ಆ್ಯಪ್ನಗರ

ಸಾಮಾಜಿಕ ಪರಿವರ್ತನೆ ಮಾಧ್ಯಮಗಳ ಧ್ಯೇಯವಾಗಲಿ

ಸಾಮಾಜಿಕ ಪರಿವರ್ತನೆ ಮಾಧ್ಯಮಗಳ ಧ್ಯೇಯವಾಗಬೇಕು ಎಂದು ಅಪರ ಜಿಲ್ಲಾಧಿಕಾರಿ ಡಾ.ಕುಮಾರ್‌ ಆಶಿಸಿದರು.

Vijaya Karnataka 28 Jul 2019, 5:00 am
ಚಿಕ್ಕಮಗಳೂರು : ಸಾಮಾಜಿಕ ಪರಿವರ್ತನೆ ಮಾಧ್ಯಮಗಳ ಧ್ಯೇಯವಾಗಬೇಕು ಎಂದು ಅಪರ ಜಿಲ್ಲಾಧಿಕಾರಿ ಡಾ.ಕುಮಾರ್‌ ಆಶಿಸಿದರು.
Vijaya Karnataka Web CKM-27SHIVUP2


ನಗರದ ಚಿಕ್ಕಮಗಳೂರು ಪ್ರೆಸ್‌ಕ್ಲಬ್‌ನಲ್ಲಿ ಶನಿವಾರ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಕಾರ‍್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಪತ್ರಕರ್ತರಿಗೆ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕಿಂತ ಅಂತರಂಗದ ಸ್ವಾತಂತ್ರ್ಯ ಮುಖ್ಯ. ಸಮಾಜದ ಹಿತಕ್ಕಾಗಿ ಯಾವುದೇ ಸುದ್ದಿಯನ್ನು ಅಂತರಂಗದಿಂದ ಗ್ರಹಿಸಬೇಕು. ಅಂತರಂಗದ ಸ್ವಾತಂತ್ರ್ಯ ಕಳೆದುಕೊಂಡರೆ ವೃತ್ತಿಗೆ ನ್ಯಾಯ ಒದಗಿಸಲು ಸಾಧ್ಯವಾಗುವುದಿಲ್ಲ ಎಂದರು.

ಪತ್ರಿಕಾಧರ್ಮ ಎತ್ತಿ ಹಿಡಿದಾಗ ಮಾತ್ರ ಸಮಾಜವನ್ನು ಸರಿದಾರಿಯಲ್ಲಿ ಕೊಂಡೊಯ್ಯಲು ಸಾಧ್ಯ. ಶಾಸಕಾಂಗ, ಕಾರಾರ‍ಯಂಗ ಮತ್ತು ನ್ಯಾಯಾಂಗದ ಜತೆಗೆ ಪತ್ರಿಕಾರಂಗ ಸಂವಿಧಾನದ ನಾಲ್ಕನೇ ಅಂಗವಾಗಿ ಕಾರ‍್ಯ ನಿರ್ವಹಿಸುತ್ತಿದೆ. ಆರೋಗ್ಯಕರ ಮತ್ತು ಸ್ವಾಸ್ಥ್ಯ ಸಮಾಜ ನಿರ್ಮಾಣದಲ್ಲಿ ಪತ್ರಿಕಾರಂಗದ ಜವಾಬ್ದಾರಿಯೇ ಪ್ರಮುಖವಾಗಿದೆ ಎಂದು ಅಭಿಪ್ರಾಯಪಟ್ಟರು.

ವಲಯ ಅರಣ್ಯಾಧಿಕಾರಿ ಎಸ್‌.ಎಲ್‌.ಶಿಲ್ಪ ಮಾತನಾಡಿ, ಮಾಧ್ಯಮ ಕ್ಷೇತ್ರ ಸಮಾಜದ ಓರೆಕೋರೆಗಳನ್ನು ತಿದ್ದುವ ಜತೆಗೆ ಸಮಾಜದ ಋುಣ ತೀರಿಸುವ ಪ್ರಮುಖ ಪಾತ್ರ ನಿರ್ವಹಿಸುತ್ತಿದೆ. ಪ್ರಚಲಿತ ವಿದ್ಯಮಾನಗಳನ್ನು ಜನರಿಗೆ ತಿಳಿಸುವ ಮಹತ್ವದ ಕಾರ‍್ಯ ಪತ್ರಿಕೆಗಳಿಂದ ಆಗುತ್ತಿದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಚಿಕ್ಕಮಗಳೂರು ಪ್ರೆಸ್‌ಕ್ಲಬ್‌ ಅಧ್ಯಕ್ಷ ಆರಗ ರವಿ ಮಾತನಾಡಿದರು. ನಿಕಟಪೂರ್ವ ಅಧ್ಯಕ್ಷ ದಿನೇಶ್‌ ಪಟವರ್ಧನ್‌ ಪ್ರಾಸ್ತಾವಿಕ ಮಾತನಾಡಿದರು. ಪ್ರೆಸ್‌ಕ್ಲಬ್‌ ಉಪಾಧ್ಯಕ್ಷ ಎಸ್‌.ಕೆ.ಲಕ್ಷ್ಮೇಪ್ರಸಾದ್‌, ಪ್ರಧಾನ ಕಾರ‍್ಯದರ್ಶಿ ಎಚ್‌.ಎಸ್‌.ಶಿವಕುಮಾರ್‌ ಹಾಜರಿದ್ದರು.

ಪತ್ರಿಕಾ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಕ್ರಿಕೆಟ್‌ ಪಂದ್ಯಾವಳಿಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಪ್ರೆಸ್‌ಕ್ಲಬ್‌ ಸಹ ಕಾರ‍್ಯದರ್ಶಿ ವಿಶ್ವನಾಥ್‌ ಪ್ರಾರ್ಥಿಸಿ, ನಿರ್ದೇಶಕ ಬಿ.ಎಂ.ರವಿ ನಿರೂಪಿಸಿದರು. ಖಜಾಂಚಿ ಕಿಶೋರ್‌ಕುಮಾರ್‌ ವಂದಿಸಿದರು.

ಸ್ವಸ್ಥ ಸಮಾಜದ ಬದ್ಧತೆ ಇರಲಿ: ಶಾಸಕಾಂಗ, ಕಾರಾರ‍ಯಂಗ, ನ್ಯಾಯಾಂಗ ಮತ್ತು ಮಾಧ್ಯಮರಂಗ ಸಾಮಾಜಿಕ ಋುಣಕ್ಕೆ ಒಳಗಾಗಿವೆ. ಸ್ವಸ್ಥ ಸಮಾಜ ಕಟ್ಟುವ ಬದ್ಧತೆ ಮೂಲಕ ಸಮಾಜದ ಋುಣ ತೀರಿಸಬೇಕು. ಆಧುನಿಕ ತಂತ್ರಜ್ಞಾನದ ಈ ಕಾಲಘಟ್ಟದಲ್ಲಿ ಮುದ್ರಣ ಮಾಧ್ಯಮದ ಪ್ರಾಮುಖ್ಯತೆ ಕಡಿಮೆ ಆಗುತ್ತಿದೆ ಎನಿಸಿದರೂ ತನ್ನದೇ ಆದ ಓದುಗ ಸಮೂಹವನ್ನು ಪತ್ರಿಕೆಗಳು ಉಳಿಸಿಕೊಂಡಿವೆ. ಓದುಗರು ಬಯಸುವುದನ್ನು ಮಾಧ್ಯಮಗಳು ಕೊಡಬೇಕು. ಪತ್ರಕರ್ತರು ತಮ್ಮನ್ನು ತಾವು ಅವಲೋಕಿಸಿಕೊಂಡು ಕರ್ತವ್ಯ ನಿರ್ವಹಿಸಲು ಪತ್ರಿಕಾ ದಿನಾಚರಣೆ ಪೂರಕ. -ಡಾ.ಕುಮಾರ್‌, ಅಪರ ಜಿಲ್ಲಾಧಿಕಾರಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ