ಆ್ಯಪ್ನಗರ

ವರದಕ್ಷಿಣೆ ಕಿರುಕುಳ ನೀಡಿ ವಿದೇಶಕ್ಕೆ ಪರಾರಿಯಾಗಿದ್ದವನ ಬಂಧನ

ವರದಕ್ಷಿಣೆ ಪ್ರಕರಣ ದಾಖಲಾಗುತ್ತಿದ್ದಂತೆ ವಿದೇಶಕ್ಕೆ ಪಲಾಯನ ಮಾಡಿದ್ದ ಪತಿ ಮಹಾಶಯ ವಾಪಸ್‌ ಬಂದಾಗ ಮಂಗಳೂರಿನ ಬಜಪೆ ವಿಮಾನ ನಿಲ್ದಾಣದಲ್ಲಿ ಮೂಡಿಗೆರೆ ಪೊಲೀಸರು ಆರೋಪಿಯನ್ನು ಬಂಧಿಸಿದ ಘಟನೆ ಶುಕ್ರವಾರ ಸಂಜೆ ನಡೆದಿದೆ.

Vijaya Karnataka 9 Jun 2019, 5:00 am
ಮೂಡಿಗೆರೆ: ವರದಕ್ಷಿಣೆ ಪ್ರಕರಣ ದಾಖಲಾಗುತ್ತಿದ್ದಂತೆ ವಿದೇಶಕ್ಕೆ ಪಲಾಯನ ಮಾಡಿದ್ದ ಪತಿ ಮಹಾಶಯ ವಾಪಸ್‌ ಬಂದಾಗ ಮಂಗಳೂರಿನ ಬಜಪೆ ವಿಮಾನ ನಿಲ್ದಾಣದಲ್ಲಿ ಮೂಡಿಗೆರೆ ಪೊಲೀಸರು ಆರೋಪಿಯನ್ನು ಬಂಧಿಸಿದ ಘಟನೆ ಶುಕ್ರವಾರ ಸಂಜೆ ನಡೆದಿದೆ.
Vijaya Karnataka Web the arrest of a man who escaped abroad by dowry harassment
ವರದಕ್ಷಿಣೆ ಕಿರುಕುಳ ನೀಡಿ ವಿದೇಶಕ್ಕೆ ಪರಾರಿಯಾಗಿದ್ದವನ ಬಂಧನ


ಪಟ್ಟಣದ ನಿವಾಸಿ, ಪ್ರಸ್ತುತ ಬೆಂಗಳೂರಿನಲ್ಲಿ ವಾಸವಾಗಿರುವ ವಾಜೀದ್‌ ಅವರ ಪುತ್ರಿಯನ್ನು ಗೋಣಿಬೀಡಿನ ತಾಜುದ್ದೀನ್‌ ಎಂಬಾತನಿಗೆ ಮೂರುವರೆ ವರ್ಷದ ಹಿಂದೆ ಮದುವೆ ಮಾಡಿಕೊಡಲಾಗಿತ್ತು. ಬಳಿಕ ಕೆಲ ದಿನದ ನಂತರ ಪತಿ ವಿದೇಶಕ್ಕೆ ಉದ್ಯೋಗಕ್ಕಾಗಿ ತೆರಳಿದ್ದ ವೇಳೆ ಪತಿಯ ಅಣ್ಣ, ಯುವತಿಗೆ ಲೈಂಗಿಕ ಕಿರುಕುಳ ನೀಡಿದ್ದಲ್ಲದೇ ಪತಿಯ ಅಕ್ಕ ಹಾಗೂ ಅಣ್ಣ ಇಬ್ಬರು ಸೇರಿ ಹಿಂಸೆ ನೀಡಿದ್ದರು ಎನ್ನಲಾಗಿದೆ.

ನಂತರ ವಿದೇಶದಿಂದ ಬಂದ ಪತಿಯೂ ಸಹ ವರದಕ್ಷಿಣೆ ತರುವಂತೆ ಪತ್ನಿಗೆ ಕಿರುಕುಳ ನೀಡಿದ್ದ. ಇದರಿಂದ ಬೇಸತ್ತ ಯುವತಿ ತನ್ನ ತಂದೆ ತಾಯಿಗೆ ವಿಚಾರ ತಿಳಿಸಿದಾಗ ಸಮುದಾಯದ ಪ್ರಮುಖರೆಲ್ಲಾ ಸೇರಿ ಹಲವು ಬಾರಿ ರಾಜಿ ಪಂಚಾಯಿತಿ ಮಾಡಿದ್ದರು. ಇದಕ್ಕೆ ಪತಿ ಒಪ್ಪದಿದ್ದಾಗ ಮೂಡಿಗೆರೆ ಪೊಲೀಸರಿಗೆ ದೂರು ನೀಡಿದ್ದರು.

ಪ್ರಕರಣ ದಾಖಲಾದ ವಿಷಯ ತಿಳಿದ ತಾಜುದ್ದೀನ್‌ ರಾತೋರಾತ್ರಿ ವಿದೇಶಕ್ಕೆ ಪರಾರಿಯಾಗಿದ್ದ. ಆತನ ಅಣ್ಣ ಹಾಗೂ ಅಕ್ಕ ಜಾಮೀನು ಪಡೆದುಕೊಂಡಿದ್ದರು. ಈಗ ಪ್ರಕರಣ ಮರೆತು ಹೋಗಿರಬಹುದೆಂದು ಆರೋಪಿ ತಾಜುದ್ದೀನ್‌ ಶುಕ್ರವಾರ ವಿದೇಶದಿಂದ ಬಂದಾಗ, ವಿಷಯ ತಿಳಿದ ಪೊಲೀಸರು ಆರೋಪಿಯನ್ನು ಬಂಧಿಸಿ ಕೋರ್ಟ್‌ಗೆ ಹಾಜರುಪಡಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ