ಆ್ಯಪ್ನಗರ

ಮಳೆಗೆ ಪ್ರಾರ್ಥಿಸಿ ವಿಶೇಷ ಪೂಜೆ

ಗ್ರಾಮದಲ್ಲಿ ಮಳೆಗೆ ಪ್ರಾರ್ಥಿಸಿ ಬೇಟೆ ದೇವರನ್ನು ಎರಡನೇ ಬೇಟೆಗೆ ಪ್ರಮುಖ ಬೀದಿಗಳಲ್ಲಿ ಉತ್ಸವದ ಮೂಲಕ ಕೊಂಡೊಯ್ದು ಬಸ್‌ ನಿಲ್ದಾಣ ಆವರಣದಲ್ಲಿರುವ ಕಮ್ಮಾರು ಗಲ್ಲಿಗೆ 1001 ಕೊಡಗಳ ನೀರನ್ನು ಹಾಕುವುದರೊಂದಿಗೆ ಪೂಜೆ ನೆರವೇರಿಸಲಾಯಿತು.

Vijaya Karnataka 14 May 2019, 5:00 am
ಸಖರಾಯಪಟ್ಟಣ : ಗ್ರಾಮದಲ್ಲಿ ಮಳೆಗೆ ಪ್ರಾರ್ಥಿಸಿ ಬೇಟೆ ದೇವರನ್ನು ಎರಡನೇ ಬೇಟೆಗೆ ಪ್ರಮುಖ ಬೀದಿಗಳಲ್ಲಿ ಉತ್ಸವದ ಮೂಲಕ ಕೊಂಡೊಯ್ದು ಬಸ್‌ ನಿಲ್ದಾಣ ಆವರಣದಲ್ಲಿರುವ ಕಮ್ಮಾರು ಗಲ್ಲಿಗೆ 1001 ಕೊಡಗಳ ನೀರನ್ನು ಹಾಕುವುದರೊಂದಿಗೆ ಪೂಜೆ ನೆರವೇರಿಸಲಾಯಿತು.
Vijaya Karnataka Web CKM-13ONKAR1


ನಂತರ ಉತ್ಸವ ಮೂರ್ತಿಯನ್ನು ಪಟ್ಟಣ ಸಮೀಪದ ಗವಿರಂಗಸ್ವಾಮಿ ಗುಡ್ಡಕ್ಕೆ ಉತ್ಸವದ ಮೂಲಕ ಕರೆದೊಯ್ದು 101 ಎಡೆಗಳನ್ನು ಪ್ರತಿಷ್ಠಾಪಿಸಿ ಬೇಟೆ ದೇವರಿಗೆ ಪೂಜೆ ಸಲ್ಲಿಸಲಾಯಿತು.

ನಂತರ ಗುಡ್ಡದ ಮೇಲಿರುವ ಆಂಜನೇಯ ಸ್ವಾಮಿಗೆ ಪೂಜೆ ಸಲ್ಲಿಸಿ ಉತ್ಸವದ ಮೂಲಕ ಬೇಟೆ ದೇವರನ್ನು ರಂಗನಾಥಸ್ವಾಮಿ ದೇವಾಲಯಕ್ಕೆ ಕರೆತರಲಾಯಿತು. ಮೊದಲನೇ ಬೇಟೆಯನ್ನು ಈ ಹಿಂದೆ ಶನಿವಾರ ಹೊರಡಿಸಲಾಗಿತ್ತು. ಬರುವ ಶನಿವಾರ ಇದೇ ಉತ್ಸವವನ್ನು ಮುಂದುವರಿಸಿ ಮೂರನೇ ಬೇಟೆಯನ್ನು ಮಾಡಲಾಗುವುದು ಎಂದು ನೇತೃತ್ವ ವಹಿಸಿದ್ದ ಲೋಕೇಶ್‌ ತಿಳಿಸಿದರು. ಬೇಟೆ ದೇವರನ್ನು ಹೊರಡಿಸಿದರೆ ಮಳೆ ಬರುತ್ತದೆ ಎಂಬ ಪ್ರತೀತಿ ಇದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ