ಆ್ಯಪ್ನಗರ

ಜನರ ಆದೇಶಕ್ಕೆ ತಲೆಬಾಗಲೇಬೇಕು: ಧರ್ಮೇಗೌಡ

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನತೆಯೇ ದೇವರಾಗಿದ್ದು ಅವರ ಆದೇಶಕ್ಕೆ ಎಲ್ಲರೂ ತಲೆಬಾಗಬೇಕು ಎಂದು ಮಾಜಿ ಶಾಸಕ, ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಎಸ್‌.ಎಲ್‌. ಧರ್ಮೇಗೌಡ ಹೇಳಿದರು.

Vijaya Karnataka 31 May 2018, 5:00 am
ಚಿಕ್ಕಮಗಳೂರು: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನತೆಯೇ ದೇವರಾಗಿದ್ದು ಅವರ ಆದೇಶಕ್ಕೆ ಎಲ್ಲರೂ ತಲೆಬಾಗಬೇಕು ಎಂದು ಮಾಜಿ ಶಾಸಕ, ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಎಸ್‌.ಎಲ್‌. ಧರ್ಮೇಗೌಡ ಹೇಳಿದರು.
Vijaya Karnataka Web should obey the people order dharmagowda
ಜನರ ಆದೇಶಕ್ಕೆ ತಲೆಬಾಗಲೇಬೇಕು: ಧರ್ಮೇಗೌಡ


ಡಿಸಿಸಿ ಬ್ಯಾಂಕ್‌ ಸಭಾಂಗಣದಲ್ಲಿ ಬ್ಯಾಂಕಿನ ನಿರ್ದೇಶಕರೂ, ನೂತನ ಶಾಸಕರಾಗಿ ಆಯ್ಕೆಯಾಗಿರುವ ಬೆಳ್ಳಿಪ್ರಕಾಶ್‌ ಅವರನ್ನು ಬುಧವಾರ ಸನ್ಮಾನಿಸಿ ಮಾತನಾಡಿದರು.

ಸೈದ್ಧಾಂತಿಕ ಹಾಗೂ ರಾಜಕೀಯವಾಗಿ ನಮ್ಮ ಅಭಿಪ್ರಾಯಗಳು ಭಿನ್ನವಾಗಿದ್ದರೂ ಜಿಲ್ಲೆ ಹಾಗೂ ರಾಜ್ಯದ ಅಭಿವೃದ್ಧಿ ಗೆ ಒಗ್ಗಟ್ಟಾಗಿ ಪ್ರಯತ್ನಿಸುವುದು ಜನಪ್ರತಿನಿಧಿಗಳ ಜವಾಬ್ದಾರಿ. ಚುನಾವಣೆ ಸಂದರ್ಭ ಆರೋಪ, ಪ್ರತ್ಯಾರೋಪಗಳು ಸಹಜ. ಆದರೆ, ಅದನ್ನೇ ಚುನಾವಣೆಯ ನಂತರ ಬಂಡವಾಳವನ್ನಾಗಿಸಿಕೊಂಡು ಜನತಂತ್ರ ವ್ಯವಸ್ಥೆಗೆ ಹಾನಿಯಾಗುವಂತೆ ನಡೆದುಕೊಳ್ಳಬಾರದು ಎಂದರು.

ಇತ್ತೀಚಿನ ದಿನದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ಆತಂಕ ಉಂಟು ಮಾಡುವ ಬೆಳವಣಿಗೆ ನಡೆಯುತ್ತಿವೆ. ಇದನ್ನು ತಡೆಯಲು ಪಕ್ಷ ಭೇದ ಮರೆತು ಜನಪ್ರತಿನಿಧಿಗಳು ಚಿಂತಿಸ ಬೇಕಾದ ಅಗತ್ಯವಿದೆ ಎಂದರು.

ಡಿಸಿಸಿ ಬ್ಯಾಂಕ್‌ ನಿರ್ದೇಶಕರಾದ ಟಿ.ಡಿ.ಸತ್ಯನ್‌, ಎಸ್‌.ಜಿ.ರಾಮಪ್ಪ,ಎ.ಆರ್‌.ಜಯಪ್ರಕಾಶ್‌, ಬಿ.ಎಲ್‌.ಸಂದೀಪ್‌, ಬಿ.ಬಿ.ರವಿಕುಮಾರ್‌, ಟಿ.ಇ.ಮಂಜುನಾಥ್‌, ಎಂ.ಸಿ.ಶಿವಾನಂದಸ್ವಾಮಿ, ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಡಿ.ವಿ.ಲಿಂಗಣ್ಣಯ್ಯ, ಸಹಕಾರ ಸಂಘಗಳ ಉಪ ನಿಬಂಧಕ ನಂಜುಂಡೇಗೌಡ ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ