ಆ್ಯಪ್ನಗರ

ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವದ ವಿಶೇಷ

ಶ್ರೀ ರಾಘವೇಂದ್ರ ಸ್ವಾಮಿಗಳು ದೇಶದ ವೈದಿಕ ಸಿದ್ಧಾಂತ, ತತ್ವಗಳು ಮತ್ತು ಧರ್ಮಪ್ರಚಾರಕ್ಕಾಗಿ ಅನೇಕ ಲೋಕಮಾನ್ಯ ಗ್ರಂಥಗಳ್ನು ರಚಿಸಿದ್ದಾರೆ. ಜಾತಿ, ಮತ, ಪಂಥಗಳ ಬೇಧ ಎಣಿಸದೆ ನಿರ್ಮಲ ಭಕ್ತಿಯಿಂದ ಪೂಜಿಸುವ ಸಕಲರಿಗೂ ಸನ್ಮಾರ್ಗ ತೋರುವ ಗುರುಗಳ ಮಹಿಮೆ, ಕೀರ್ತಿ ಜಗದ್ವಿಖ್ಯಾತವಾಗಿದೆ

Vijaya Karnataka 15 Aug 2019, 5:00 am
ಚಿಕ್ಕಮಗಳೂರು : ಶ್ರೀ ರಾಘವೇಂದ್ರ ಸ್ವಾಮಿಗಳು ದೇಶದ ವೈದಿಕ ಸಿದ್ಧಾಂತ, ತತ್ವಗಳು ಮತ್ತು ಧರ್ಮಪ್ರಚಾರಕ್ಕಾಗಿ ಅನೇಕ ಲೋಕಮಾನ್ಯ ಗ್ರಂಥಗಳ್ನು ರಚಿಸಿದ್ದಾರೆ. ಜಾತಿ, ಮತ, ಪಂಥಗಳ ಬೇಧ ಎಣಿಸದೆ ನಿರ್ಮಲ ಭಕ್ತಿಯಿಂದ ಪೂಜಿಸುವ ಸಕಲರಿಗೂ ಸನ್ಮಾರ್ಗ ತೋರುವ ಗುರುಗಳ ಮಹಿಮೆ, ಕೀರ್ತಿ ಜಗದ್ವಿಖ್ಯಾತವಾಗಿದೆ.
Vijaya Karnataka Web CKM-14RUDRAP3


ದೀನ, ದಲಿತ ಜನೋದ್ಧಾರ, ಆಧಿವ್ಯಾಧಿಗಳ ಪರಿಹಾರ, ಬೇಡಿದ ಇಷ್ಟಾರ್ಥ ಸಿದ್ಧಿ, ಮಾನವ ಜನ್ಮದ ಕಲ್ಯಾಣ ಮಾಡುತ್ತಾ ಇಂದಿಗೂ ಮಂತ್ರಾಲಯ ಕ್ಷೇತ್ರದಲ್ಲಿ ಸುಂದರ ವೃಂದಾವನದಲ್ಲಿ ವಿರಾಜಿಸಿ ಭಕ್ತವೃಂದವನ್ನು ರಾಯರು ಆಕರ್ಷಿಸುತ್ತಿದ್ದಾರೆ.

ದೇಶದುದ್ದಗಲಕ್ಕೂ ಇಂತಹ ಸಹಸ್ರಾರು ಬೃಂದಾವನಗಳಲ್ಲಿ ಭಕ್ತವೃಂದದ ಕಣ್ಮನವನ್ನು ತಣಿಸುತ್ತಿರುವ ಶ್ರೀ ರಾಘವೇಂದ್ರ ಗುರುಸಾರ್ವಭೌಮರ 348 ನೇ ಆರಾಧನಾ ಮಹೋತ್ಸವ ಇದೇ 16 ರಿಂದ ಮೂರು ದಿನಗಳ ಕಾಲ ನಾಡಿನಾದ್ಯಂತ ಶ್ರದ್ಧಾಭಕ್ತಿಯಿಂದ ಜರುಗಲಿದೆ.ಅಂತಹ ಮೃತ್ತಿಕಾ ಬೃಂದಾವನಗಳಲ್ಲಿ ಚಿಕ್ಕಮಗಳೂರಿನ ಬಸವನಹಳ್ಳಿ ಬಡಾವಣೆಯಲ್ಲಿರುವ ಶ್ರೀ ರಾಘವೇಂದ್ರಸ್ವಾಮಿಗಳ ಮಠವೂ ಒಂದು. ಜಿಲ್ಲಾ ಕೇಂದ್ರದಲ್ಲಿರುವ ಮಠವಾಗಿರುವುದರಿಂದ 3 ದಿನ ನಡೆಯುವ ರಾಯರ ಆರಾಧನಾ ಮಹೋತ್ಸವಕ್ಕೆ ಸಹಸ್ರಾರು ಮಂದಿ ಜನಜಾತ್ರೆಯೆ ನೆರೆಯುತ್ತದೆ. ಭಕ್ತ ಮಹಾಶಯ, ನಿವೃತ್ತ ಉಪನ್ಯಾಸಕರಾದ ಉಪೇಂದ್ರ ಅವರ ಕುಟುಂಬಸ್ಥರು ಮಠವನ್ನು ಅಭಿವೃದ್ಧಿಪಡಿಸಿ ಸಾರ್ವಜನಿಕರಿಗೆ ಮುಕ್ತ ಅವಕಾಶ ಕಲ್ಪಿಸಿದ್ದಾರೆ.ಇಲ್ಲಿನ ಪ್ರಧಾನ ಅರ್ಚಕ ವಿಠಲರಾವ್‌ ದೇಶಪಾಂಡೆ ಅವರು ಪೂಜಾಕೈಂಕರ್ಯ ನಡೆಸುತ್ತಿದ್ದು ಜಾತಿ ಬೇಧವೆನ್ನದೆ ಎಲ್ಲರೂ ಬಂದು ರಾಯರ ಕೃಪೆಗೆ ಪಾತ್ರರಾಗುತ್ತಾರೆ. ಆ.16 ರಿಂದ ಇಲ್ಲೂ ಕೂಡ ಗುರುಗಳ ಆರಾಧನೆಯನ್ನು ಬಹಳ ವಿಜೃಂಭಣೆಯಿಂದ ಆಚರಸಿಲು ಆಡಳಿತ ಮಂಡಳಿ ಸಿದ್ಧತೆ ನಡೆಸಿದೆ. ಶ್ರೀರಾಘವೇಂದ್ರ ಸ್ವಾಮಿಗಳು ಮಕ್ತರಾದ ಹಿಂದಿನ ದಿನ ಪೂರ್ವಾರಾಧನೆಯಿದ್ದು ಅಂದು ಅಷ್ಟೋತ್ತರ, ಪಂಚಾಮೃತ, ಹೂವಿನ ಅಲಂಕಾರ, ಪಾದಪೂಜೆ ಹಾಗೂ ರಥೋತ್ಸವ ಜರುಗಲಿದೆ. ಗುರುಗಳು ಮುಕ್ತರಾದ ದಿನ ಮಧ್ಯಾರಾಧನೆಯಿದ್ದು ಅಂದು ಅಷ್ಟೋತ್ತರ, ಫಲಪಂಚಾಮೃತ, ಪಾದಪೂಜೆಗೆ ಅವಕಾಶ ಕಲ್ಪಿಸಲಾಗಿದೆ. ಆ.17 ರಂದು ರಾಯರು ಮುಕ್ತರಾದ ಮಾರನೆ ದಿನ ಉತ್ತರಾರಾಧನೆ ನಡೆಯಲಿದ್ದು ಅಷ್ಟೋತ್ತರ, ಪಂಚಾಮೃತಸೇವೆ ಹಾಗೂ ಪಾದಪೂಜೆ ಮತ್ತು ಶ್ರೀ ರಾಘವೇಂದ್ರಸ್ವಾಮಿಗಳ ಉತ್ಸವ ಮೂರ್ತಿಯ ರಾಜಬೀದಿ ಮೆರವಣಿಗೆ ನಡೆಯಲಿದೆ. ಚಿಕ್ಕಮಗಳೂರಿನ 18 ಭಜನಾ ತಂಡಗಳು ಮೂರೂ ದಿನ ಸಂಜೆ 5 ಗಂಟೆಯಿಂದ ಭಜನಾ ಕಾರ್ಯಕ್ರಮ ನಡೆಸಿಕೊಡಲಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ