ಆ್ಯಪ್ನಗರ

ಪರಿಸರ ಸಂರಕ್ಷ ಣೆ ಎಲ್ಲರ ಹೊಣೆ

ಪರಿಸರ ಸಂರಕ್ಷ ಣೆಯಲ್ಲಿ ಎಲ್ಲರ ಹೊಣೆಗಾರಿಕೆ ಇದೆ ಎಂಬುದನ್ನು ಅರಿಯಬೇಕು ಎಂದು ಬಡಗಬೈಲು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷ ಕ ಆರ್‌.ನಾಗರಾಜ್‌ ಹೇಳಿದರು.

Vijaya Karnataka 19 Jun 2019, 5:00 am
ನರಸಿಂಹರಾಜಪುರ: ರಿಸರ ಸಂರಕ್ಷ ಣೆಯಲ್ಲಿ ಎಲ್ಲರ ಹೊಣೆಗಾರಿಕೆ ಇದೆ ಎಂಬುದನ್ನು ಅರಿಯಬೇಕು ಎಂದು ಬಡಗಬೈಲು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷ ಕ ಆರ್‌.ನಾಗರಾಜ್‌ ಹೇಳಿದರು.
Vijaya Karnataka Web CKM-16NRP2


ಅವರು ಪಟ್ಟಣದ ಅಂಬೇಡ್ಕರ್‌ ನಗರದಲ್ಲಿರುವ ಅಂಗನವಾಡಿಯಲ್ಲಿ ಧ.ಗ್ರಾ.ಯೋಜನೆಯ ಬಸ್ತಿಮಠದ ಜ್ಞಾನವಿಕಾಸ ಕೇಂದ್ರದ ಆಶ್ರಯದಲ್ಲಿ ಭಾನುವಾರ ನಡೆದ ಪರಿಸರ ಕಾರ್ಯಕ್ರಮದಲ್ಲಿ ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಪ್ರಕೃತಿದತ್ತವಾದ ಪರಿಸರವನ್ನು ಹಾಳು ಮಾಡಬಾರದು. ಇಂದು ಜನಸಂಖ್ಯೆ ಹೆಚ್ಚಳ, ನಗರೀಕರಣದಿಂದ ಕಾಡು ನಾಶವಾಗುತ್ತಿದೆ. ಪರಿಸರ ನಾಶದಿಂದಲೇ ಇಂದು ಅತಿವೃಷ್ಠಿ, ಆನಾವೃಷ್ಠಿಯಾಗುತ್ತಿದೆ. ಪರಿಸರ ಸಮಲೋತನವನ್ನು ಕಾಪಾಡಬೇಕಾಗಿದೆ ಎಂದರು.

ಧ.ಗ್ರಾ.ಯೋಜನೆಯ ಮೇಲ್ವಿಚಾರಕ ರಮೇಶ್‌, ಜ್ಞಾನವಿಕಾಸ ಕೇಂದ್ರದ ಅಧ್ಯಕ್ಷೆ ನಾಗರತ್ನ, ಸಂಯೋಜಕಿ ಭಾನುಮತಿ, ಸೇವಾ ಪ್ರತಿನಿಧಿ ವೀಣಾ ಮತ್ತಿತರರು ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ