ಆ್ಯಪ್ನಗರ

ಟೈಲರ್‌ ವೃತ್ತಿನಿರತರಿಗೆ ಸ್ಮಾರ್ಟ್‌ಕಾರ್ಡ್‌

ಅಸಂಘಟಿತ ಕಾರ್ಮಿಕ ವಲಯದಿಂದ 200ಕ್ಕೂ ಹೆಚ್ಚು ಟೈಲರ್‌ ವೃತ್ತಿನಿರತರಿಗೆ ಸ್ಮಾರ್ಟ್‌ಕಾರ್ಡ್‌ ವಿತರಿಸಲಾಗಿದೆ ಎಂದು ರಾಜ್ಯ ಟೈಲರ್‌ ಅಸೋಸಿಯೇಷನ್‌ ಕಾರ್ಯದರ್ಶಿ ಎಸ್‌.ಪಿ.ಅಶೋಕ್‌ಶೆಟ್ಟಿ ಹೇಳಿದರು.

Vijaya Karnataka 2 Aug 2019, 5:00 am
ಚಿಕ್ಕಮಗಳೂರು : ಅಸಂಘಟಿತ ಕಾರ್ಮಿಕ ವಲಯದಿಂದ 200ಕ್ಕೂ ಹೆಚ್ಚು ಟೈಲರ್‌ ವೃತ್ತಿನಿರತರಿಗೆ ಸ್ಮಾರ್ಟ್‌ಕಾರ್ಡ್‌ ವಿತರಿಸಲಾಗಿದೆ ಎಂದು ರಾಜ್ಯ ಟೈಲರ್‌ ಅಸೋಸಿಯೇಷನ್‌ ಕಾರ್ಯದರ್ಶಿ ಎಸ್‌.ಪಿ.ಅಶೋಕ್‌ಶೆಟ್ಟಿ ಹೇಳಿದರು.
Vijaya Karnataka Web CKM-1SHIVU-P8


ನಗರದ ಟೈಲರ್‌ ಅಸೋಸಿಯೇಷನ್‌ ಕಚೇರಿಯಲ್ಲಿ ಗುರುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸದಸ್ಯರಿಗೆ ಸ್ಮಾರ್ಟ್‌ಕಾರ್ಡ್‌ ವಿತರಿಸಿ ಅವರು ಮಾತನಾಡಿದರು.ಜಿಲ್ಲೆಯಲ್ಲಿ 15ಸಾವಿರಕ್ಕೂ ಹೆಚ್ಚು ಜನ ಟೈಲರ್‌ ವೃತ್ತಿ ಮಾಡುತ್ತಿದ್ದಾರೆ. ಅದರಲ್ಲಿ 10ಸಾವಿರ ಜನ ಸಂಘದಲ್ಲಿ ಸದಸ್ಯತ್ವ ಪಡೆದಿದ್ದಾರೆ. ರಾಜ್ಯದಲ್ಲಿ 1.25 ಲಕ್ಷ ಸದಸ್ಯರು ನೊಂದಣಿಯಾಗಿದ್ದು 25ಸಾವಿರ ಜನರಿಗೆ ಸ್ಮಾರ್ಟ್‌ಕಾರ್ಡ್‌ ನೀಡಲಾಗಿದೆ. ಜಿಲ್ಲೆಯಲ್ಲಿ 700 ಮಂದಿಗೆ ಕಾರ್ಡ್‌ ಬಂದಿದ್ದು ಇಂದು 200 ಕಾರ್ಡ್‌ ವಿತರಿಸಲಾಗಿದೆ. ಉಳಿದ ಕಾರ್ಡ್‌ಗಳನ್ನು ಹಂತ ಹಂತವಾಗಿ ನೀಡಲಾಗುತ್ತದೆ ಎಂದರು.

ಸಂಘದಲ್ಲಿದ್ದವರ ಮಕ್ಕಳ ಶಿಕ್ಷ ಣ ಹಾಗೂ ಮೆಡಿಕಲ್‌ ಸೌಲಭ್ಯವಿದೆ.ಬ್ಯಾಂಕ್‌ ನಲ್ಲಿ ಸಾಲಸೌಲಭ್ಯಕ್ಕೂ ಈ ಕಾರ್ಡ್‌ ಸಹಕಾರಿಯಾಗುತ್ತದೆ ಎಂದರು. ಜಿಲ್ಲಾಧ್ಯಕ್ಷ ಸೈಯದ್‌ ರೆಹಮಾನ್‌,ಕಾರ್ಯದರ್ಶಿ ಸಣ್ಣೇಗೌಡ,ಸಂಘಟನಾ ಕಾರ್ಯದರ್ಶಿ ರಾಜು, ಶಶಿಧರ್‌, ಕಾರ್ಮಿಕ ಇಲಾಖೆಯ ಅಧಿಕಾರಿ ಲಕ್ಷ ಣ್‌ಶೆಟ್ಟಿ ಇತರರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ