ಆ್ಯಪ್ನಗರ

ಮಕ್ಕಳ ಆರೋಗ್ಯಕ್ಕೆ ಕಾಳಜಿ ವಹಿಸಿ

ಚೈತನ್ಯಯುತ ಹಾಗೂ ಸದೃಢ ಸಮಾಜ ನಿರ್ಮಾಣಕ್ಕೆ ಮಹಿಳೆಯರ ಕೊಡುಗೆ ಹೆಚ್ಚಿದ್ದು ತಾಯಿಸ್ಥಾನದ ಪಾತ್ರವನ್ನು ಸಮರ್ಥವಾಗಿ ನಿರ್ವಹಿಸಿ ಆರೋಗ್ಯಪೂರ್ಣ ಮಕ್ಕಳನ್ನು ಕೊಡುಗೆಯಾಗಿ ನೀಡಿ ಎಂದು ಮಕ್ಕಳತಜ್ಞ ಡಾ.ಮನು ಹೇಳಿದರು.

Vijaya Karnataka 11 Sep 2019, 5:00 am
ಬೀರೂರು: ಚೈತನ್ಯಯುತ ಹಾಗೂ ಸದೃಢ ಸಮಾಜ ನಿರ್ಮಾಣಕ್ಕೆ ಮಹಿಳೆಯರ ಕೊಡುಗೆ ಹೆಚ್ಚಿದ್ದು ತಾಯಿಸ್ಥಾನದ ಪಾತ್ರವನ್ನು ಸಮರ್ಥವಾಗಿ ನಿರ್ವಹಿಸಿ ಆರೋಗ್ಯಪೂರ್ಣ ಮಕ್ಕಳನ್ನು ಕೊಡುಗೆಯಾಗಿ ನೀಡಿ ಎಂದು ಮಕ್ಕಳತಜ್ಞ ಡಾ.ಮನು ಹೇಳಿದರು.
Vijaya Karnataka Web 9BRR1_35


ಪಟ್ಟಣದ ರೋಟರಿ ಸಂಸ್ಥೆ ವತಿಯಿಂದ ಇಲ್ಲಿನ ರೋಟರಿ ಭವನದಲ್ಲಿಭಾನುವಾರ ಆಯೋಜಿಸಿದ್ದ ಸ್ತನ್ಯಪಾನ ಸಪ್ತಾಹ ಅರಿವು ಕಾರ್ಯಕ್ರಮದಲ್ಲಿತಾಯಿಹಾಲಿನ ಮಹತ್ವ ಕುರಿತು ಮಾತನಾಡಿದರು.

ನಿಗದಿತ ಸಮಯಕ್ಕೆ ತಪಾಸಣೆ ಮತ್ತು ಮುಂಜಾಗರೂಕತೆ ವಹಿಸುವ ಮೂಲಕ ಮಕ್ಕಳ ಆರೋಗ್ಯಕ್ಕೆ ಕುತ್ತು ಬರದಂತೆ ಎಚ್ಚರಿಕೆ ವಹಿಸಬೇಕು. ತಾಯ್ತನದ ಜವಾಬ್ದಾರಿ ದೇಹಸೌಂದರ್ಯಕ್ಕಿಂತ ಮಿಗಿಲಾದದ್ದು. ಮಕ್ಕಳಿಗೆ ಎದೆಹಾಲು ಕೊರತೆಯಾಗದಂತೆ ಎಚ್ಚರವಹಿಸಬೇಕೆಂದು ತಿಳಿಸಿದರು.

ವೈದ್ಯ ಡಾ.ಶ್ರೀನಿವಾಸಮೂರ್ತಿ ಮಾತನಾಡಿ, ಸ್ತ್ರೀ ತನ್ನ ತಾಯ್ತನದ ಅವಧಿಯಲ್ಲಿದೈಹಿಕ ಹಾಗೂ ಮಾನಸಿಕವಾಗಿ ಸದೃಡವಾಗಿರಲು ಕುಟುಂಬದ ಸಹಕಾರ ಹೆಚ್ಚಿದ್ದು ಮಕ್ಕಳ ಆರೋಗ್ಯಕ್ಕೆ ಸ್ತನ್ಯಪಾನ ಅತ್ಯವಶ್ಯಕ ಮತ್ತು ಅಮೂಲ್ಯ ಕೊಡುಗೆಯಾಗಿದೆ ಎಂದರು.

ಸಭೆಯಲ್ಲಿಪಾಲ್ಗೊಂಡಿದ್ದ ಮಹಿಳೆಯರು ವೈದ್ಯರಲ್ಲಿಪ್ರಶ್ನಿಸಿ ಉತ್ತರ ಪಡೆದರು. ರೋಟರಿ ಅಧ್ಯಕ್ಷ ಗಂಗಾಧರ್‌ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ರೋಟರಿಯ ಬಾಬಣ್ಣ, ರವಿಶಂಕರ್‌,ಇನ್ನರ್‌ವ್ಹೀಲ್‌ ಅಧ್ಯಕ್ಷೆ ಗೌರಿಪ್ರಸನ್ನ, ಕಾರ್ಯದರ್ಶಿ ಉಷಾಸ್ವಾಮಿ, ರೋಟರಿ ಹಾಗೂ ಇನ್ನರ್‌ವ್ಹೀಲ್‌ ಸದಸ್ಯರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ