ಆ್ಯಪ್ನಗರ

ಬಿಜೆಪಿ ಆರಂಭವಾಗಿದ್ದೇ 370 ವಿಧಿ ರದ್ದತಿಗೆ

ದೇಶ ವಿಭಜನೆಯಿಂದ ಭೂಲೋಕವಾಗಿದ್ದ ಕಾಶ್ಮೀರ ಭಯೋತ್ಪಾದಕರ ತಾಣವಾಯಿತು. ವಿಧಿ 370ಯಿಂದ ಅಲ್ಲಿನ ದೇಶವಾಸಿಗಳು ನಿರಾಶ್ರಿತರಾಗಬೇಕಾಯಿತು ಎಂದು ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ.ರವಿ ಹೇಳಿದರು.

Vijaya Karnataka 21 Sep 2019, 5:00 am
ಚಿಕ್ಕಮಗಳೂರು: ದೇಶ ವಿಭಜನೆಯಿಂದ ಭೂಲೋಕವಾಗಿದ್ದ ಕಾಶ್ಮೀರ ಭಯೋತ್ಪಾದಕರ ತಾಣವಾಯಿತು. ವಿಧಿ 370ಯಿಂದ ಅಲ್ಲಿನ ದೇಶವಾಸಿಗಳು ನಿರಾಶ್ರಿತರಾಗಬೇಕಾಯಿತು ಎಂದು ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ.ರವಿ ಹೇಳಿದರು.
Vijaya Karnataka Web 20SHIVUP7_35


ನಗರದ ರಂಗಣ್ಣನವರ ಛತ್ರದಲ್ಲಿಶುಕ್ರವಾರ ಏರ್ಪಡಿಸಿದ್ದ ಆರ್ಟಿಕಲ್‌ 370, 35 ಎ ವಿಚಾರಗೋಷ್ಠಿ ಉದ್ಘಾಟಿಸಿ ಅವರು ಮಾತನಾಡಿದರು.ದೇಶಕ್ಕೆ ನಿರಾಶ್ರಿತರಾಗಿ ಬಂದವರಿಗೆ ಇಲ್ಲಿಆಶ್ರಯ ನೀಡಲಾಗಿದೆ. ಆದರೆ, ಇಲ್ಲಿಯೇ ಹುಟ್ಟಿ ಬೆಳೆದ ಕಾಶ್ಮೀರಿ ಹಿಂದುಗಳು ಇಂದು ನಿರಾಶ್ರಿತರಾಗಬೇಕಾಗಿದೆ. ಅನೇಕ ಕಾಂಗ್ರೆಸ್‌ ಮುಖಂಡರು ಮತ್ತು ಸಂವಿಧಾನ ರಚನೆಕಾರರಾದ ಡಾ.ಅಂಬೇಡ್ಕರ್‌ ವಿರೋಧದ ನಡುವೆಯೂ ಅಂದಿನ ಪ್ರಧಾನಿ ನೆಹರು ಆರ್ಟಿಕಲ್‌ 370 ನ್ನು ತಾತ್ಕಾಲಿಕವಾಗಿ ಸೇರಿಸುವುದಾಗಿ ಹೇಳಿ ಸೇರಿಸಿದರು. ಆದರೆ, 72 ವರ್ಷವಾದರೂ ಅದು ತೆರವಾಗಲಿಲ್ಲ.ವಿಶ್ವ ಸಂಸ್ಥೆಯಲ್ಲಿಆ ವ್ಯಾಜ್ಯ ಇನ್ನೂ ಇತ್ಯರ್ಥವಾಗಲಿಲ್ಲಎಂದು ಹೇಳಿದರು. ವಿಧಿ 370ರಿಂದ ಕಾಶ್ಮೀರದಲ್ಲಿಯಾರಿಗೂ ಲಾಭವಾಗಿಲ್ಲ. ಆದರೆ, ಮೂರು ಕುಟುಂಬಗಳ ಕಪಿಮುಷ್ಠಿಯಲ್ಲಿಆ ರಾಜ್ಯ ಸಿಲುಕಿತ್ತು ಎಂದು ಹೇಳಿದರು.

ಮಾಜಿ ಎಂಎಲ್ಸಿ ಭಾನುಪ್ರಕಾಶ್‌ ಮಾತನಾಡಿ, ಬಿಜೆಪಿ ಹುಟ್ಟು ಆರಂಭವಾಗಿದ್ದು ಅಧಿಕಾರ ಮಾಡಲು ಅಲ್ಲ. ವೋಟಿನ ರಾಜಕಾರಣಕ್ಕೂ ಅಲ್ಲ. ಎಂಎಲ್‌ಎ ಗಳನ್ನು ಸೃಷ್ಟಿ ಮಾಡಲು ಅಥವಾ ದೇಶದ ನೇತೃತ್ವ ವಹಿಸಲು ಅಲ್ಲ. ಬದಲಾಗಿ ಕಾಶ್ಮೀರದಲ್ಲಿದ್ದ 370 ವಿಧಿ ರದ್ದು ಮಾಡುವುದೇ ಆಗಿತ್ತು. ಇದಕ್ಕಾಗಿ ಹೋರಾಟ ಮಾಡಿದ್ದ ಶ್ಯಾಂಪ್ರಕಾಶ್‌ ಮುಖರ್ಜಿ ಅವರ ಕನಸು ಈಗ ಸಾಕಾರವಾಗಿದೆ. ಇದು ಕೂಡ ಅಚ್ಚೆ ದಿನ ಎಂದು ನಾನು ಹೇಳ ಬಯಸುತ್ತೇನೆ ಎಂದರು.

ಮಾಜಿ ಸಭಾಪತಿ ಡಿ.ಎಚ್‌.ಶಂಕರಮೂರ್ತಿ ಮಾತನಾಡಿದರು. ಬಿಜೆಪಿ ಜಿಲ್ಲಾಧ್ಯಕ್ಷ ಡಿ.ಎನ್‌.ಜೀವರಾಜ್‌ ಅಧ್ಯಕ್ಷತೆ ವಹಿಸಿದ್ದರು. ಎಚ್‌.ಡಿ.ತಮ್ಮಯ್ಯ ಸ್ವಾಗತಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ