್ತಿ ಪ್ರದಾನ:

ಸಾಧನ ಸಿರಿ ಪ್ರಶಸ್ತಿಯನ್ನು ದೊಡ್ಡಬಾತಿಯ ತಪೋವನ ಆಸ್ಪತ್ರೆಯ ಡಾ.ಶಶಿಕುಮಾರ ವಿ.ಮೆಹರವಾಡೆ ಅವರಿಗೆ, ರಂಭಾಪುರಿ ಯುವ ಸಿರಿ ಪ್ರಶಸ್ತಿಯನ್ನು ದಾವಣಗೆರೆಯ ಸಿದ್ಧಿ ವಿನಾಯಕ ಸ್ಟುಡಿಯೊದ ಬಿ.ಅರುಣ ಅವರಿಗೆ, ಸಾಹಿತ್ಯ ಸಿರಿ ಪ್ರಶಸ್ತಿಯನ್ನು ಡಾ.ಗುರುಪಾದಯ್ಯ ವೀ.ಸಾಲಿಮಠ ಅವರಿಗೆ, ವೀರಶೈವ ಸಿರಿ ಪ್ರಶಸ್ತಿಯನ್ನು ಜುಂಜಪ್ಪ ಹೆಗ್ಗಪ್ಪನವರ್‌ಗೆ, ಶಿವಾಚಾರ್ಯ ರತ್ನ ಪ್ರಶಸ್ತಿಯನ್ನು ರಟ್ಟೀಹಳ್ಳಿ ಕಬ್ಬಿಣಕಂತಿ ಮಠದ ಶ್ರೀ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿಗೆ ಅನುಗ್ರಹಿಸಲಾಗುತ್ತದೆ. ಧಾರ್ಮಿಕ ಮತ್ತು ಸಾಮಾಜಿಕ ವಿಷಯವಾಗಿ ಉಪನ್ಯಾಸಗಳು, ಸಂಗೀತ ಕಾರ್ಯಕ್ರಮಗಳು ಇರುತ್ತವೆ. ವಿವಿಧ ಮಠಗಳ ಪಟ್ಟಾಧ್ಯಕ್ಷರು ಸಮಾರಂಭದಲ್ಲಿತಮ್ಮ ನುಡಿ ಸೇವೆ ಸಲ್ಲಿಸುವರು. ಪ್ರತಿ ದಿನದ ಸಮಾರಂಭದ ನಂತರ ಶ್ರೀ ಶಿವಾಚಾರ್ಯರಿಂದ, ಶ್ರೀ ಪೀಠದ ಸಿಬ್ಬಂದಿ ಮತ್ತು ಧರ್ಮಾಭಿಮಾನಿಗಳಿಂದ ನಜರ್‌(ಗೌರವ) ಸಮರ್ಪಣೆ ಜರುಗುವುದು.

ಶಮಿ ಸೀಮೋಲ್ಲಂಘನ:

ಅ.8ರಂದು ಸಂಜೆ 4.30ಕ್ಕೆ ಶ್ರೀಮದ್‌ ರಂಭಾಪುರಿ ಜಗದ್ಗುರುಗಳ ಅಡ್ಡಪಲ್ಲಕ್ಕಿ ಮಹೋತ್ಸವ ಜರುಗುವುದು. ಜಗದ್ಗುರುಗಳು ಶಮೀ ಪೂಜೆ ಸಲ್ಲಿಸಿದ ನಂತರ ಸಭಾ ಮಂಟಪಕ್ಕೆ ಆಗಮಿಸಿ ವೀರಸಿಂಹಾಸನಾರೋಹಣ ಮಾಡಿ ಆಶೀರ್ವಚನ ಅನುಗ್ರಹಿಸುವರು. ಪೀಠಾಭಿಮಾನಿಗಳಿಗೆ ಇದೇ ಸಂದರ್ಭದಲ್ಲಿಪ್ರಶಸ್ತಿ ಪ್ರದಾನ ಮಾಡಲಾಗುವುದು. ನಂತರ ಜಗದ್ಗುರುಗಳಿಗೆ ದಸರಾ ಮಹೋತ್ಸವ ಸಮಿತಿ ಹಾಗೂ ಶಿಷ್ಯ ಸದ್ಭಕ್ತರಿಂದ ಶಮೀ ಕಾಣಿಕಾ ಸಮರ್ಪಣೆ ಜರುಗುವುದು. ಜಗದ್ಗುರುಗಳು ಲೋಕ ಕಲ್ಯಾಣಾರ್ಥವಾಗಿ ನಿತ್ಯ ಬೆಳಗ್ಗೆ 8ಕ್ಕೆ ಶ್ರೀ ಅಭಿನವ ರೇಣುಕ ಮಂದಿರದಲ್ಲಿಇಷ್ಟಲಿಂಗ ಮಹಾಪೂಜೆ ನಡೆಸುವರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ