ಆ್ಯಪ್ನಗರ

ದೊಡ್ಡ ಮನಸ್ಸಿನ ಸಣ್ಣ ಕಾರ್ಯ ಶ್ರೇಷ್ಠ

ಸಣ್ಣ ಮನಸ್ಸಿನಿಂದ ಮಾಡುವ ದೊಡ್ಡ ಕೆಲಸಗಳಿಗಿಂತ ದೊಡ್ಡ ಮನಸ್ಸಿನಿಂದ ಮಾಡುವ ಸಣ್ಣ ಕಾರ್ಯಗಳು ಶ್ರೇಷ್ಠವಾದದ್ದು ಎಂದು ಮಾಜಿ ಶಾಸಕ ವೈ.ಎಸ್‌.ವಿ ದತ್ತ ಹೇಳಿದರು.

Vijaya Karnataka 15 Dec 2018, 5:00 am
ಕಡೂರು : ಸಣ್ಣ ಮನಸ್ಸಿನಿಂದ ಮಾಡುವ ದೊಡ್ಡ ಕೆಲಸಗಳಿಗಿಂತ ದೊಡ್ಡ ಮನಸ್ಸಿನಿಂದ ಮಾಡುವ ಸಣ್ಣ ಕಾರ್ಯಗಳು ಶ್ರೇಷ್ಠವಾದದ್ದು ಎಂದು ಮಾಜಿ ಶಾಸಕ ವೈ.ಎಸ್‌.ವಿ ದತ್ತ ಹೇಳಿದರು.
Vijaya Karnataka Web CKM-14KDR2


ತಾಲೂಕಿನ ಯಗಟಿ ಗ್ರಾಮದಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಹಳೇ ವಿದ್ಯಾರ್ಥಿಗಳ ಸಮ್ಮಿಲನ ಫೌಂಡೇಶನ್‌ನಿಂದ ಶುಕ್ರವಾರ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ, ಹಳೇ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಮ್ಮಿಲನ ಫೌಂಡೇಶನ್‌ ಹೆಸರಿನಲ್ಲಿ ಹಳೇ ವಿದ್ಯಾರ್ಥಿಗಳು ಸೇರಿ ಶಾಲೆಯ ಅಭಿವೃದ್ಧಿ, ಉತ್ತಮ ಅಂಕಗಳಿಸಿದ ಮಕ್ಕಳಿಗೆ ಪುರಸ್ಕಾರ, ಪುಸ್ತಕ ಸಾಮಗ್ರಿಗಳ ವಿತರಣೆ, ಗುರುಗಳಿಗೆ ಗುರುವಂದನೆ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ದೊಡ್ಡ ಕಾರ್ಯ ಮಾಡಿದ್ದಾರೆ ಎಂದು ಪ್ರಶಂಸಿದರು.

ಆದರೆ ಶಾಸಕನಾಗಿ ತಾವು ಕೋಟ್ಯಂತರ ಅನುದಾನದಲ್ಲಿ ಕ್ಷೇತ್ರದೊಳಗೆ ಅಭಿವೃದ್ಧಿ ಮಾಡಿದ್ದೇನೆ. ಸಣ್ಣ ಮನಸ್ಸಿನಿಂದ ಮಾಡಿರುವ ದೊಡ್ಡ ಕೆಲಸವಾದರೂ ಇಲ್ಲಿ ನಮ್ಮ ಸ್ವಾರ್ಥ ತುಂಬಿರುತ್ತದೆ. ಆದರೆ ಸಮ್ಮಿಲನ ಫೌಂಡೇಶನ್‌ ಮಾಡಿರುವ ಕೆಲಸಗಳು ಸಾರ್ಥಕವಾಗಿದ್ದು, ಇತರರಿಗೆ ಆದರ್ಶವಾಗಿವೆ ಎಂದು ಶ್ಲಾಘಿಸಿದರು.

ಫೌಂಡೇಶನ್‌ ತಮಗೆ 'ಸಾಧಕ ಮಿತ್ರ' ಪ್ರಶಸ್ತಿ ನೀಡಿ ಗೌರವಿಸಿದೆ. ನಾನು ಈ ಶಾಲೆಯ ಮೊದಲ ಬ್ಯಾಚ್‌ ವಿದ್ಯಾರ್ಥಿಯಾಗಿ ಸೇರಿಕೊಂಡು ಕಷ್ಟಪಟ್ಟು ಮೇಲೆ ಬಂದವನು. ಆಗ ಓದುವುದಕ್ಕೆ ಸೌಲಭ್ಯಗಳ ಕೊರತೆಯಿತ್ತು, ಆದರೆ ಇಂದು ಸಮಸ್ಯೆಗಳಿಲ್ಲ. ಇಂದಿನ ಮಕ್ಕಳಿಗೆ ಸೌಕರ್ಯ ಹೆಚ್ಚಾಗಿದೆ. ಇದನ್ನು ಮಕ್ಕಳು ಹಾಗೂ ಪೋಷಕರು ಅರಿತುಕೊಳ್ಳಬೇಕು ಎಂದರು.

ಗ್ರಾಮದ ಅಭಿವೃದ್ಧಿಗೆ ಗ್ರಾಮಸ್ಥರು ತಮ್ಮ ಸಣ್ಣತನ ಬಿಟ್ಟು ಒಂದಾಗಿ ಶ್ರಮಿಸಬೇಕು. ಇಲ್ಲಿನ ಬಸ್‌ ನಿಲ್ದಾಣದ ಅಭಿವೃದ್ಧಿಗೆ ರಾಜಕೀಯ ಮಾಡುವುದರಿಂದ ಅಭಿವೃದ್ಧಿ ಕುಂಠಿತವಾಗುತ್ತದೆ ಎಂದು ಕಿವಿಮಾತು ಹೇಳಿದರು.

2005ರ ಹಳೇ ವಿದ್ಯಾರ್ಥಿಗಳ ಸಂಘದ ಚಂದ್ರಶೇಖರ್‌, ಕಿರಣ್‌ಕುಮಾರ್‌, ಸಮ್ಮಿಲನ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು. ಶಾಲೆಯ ಗುರುಗಳನ್ನು ಸನ್ಮಾನಿಸಿ ಗೌರವಿಸಿದರು. ಯಗಟಿ ಪಿಎಸ್‌ಐ ಸುನೀತಾ ಉಪನ್ಯಾಸ ನೀಡಿದರು. ಮಲ್ಲಿಕಾರ್ಜುನ್‌ ಅಧ್ಯಕ್ಷ ತೆ ವಹಿಸಿ ಮಾತನಾಡಿದರು. ಕಾಲೇಜಿನ ಪ್ರಾಚಾರ್ಯ ರಾಜಪ್ಪ, ಮುಖ್ಯ ಶಿಕ್ಷ ಕ ಚಂದ್ರಮೌಳಿ, ಜಿಯಾಉಲ್ಲಾ, ಷಡಕ್ಷ ರ ಸ್ವಾಮಿ, ಸತೀಶ್‌ಕುಮಾರ್‌, ರೇವಣ್ಣ ಮತ್ತಿತರರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ