ಆ್ಯಪ್ನಗರ

ಟ್ಯಾಂಕರ್‌ ಲಾರಿ ಅವಘಡ: ಶೀಘ್ರ ಪರಿಹಾರಕ್ಕೆ ಆಗ್ರಹ

ಗಿರಿಯಾಪುರ ಗ್ರಾಮದಲ್ಲಿ ಇತ್ತೀಚೆಗೆ ಸಂಭವಿಸಿದ ಟ್ಯಾಂಕರ್‌ ಲಾರಿ ಬೆಂಕಿ ಅವಘಡದಲ್ಲಿ ಆಸ್ತಿ ಕಳೆದುಕೊಂಡ ಸಾರ್ವಜನಿಕರಿಗೆ ಜಿಲ್ಲಾಧಿಕಾರಿಗಳು ಪರಿಹಾರ ಕೊಡಿಸುವಲ್ಲಿ ಶ್ರಮಿಸಲಿ ಎಂದು ಬಿಜೆಪಿ ಹಿಂದುಳಿದ ವರ್ಗಗಳ ಭಾಗದ ಮುಖಂಡ ಮತಿಘಟ್ಟ ಎಂ.ಪಿ. ನಾರಾಯಣಸ್ವಾಮಿ ಒತ್ತಾಯಿಸಿದ್ದಾರೆ.

Vijaya Karnataka 28 Jun 2018, 5:00 am
ಕಡೂರು: ಗಿರಿಯಾಪುರ ಗ್ರಾಮದಲ್ಲಿ ಇತ್ತೀಚೆಗೆ ಸಂಭವಿಸಿದ ಟ್ಯಾಂಕರ್‌ ಲಾರಿ ಬೆಂಕಿ ಅವಘಡದಲ್ಲಿ ಆಸ್ತಿ ಕಳೆದುಕೊಂಡ ಸಾರ್ವಜನಿಕರಿಗೆ ಜಿಲ್ಲಾಧಿಕಾರಿಗಳು ಪರಿಹಾರ ಕೊಡಿಸುವಲ್ಲಿ ಶ್ರಮಿಸಲಿ ಎಂದು ಬಿಜೆಪಿ ಹಿಂದುಳಿದ ವರ್ಗಗಳ ಭಾಗದ ಮುಖಂಡ ಮತಿಘಟ್ಟ ಎಂ.ಪಿ. ನಾರಾಯಣಸ್ವಾಮಿ ಒತ್ತಾಯಿಸಿದ್ದಾರೆ.
Vijaya Karnataka Web tanker truck loom demand for quick relief
ಟ್ಯಾಂಕರ್‌ ಲಾರಿ ಅವಘಡ: ಶೀಘ್ರ ಪರಿಹಾರಕ್ಕೆ ಆಗ್ರಹ


ಅವರು ಬುಧವಾರ ಮಾಧ್ಯಮಗಳೊಂದಿಗೆ ಮಾತನಾಡಿ, ಬೆಂಕಿ ಅವಘಡ ಸಂಭವಿಸಿದ ಸನಿಹದಲ್ಲೇ ಇರುವ ನಾಲ್ಕೈದು ಮನೆಗಳಿಗೆ ಹಾನಿಯಾಗಿದ್ದು, ಗ್ರಾಮ ಪಂಚಾಯಿತಿಯ ಆಸ್ತಿಯೂ ನಾಶವಾಗಿದೆ. ಇದಕ್ಕೆ ಸರಕಾರದಿಂದ ಪರಿಹಾರ ಕೊಡಿಸುವಲ್ಲಿ ಜಿಲ್ಲಾಧಿಕಾರಿಗಳು ತಕ್ಷ ಣವೇ ಕಾರ್ಯಪ್ರವೃತ್ತರಾಗಬೇಕು. ಪೆಟ್ರೋಲ್‌ ಮತ್ತಿತರ ಇಂಧನವನ್ನು ಸಾಗಿಸುವ ಲಾರಿಗಳನ್ನು ಜನನಿಬಿಡ ಮಾರ್ಗಗಳಿಂದ ಹೊರತಾಗಿ ಪ್ರತ್ಯೇಕ ಮಾರ್ಗದಲ್ಲಿ ಸಂಚರಿಸಲು ಅನುವು ಮಾಡಿಕೊಡಬೇಕು. ಪೆಟ್ರೋಲಿಯಂ ಕಾಪೋರ್‍ರೇಷನ್‌ ಇಲಾಖೆ ಜತೆ ಜಿಲ್ಲಾಧಿಕಾರಿಗಳು ಈ ಸಂಬಂಧ ಚರ್ಚಿಸಿ ಅಂತಹ ಲಾರಿಗಳಿಗೆ ಮಾರ್ಗ ನಿಗಧಿಪಡಿಸಲು ಒತ್ತಾಯಿಸಿದ್ದಾರೆ.

ಸಾರಿಗೆಯೇತರ ಮತ್ತು ಸರಕು ಸಾಗಾಣಿಕೆಯ ವಾಹನಗಳಿಗೆ ವೇಗ ನಿಯಂತ್ರಕ ಅಳವಡಿಸಬೇಕು. ಈ ಲಾರಿಗಳು ಸಂಚರಿಸುವ ಮಾರ್ಗದಲ್ಲಿ ಅಪಾಯಕಾರಿ ತಿರುವುಗಳಿದ್ದರೆ ಅಲ್ಲಿ ಸೂಚನಾಫಲಕಗಳನ್ನು ಹಾಕಬೇಕು. ಇದರಿಂದ ಅಪಘಾತ ಮತ್ತಿತರ ದುರಂತಗಳನ್ನು ತಡೆಯಬಹುದು ಎಂದಿದ್ದಾರೆ.

ಗಿರಿಯಾಪುರ ಗ್ರಾಮದಲ್ಲಿ ಲಾರಿ ಅಪಘಾತವಾದ ಸ್ಥಳದಲ್ಲಿ ಜಡ್‌ ಆಕಾರದಲ್ಲಿ ತಿರುವು ಇದೆ. ಲೋಕೋಪಯೋಗಿ ಇಲಾಖೆಯು ಈ ತಿರುವನ್ನು ನೇರ ರಸ್ತೆಯನ್ನಾಗಿ ಮಾಡಲು ಅವಕಾಶವಿದೆ. ಆ ನಿಟ್ಟಿನಲ್ಲಿ ಸ್ಥಳ ಪರಿಶೀಲನೆ ನಡೆಸಿ ಇಲಾಖೆ ಕೂಡಲೇ ರಸ್ತೆಯನ್ನು ನೇರ ಮಾಡಿದರೆ ಭವಿಷ್ಯದಲ್ಲಿ ನಡೆಯಬಹುದಾದ ಇನ್ನಷ್ಟು ಅನಾಹುತಗಳನ್ನು ತಡೆಯಬಹುದು ಎಂದು ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ