ಆ್ಯಪ್ನಗರ

ಯೋಗದಿಂದ ಸದೃಢ ಸಮಾಜ: ಭಾಗ್ಯ

ಯೋಗವು ನಮ್ಮ ಬದುಕು, ಸಮಾಜವನ್ನು ಸದೃಢಗೊಳಿಸುವುದರ ಜತೆಗೆ ಸೌಹಾರ್ದತೆಯನ್ನು ಬೆಳೆಸುತ್ತದೆ ಎಂದು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿದ್ಯಾಲಯದ ರಾಜಯೋಗಿನಿ ಭಾಗ್ಯ ಹೇಳಿದರು.

Vijaya Karnataka 29 May 2018, 5:00 am
ಚಿಕ್ಕಮಗಳೂರು: ಯೋಗವು ನಮ್ಮ ಬದುಕು, ಸಮಾಜವನ್ನು ಸದೃಢಗೊಳಿಸುವುದರ ಜತೆಗೆ ಸೌಹಾರ್ದತೆಯನ್ನು ಬೆಳೆಸುತ್ತದೆ ಎಂದು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿದ್ಯಾಲಯದ ರಾಜಯೋಗಿನಿ ಭಾಗ್ಯ ಹೇಳಿದರು.
Vijaya Karnataka Web strong society from yoga bhagya
ಯೋಗದಿಂದ ಸದೃಢ ಸಮಾಜ: ಭಾಗ್ಯ


ನಗರದ ಬ್ರಹ್ಮಕುಮಾರಿ ರಾಜಯೋಗಕೇಂದ್ರದಲ್ಲಿ ವಿಶ್ವ ಯೋಗ ದಿನಾಚರಣೆ ಅಂಗವಾಗಿ ಸೋಮವಾರದಿಂದ ಆರಂಭವಾಗಿರುವ ಉಚಿತ ಯೋಗ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಜಗತ್ತಿಗೆ ಭಾರತೀಯರ ದೊಡ್ಡ ಕೊಡುಗೆಯಾದ ಯೋಗಕ್ಕೆ ಯಾವುದೇ ಜಾತಿ, ಧರ್ಮದ ಬೇಧವಿಲ್ಲ. ಪ್ರಧಾನಿ ನರೇಂದ್ರ ಮೋದಿಯವರು ಇಡೀ ವಿಶ್ವ ಯೋಗ ಪ್ರಕ್ರಿಯೆಯಲ್ಲಿ ತೊಡಗಿಕೊಳ್ಳುವಂತೆ ಮಾಡಿದ್ದು, ಸುಖೀ, ಸೌಹಾರ್ದತೆಯ ಸಮಾಜ ನಿರ್ಮಿಸಲು ಸರ್ವರೂ ಯೋಗ, ಧ್ಯಾನವನ್ನು ನಮ್ಮ ಬದುಕಿನ ಭಾಗವಾಗಿ ಅಳವಡಿಸಿಕೊಳ್ಳಬೇಕು ಎಂದರು.

ಜೂ.21ರಂದು ನಡೆಯುವ 4ನೇ ವಿಶ್ವ ಯೋಗ ದಿನಾಚರಣೆಗೆ ಸೂಚಿಸಿರುವ ಯೋಗಾಸನಗಳು, ಪ್ರಾಣಯಾಮ, ಧ್ಯಾನ ಮತ್ತಿತರೆ ಕ್ರಿಯೆಗಳನ್ನು ಡಾ.ಪ್ರ್ರಶಾಂತ್‌, ಎಸ್‌ಡಿಎಂನ ಡಾ.ಮನೋಹರ್‌ ಪ್ರದರ್ಶಿಸಿದರು. ಈ ಸಂದರ್ಭ 80ಕ್ಕೂ ಹೆಚ್ಚು ಯೋಗ ಶಿಕ್ಷ ಕರು ಭಾಗವಹಿಸಿದ್ದರು.

ಜಿಲ್ಲೆಯ ವಿವಿಧ ಯೋಗ ಸಂಸ್ಥೆಗಳ ಸಹಯೋಗದೊಂದಿಗೆ ನಗರದ 150ಕ್ಕೂ ಹೆಚ್ಚು ಕೇಂದ್ರಗಳಲ್ಲಿ ಉಚಿತ ಯೋಗ ಶಿಬಿರಗಳನ್ನು ಜೂ.20 ರವರೆಗೆ ಏರ್ಪಡಿಸಲಾಗಿದ್ದು, ಸಾರ್ವಜನಿಕರು ಶಿಬಿರಗಳಲ್ಲಿ ಪಾಲ್ಗೊಂಡು ನಿತ್ಯ ಯೋಗಾಭ್ಯಾಸಿಗಳಾಗಿ ವಿಶ್ವ ಯೋಗ ದಿನಾಚರಣೆಯ ಉದ್ದೇಶ ಸಫಲಗೊಳಿಸಬೇಕು ಎಂದು ವಿವಿಧ ಯೋಗ ಸಮಿತಿಯ ಪ್ರಮುಖರು ಮನವಿ ಮಾಡಿದ್ದಾರೆ.

ಆಯುಷ್‌ ಇಲಾಖೆಯ ಜಿಲ್ಲಾ ಅಧಿಕಾರಿ ಡಾ. ಗೀತಾ, ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಮಹಾವಿದ್ಯಾಲಯದ ವೈದ್ಯರು, ಶ್ರೀ ಪತಂಜಲಿ ಯೋಗ ಶಿಕ್ಷ ಣ ಟ್ರಸ್ಟ್‌, ಪ್ರಭೋದಿನಿ ಯೋಗ ಶಿಕ್ಷ ಣ ಟ್ರಸ್ಟ್‌, ಭಾರತ್‌ ಸ್ವಾಭಿಮಾನಿ ಟ್ರಸ್ಟ್‌, ಪತಂಜಲಿ ಯೋಗ ಸಮಿತಿಯ ಪ್ರಮುಖರು ಭಾಗವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ