ಆ್ಯಪ್ನಗರ

ವಿಜೃಂಭಣೆ ಶ್ರೀರಾಮ ಪಟ್ಟಾಭಿಷೇಕ

ಪಟ್ಟಣದ ಶ್ರೀರಾಂಪುರ ಬಡಾವಣೆಯಲ್ಲಿ ದಿ. ಕಣಕಟ್ಟೆ ರಾಮಣ್ಣ ಅವರಿಂದ ನಿರ್ಮಿಸಲ್ಪಟ್ಟ 123 ವರ್ಷಗಳ ಇತಿಹಾಸವಿರುವ ಪ್ರಸಿದ್ಧ ಶ್ರೀ ಪಟ್ಟಾಭಿರಾಮ ಚಂದ್ರಮೌಳೀಶ್ವರ ದೇವಸ್ಥಾನದಲ್ಲಿ ಸೋಮವಾರ, ನೂರಾರು ಭಕ್ತರ ಸಮ್ಮುಖದಲ್ಲಿ ಶ್ರೀರಾಮ ಪಟ್ಟಾಭಿಷೇಕ ಮಹೋತ್ಸವ ವಿಜೃಂಭಣೆಯಿಂದ ನೆರವೇರಿತು.

Vijaya Karnataka 3 Apr 2018, 5:00 am
ಬೀರೂರು : ಪಟ್ಟಣದ ಶ್ರೀರಾಂಪುರ ಬಡಾವಣೆಯಲ್ಲಿ ದಿ. ಕಣಕಟ್ಟೆ ರಾಮಣ್ಣ ಅವರಿಂದ ನಿರ್ಮಿಸಲ್ಪಟ್ಟ 123 ವರ್ಷಗಳ ಇತಿಹಾಸವಿರುವ ಪ್ರಸಿದ್ಧ ಶ್ರೀ ಪಟ್ಟಾಭಿರಾಮ ಚಂದ್ರಮೌಳೀಶ್ವರ ದೇವಸ್ಥಾನದಲ್ಲಿ ಸೋಮವಾರ, ನೂರಾರು ಭಕ್ತರ ಸಮ್ಮುಖದಲ್ಲಿ ಶ್ರೀರಾಮ ಪಟ್ಟಾಭಿಷೇಕ ಮಹೋತ್ಸವ ವಿಜೃಂಭಣೆಯಿಂದ ನೆರವೇರಿತು.
Vijaya Karnataka Web sri ram pattabhisheka
ವಿಜೃಂಭಣೆ ಶ್ರೀರಾಮ ಪಟ್ಟಾಭಿಷೇಕ


ರಾಮನವಮಿ ಅಂಗವಾಗಿ ಮಾ.25ರಿಂದ ಏ.1ರವರೆಗೆ ಪ್ರತಿದಿನ ಬೆಳಗ್ಗೆ ಸೂರ್ಯ ನಮಸ್ಕಾರ, ನವಗ್ರಹ ಜಪ, ವೇದ ಪಾರಾಯಣ, ರಾಮಾಯಣ ಪಾರಾಯಣ, ವಿಷ್ಣು ಸಹಸ್ರನಾಮ, ಲಲಿತ ಸಹಸ್ರನಾಮ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಪ್ರತಿದಿನ ಸಂಜೆ ಭಜನೆ, ಕೀರ್ತನೆ, ವೀಣಾವಾದನ, ಸುಗಮಸಂಗೀತ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು.

ಮಾ.29ರ ಬೆಳಗ್ಗೆ 9ರಿಂದ ಸೀತಾ ಕಲ್ಯಾಣ, ಗಿರಿಜಾಕಲ್ಯಾಣ, ಏ.2ರ ಸೋಮವಾರ ಬೆಳಗ್ಗೆ ಶ್ರೀ ಚಂದ್ರಮೌಳೀಶ್ವರನಿಗೆ ರುದ್ರಾಭಿಷೇಕ ಹಾಗೂ ಋುತ್ವೀಜರುಗಳಿಂದ ಏಕದಶ ರುದ್ರಪಠಣ ನಡೆಯಿತು. ನಂತರ ಶ್ರೀರಾಮ ತಾರಕ ಹೋಮ 12ಗಂಟೆಗೆ ಪೂರ್ಣಾಹುತಿ ಶ್ರೀರಾಮ ಪಟ್ಟಾಭಿಷೇಕ ನೇರವೇರಿಸಲಾಯಿತು. ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ, ಭಕ್ತಾದಿಗಳಿಗೆ ದಾಸೋಹ ಏರ್ಪಡಿಸಲಾಗಿತ್ತು. ಸಂಜೆ 7ಗಂಟೆಗೆ ಪಟ್ಟಣದ ಬೀದಿಗಳಲ್ಲಿ ಪುಷ್ಪಾಲಂಕೃತಗೊಂಡ ಶ್ರೀರಾಮನ ಉತ್ಸವ ಮೂರ್ತಿಯ ಶೋಭಾಯಾತ್ರೆ ನಡೆಯಿತು. ಪುರೋಹಿತರುಗಳಾದ ನರಸಿಂಹ ಮೂರ್ತಿ, ಸುಧಾಕರ್‌ ಜೋಯಿಸ್‌, ಕೃಷ್ಣಪ್ರಸಾದ್‌, ಶಿವರಾಮ ಶಾಸ್ತ್ರಿ, ಅರ್ಚಕ ಪ್ರಸನ್ನ ಕುಮಾರ್‌ ನೆರವೇರಿಸಿದರು.

ಶ್ರೀರಾಮ ಭಕ್ತ ಮಂಡಳಿ ಅಧ್ಯಕ್ಷ ಕೆ.ಜಿ.ಮಂಜುನಾಥ್‌, ಕಾರ್ಯದರ್ಶಿ ಕೆ.ಎಸ್‌.ಸೋಮಶೇಖರ್‌, ಉಪಾಧ್ಯಕ್ಷ ವಿ.ಜಿ.ಒಡೆಯರ್‌, ವಿ.ಎಸ್‌.ನಾಗರಾಜ್‌, ಗುರುರಾಜ್‌, ಎನ್‌.ಸೋಮನಾಡಿಗ್‌, ಪಿ.ಎಸ್‌.ರಾಘವೇಂದ್ರ, ರವಿಕುಮಾರ್‌, ಮಾಲತೇಶ್‌ ಸೇರಿದಂತೆ ನೂರಾರು ಭಕ್ತರು ರಾಮೋತ್ಸವದಲ್ಲಿ ಪಾಲ್ಗೊಂಡಿದ್ದರು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ