ಆ್ಯಪ್ನಗರ

ವಿದ್ಯಾರ್ಥಿಗಳ ಶೈಕ್ಷ ಣಿಕ ಜ್ಞಾನಾರ್ಜನೆಗೆ ಸೂಕ್ತ

ವಿದ್ಯಾರ್ಥಿಗಳ ಶೈಕ್ಷ ಣಿಕ ಜ್ಞಾನಾರ್ಜನೆಗೆ ರೂಪಿಸಿರುವ ವಿದ್ಯಾರ್ಥಿ ಸಂಚಿಕೆ ಸಾಮಾನ್ಯ ಜ್ಞಾನ ನೀಡುತ್ತದೆ ಎಂದು ಶಿಕ್ಷ ಕ ಎಸ್‌.ಎಲ್‌.ರಾಘವೇಂದ್ರ ಹೇಳಿದರು.

Vijaya Karnataka 11 Jun 2019, 5:00 am
ಶೃಂಗೇರಿ: ವಿದ್ಯಾರ್ಥಿಗಳ ಶೈಕ್ಷ ಣಿಕ ಜ್ಞಾನಾರ್ಜನೆಗೆ ರೂಪಿಸಿರುವ ವಿದ್ಯಾರ್ಥಿ ಸಂಚಿಕೆ ಸಾಮಾನ್ಯ ಜ್ಞಾನ ನೀಡುತ್ತದೆ ಎಂದು ಶಿಕ್ಷ ಕ ಎಸ್‌.ಎಲ್‌.ರಾಘವೇಂದ್ರ ಹೇಳಿದರು.
Vijaya Karnataka Web CKM-10SRI1


ಪಟ್ಟಣದ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲೆ ವಿಭಾಗದಲ್ಲಿ ಸೋಮವಾರ ವಿಜಯ ಕರ್ನಾಟಕ ವಿದ್ಯಾರ್ಥಿ ಸಂಚಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ನಾವು ಪ್ರತಿ ದಿನದ ವಿದ್ಯಮಾನವನ್ನು ತಿಳಿದುಕೊಳ್ಳಬೇಕು. ಪ್ರಚಲಿತ ವಿಷಯ ತಿಳಿದುಕೊಳ್ಳಲು ಪತ್ರಿಕೆ ಅಗತ್ಯ ಎಂದರು.

ಉಪ ಪ್ರಾಂಶುಪಾಲ ಎಂ.ಮಂಜುನಾಥಗೌಡ ಮಾತನಾಡಿ, ಅತಿ ಕಡಿಮೆ ದರದಲ್ಲಿ ವರ್ಷವಿಡಿ ದೊರಕುವ ಪತ್ರಿಕೆಯಲ್ಲಿ ಅಗಾಧ ಜ್ಞಾನವಿರುತ್ತದೆ. ಪಠ್ಯೇತರ ಚಟುವಟಿಕೆಯಲ್ಲಿ ಪ್ರಸಕ್ತ ವಿದ್ಯಮಾನವನ್ನು ತಿಳಿಯುವುದು ಅಗತ್ಯವಾಗಿದೆ. ವಿದ್ಯಾರ್ಥಿಗಳಿಗೆ ಅಗತ್ಯವಿರುವಷ್ಟು ಸಾಮಾನ್ಯ ಜ್ಞಾನವನ್ನು ಪತ್ರಿಕೆ ನೀಡುತ್ತದೆ. ಇದರೊಂದಿಗೆ ಪಠ್ಯ ವಿಷಯದ ಪ್ರಶ್ನೊತ್ತರ ಮತ್ತಿತರ ಮಾಹಿತಿಯೂ ಇರುತ್ತದೆ. ಮಕ್ಕಳಿಗೂ ಇದರಲ್ಲಿ ಬರೆಯಲು ಅವಕಾಶವಿದ್ದು, ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಶಿಕ್ಷ ಕರಾದ ಶಿವಕುಮಾರ್‌, ಪಾಟೀಲ್‌, ಸವಿತಾಶ್ರೇಷ್ಠಿ, ಶಶಿಧರ್‌ ಮತ್ತಿತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ